ಸಂಜಯ್ ದತ್ ಗೆ ಶ್ವಾಸಕೋಶ ಕ್ಯಾನ್ಸರ್
ಮುಂಬೈ, ಆಗಸ್ಟ್ 12: ಬಾಲಿವುಡ್ ಮುನ್ನಾಭಾಯ್
ಸಂಜಯ್ ದತ್ ಅವರು ೩ ನೇ ಹಂತ ಶ್ವಾಸಕೋಶ
ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ಮೂರು ದಿನಗಳ ಹಿಂದೆ ಉಸಿರಾಟ ಸಮಸ್ಯೆ, ಎದೆಭಾಗದಲ್ಲಿ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮುಂಬೈ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಕೊರೊನಾ ಸೇರಿದಂತೆ ಎಲ್ಲಾ ವೈದ್ಯಕೀಯ ಪರೀಕ್ಷೆಗಳಿಗೆ ಅವರನ್ನು ಒಳಪಡಿಸಲಾಗಿತ್ತು.
ಪರೀಕ್ಷೆಗಳ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದ್ದು, ಅಲ್ಲದೆ ದತ್ ೩ನೇ ಹಂತದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದುಬಂದಿದೆ.
ಆದರೆ, ಸಂಜಯ್ ದತ್ ಟ್ವೀಟರ್ ನಲ್ಲಿ “ವೈದ್ಯಕೀಯ ಚಿಕಿತ್ಸೆಗಾಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇನೆ. ಕುಟುಂಬ, ಸ್ನೇಹಿತರು ನನ್ನೊಂದಿಗಿದ್ದಾರೆ. ಯಾರೊಬ್ಬರು ಚಿಂತೆ ಪಡಬೇಕಾಗಿಲ್ಲ. ಅನಗತ್ಯಊಹೆಮಾಡದಂತೆ ಶ್ರೇಯೋಭಿಲಾಷಿಗಳಿಗೆ ಕೋರುತ್ತೇನೆ. ನಿಮ್ಮ ಪ್ರೇಮ, ಆರ್ಶಿವಾದಗಳಿಂದ ನಾನು ಶೀಘ್ರದಲ್ಲಿಯೇ ಮರಳಿ ಬರುತ್ತೇನೆ” ಎಂದು ಟ್ವೀಟ್ ಮಾಡಿದ್ದರು. ಇದರಿಂದ ಸಂಜಯ್ ದತ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಗಳಿಗೆ ಬಲ ಬಂದಿದೆ.