ನಟ ಕಮಲ್ ಹಾಸನ್ ಗೆ ಕೋವಿಡ್ , ಆಸ್ಪತ್ರೆಗೆ ದಾಖಲು
ಚೆನ್ನೈ, ನ 23: ದಕ್ಷಿಣ ಭಾರತದ ಜನಪ್ರಿಯ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕೋವಿಡ್ ಸೋಂಕು ತಗುಲಿದೆ.
ಸದ್ಯ ಅವರು ಚನ್ನೈಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತಂಕ ಪಡಬೇಕಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅವರಿಗೆ ಲಘು ಕೆಮ್ಮು ಕಾಣಿಸಿಕೊಂಡಿದೆ, ಇತ್ತೀಚೆಗಷ್ಟೇ ಅವರು ಅಮೆರಿಕ ಪ್ರವಾಸದಿಂದರಾಜ್ಯಕ್ಕೆ ವಾಪಸಾಗಿದ್ದರು.
ದೇಶದಲ್ಲಿ ಕರೋನಾ ಅಬ್ಬರ ಇನ್ನೂ ಪೂರ್ಣವಾಗಿ ನಿವಾರಣೆಯಾಗಿಲ್ಲ ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ಮತ್ತು ಎಚ್ಚರಿಕೆ ವಹಿಸಬೇಕೆಂದು ನಟ ಕಮಲ್ ಹಾಸನ್ ಟ್ವೀಟ್ ಮೂಲಕ ಸಾರ್ವಜನಿಕವಾಗಿ ಮನವಿ ಮಾಡಿಕೊಂಡಿದ್ದಾರೆ.
ಅಭಿಮಾನಿಗಳ ಹಾರೈಕೆ ದೇವರ ಕರುಣೆಯಿಂದ, ಶೀಘ್ರ ಗುಣಮುಖರಾಗಿ ಬರುತ್ತೇನೆ ಯಾರೊಬ್ಬರು ಆರೋಗ್ಯದ ಬಗ್ಗೆ ಕಳವಳ ಮತ್ತು ಆತಂಕಪಡಬೇಕಾಗಿಲ್ಲ ಎಂದು ನಟ ಕಮಲ್ ಹಾಸನ್ ಸಾಮಾಜಿಕ ಜಾಲ ತಾಣದ ಮೂಲಕ ಹೇಳಿ ಕೊಂಡಿದ್ದಾರೆ.