ಕೆಪಿಸಿಸಿ ಸಂಯೋಜಕ ಯಾಶೀರಖಾನ್ರವರಿಗೆ ಶುಭ ಕೋರಿದ ಕಾರ್ಯಕರ್ತರು
ಶಿಗ್ಗಾವಿ 21: ಕೆಪಿಸಿಸಿ ಸಂಯೋಜಕ ಪಕ್ಷದ ಪ್ರಭಾವಿ ಮುಖಂಡ ಯಾಶೀರಖಾನ್ ಪಠಾಣ ಅವರ 42 ನೆಯ ಜನ್ಮದಿನದ ಶುಭಾಶಯ ಕೋರಿ ಸರ್ಕಾರ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ತಾಲೂಕಾ ಪಕ್ಷದ ವಕ್ತಾರ ಮಂಜುನಾಥ್ ಮಣ್ಣಣ್ಣನವರ್ ರಾಜ್ಯ ಹೈಕಮಾಂಡಗೆ ಆಗ್ರಹಿಸಿದರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ 2023ರ ಅಭ್ಯರ್ಥಿ ಹಾಗೂ ಕೆಪಿಸಿಸಿ ಸಂಯೋಜಕ ಯಾಶೀರಖಾನ ಪಠಾಣ ಅವರ 42ನೇ ಜನ್ಮದಿನವನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು ಮತಕ್ಷೇತ್ರ ಕಳೆದ 20 ವರ್ಷಗಳಿಂದ ಸದಾ ಶಾಸಕರನ್ನು ಪಡೆಯುವಲ್ಲಿ ವ್ಯತ್ಯಾಸವಾಗಿರಬಹುದು ಆದರೆ ಕಾರ್ಯಕರ್ತರು ಮಾತ್ರ ಧೃತಿಘಡದೆ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಪಕ್ಷದ ಪರವಾಗಿ ಕೆಲಸ ಮಾಡುವ ಹಲವು ಮುಖಂಡರಿದ್ದು ಜೊತೆಗೆ ಯಾಶೀರಖಾನ ಅವರಿಗೆ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ಒದಗಿಸುವ ಜೊತೆಗೆ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಬಲ ಹೆಚ್ಚಿಸುವಂತೆ ಮಂಜುನಾಥ್ ಮಣ್ಣಣ್ಣವರ ರಾಜ್ಯ ಹೈಕಮಾಂಡಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶಿಗ್ಗಾವ್ ತಾಲೂಕ ಯುವ ಕಾಂಗ್ರೆಸ್ ಅಧ್ಯಕ್ಷ ನಿಸಾರ್ ಅಹ್ಮದ್ ತೂಕಲ್ಲಿ, ಬಾಬರ್ ಬಾವಾಜಿ, ಇರ್ಫಾನ್ ಕೊಲ್ಲಾಪುರ್, ಇಕ್ಬಾಲ್ ಬುರಾನುದ್ದೀನ್, ಎಸ್ ಟಿ ಘಟಕದ ಅಧ್ಯಕ್ಷ ಅಶೋಕ್ ಓಲೆಕಾರ, ಸಂತೋಷ್ ಚಾಕಲಬ್ಬಿ, ಯುವ ನ್ಯಾಯವಾದಿ ಮಾಲತೇಶ ಸಾಲಿ, ತೊಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀರೀಶ್ ಅಂಗಡಿ, ಕಾರ್ಮಿಕ ಘಟಕದ ಅಧ್ಯಕ್ಷ ಎಂ ಎಂ ಕಾಲೇ ಬಾಗ್, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಸುಲೇಮಾನ ಖಾಜೇಖಾನವರ, ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್. ಸೋಮಣ್ಣ ಅನೇಕ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.