ಶೋಷಣೆ ಮುಕ್ತ ಸಮಾಜ ಬರಿ ಕಾನೂನಿನಿಂದ ಸಾಧ್ಯವಿಲ್ಲ ಅದು ಶಿಕ್ಷಣದಿಂದ ಸಾಧ್ಯ: ಪಾಟೀಲ
ಗದಗ : ಶೋಷಣೆ ಮುಕ್ತ ಸಮಾಜ ಹಾಗೂ ದೇಶವನ್ನಾಗಿಸಲು ಬರಿ ಕಾನೂನಿನಿಂದ ಸಾಧ್ಯವಿಲ್ಲ ಅದು ಶಿಕ್ಷಣದಿಂದ ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ವರು ಎಂದು ಶಾಸಕ ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರು ಜನ್ಮಾದಿನಾಚರಣೆ, ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾನವ ಸಂಪನ್ಮೂಲವನ್ನು ದೇಶದ ಅಭಿವೃದ್ದಿಯಲ್ಲಿ ಶ್ರಮಿಸುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ರಾಷ್ಟ್ರಕಟ್ಟುವ ನಿಮರ್ಾಪಕರು ಶಿಕ್ಷಕರಾಗಿದ್ದಾರೆ. ಶಿಕ್ಷಕರ ಧ್ಯೇಯ ಮಕ್ಕಳ ಶ್ರೇಯೋಭೀವೃದ್ದಿಗಾಗಿ ಇರಬೇಕು. ಶಿಕ್ಷರು ಸಮಾಜಕ್ಕೆ ನೀಡುವ ಕೊಡುಗೆ ಬೇರೆ ಯಾರಿಂದಲೂ ನೀಡಲು ಸಾದ್ಯವಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಮಾತನಾಡಿ, ಇಡೀ ದೇಶವೆ ಶಿಕ್ಷಕ ಸಮುದಾಯವನ್ನು ಏಕೆ ಗೌರವಿಸುತ್ತದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಲಿಷ್ಠ ಸಮಾಜ ನಿಮರ್ಾಣ ಮಾಡಲು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಾಕಷ್ಟು ಸಮೀಕ್ಷೆಗಳನ್ನು ನಡೆಸಿದೆ. 5 ನೇ ತರಗತಿ ವಿದ್ಯಾಥರ್ಿಗಳಲ್ಲಿ ಶೇ. 53 ರಷ್ಟು ವಿದ್ಯಾಥರ್ಿಗಳು 2 ನೆ ತರಗತಿ ಪಠ್ಯಗಳನ್ನು ಓದಲು ಆಗುತ್ತಿಲ್ಲ ಅದೇರೀತಿ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳಿಗೆ ಶೇ. 60 ರಷ್ಟು ಸರಿಯಾಗಿ ಉತ್ತರ ನೀಡುವ ಗುಣಮಟ್ಟ ಇಲ್ಲ ಎಂದು ಸಮೀಕ್ಷೆ ಹೇಳಿದೆ ಎಂದು ಹೇಳಿದರು.
ಶಿಕ್ಷಕರ ವಗರ್ಾವಣೆ ನೀತಿಯಲ್ಲಿ ಲೋಪದೋಷಗಳ ಪಟ್ಟಿಮಾಡಿ ಶಿಕ್ಷಣ ಸಚಿವರಿಗೆ ನೀಡಲಾಗಿದ್ದು, ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು. ದೇಶದಲ್ಲಿ ಒಂದೇರೀತಿ ಶಿಕ್ಷಣ, ಒಂದೇರೀತಿ ಪಠ್ಯಕ್ರಮ ಒಂದೇರೀತಿ ಪರೀಕ್ಷಾಕ್ರಮ ಇದೇ ಅದೇರೀತಿ ದೇಶದಲ್ಲಿ ಒಂದೇರೀತಿ ವೇತನ ಜಾರಿಗೊಳಿಸಿದರೆ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಾಣಲಿದೆ. ಸರಕಾರ ಶಿಕ್ಷಕರ ಬೇಡಿಕೆ ಈಡೇರಿಸಲಿ ಅಥವಾ ಇಲ್ಲದಿರಲಿ ಶಿಕ್ಷಕರು ಮಾತ್ರ ಮಕ್ಕಳ ಭವಿಷ್ಯ ನಿಮರ್ಾಣಕ್ಕೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಹಾಗೂ ಬೆಳಗಾವಿಯ ಅಮೋಘಿಶಿದ್ದೇಶ್ವರ ಕ್ರೀಯೇಶನ್, ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಹಾಗೂ ಹಾಲುಮತ ಮಹಾಸಭಾ ಜಿಲ್ಲಾಘಟಕದಿಂದ ಸಾವಿತ್ರಿಬಾಯಿ ಫುಲೆ ಜೀವನಾಧಾರಿತ ಚಲನಚಿತ್ರವು ನೆರೆದ ಶಿಕ್ಷಕ ಸಮುದಾಯದ ಮನಕಲುಕಿತು.
ಈ ಸಂದರ್ಭದಲ್ಲಿ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ತಾಪಂ ಅಧ್ಯಕ್ಷ ವಿಧ್ಯಾದರ ದೊಡ್ಡಮನಿ, ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಜಿಪಂ ಸಿಇಒ ಮಂಜುನಾಥ ಚವ್ಹಾಣ, ಡಯಟ್ ಉಪನಿದರ್ೇಶಕ ಗಂಗಪ್ಪ, ಡಿಡಿಪಿಐ ಜಿ.ಎಲ್ ಬಾರಾಟಕ್ಕೆ, ಗ್ರಾಮೀಣ ಬಿಇಒ ಎಚ್.ಎಂ.ಖಾನ, ಎಸ್.ಎಂ. ಕೊಟಗಿ, ಪಿ.ಸಿ.ಕಲಹಾಳ, ವಿ.ಎಂ.ಹಿರೇಮಠ, ಎಂ.ಎಸ್.ಕುಚಬಾಳ,ವಿಜಯ ಕಿರೇಸೂರ, ಬಿ.ಕೆ.ನಿಂಬನಗೌಡ್ರ, ವಿ.ಬಿ.ಪೋಲಿಸ ಪಾಟೀಲ, ಕೆ.ಎಫ್.ಹಳ್ಯಾಳ, ಎಸ್.ಎಚ್.ನೈನಾಪೂರ, ಎಸ್.ಎನ್.ಬಳ್ಳಾರಿ, ಎಂ.ವೈ.ತೇರದಾಳ, ಬಿ.ಎಫ್. ಪೂಜಾರ, ವಿ.ಜಿ.ಖೋಡೆ, ಎಚ್.ಆರ್.ಕೋಣಿಮನಿ, ಡಿ.ಎಸ್.ತಳವಾರ, ಬಿ.ಬಿ.ಹಡಪದ ಉಪಸ್ಥಿತರಿದ್ದರು.
ಅಣ್ಣಿಗೇರಿ ಸರಕಾರಿ ಪ್ರಥಮದಜರ್ೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎ.ಸಿ.ವಾಲಿ ಅವರು ಉಪನ್ಯಾಸ ನೀಡಿದರು. ಶಹರ ಬಿಇಓ ಎಂ.ಎ.ರಡ್ಡೆರ ಸ್ವಾಗತಿಸಿದರು. ಬಾಹುಬಲಿ ಜೈನರ್ ಹಾಗೂ ಪ್ರೊ. ದತ್ತಪ್ರಸನ್ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.