ಅಲಾರವಾಡ ಗ್ರಾಮ ದತ್ತು ಯೋಜನೆಗೆ ಕ್ರಮ: ಬೆನಕೆ
ಬೆಳಗಾವಿ 23: ಸ್ಮಾರ್ಟಸಿಟಿ ಯೋಜನೆಯಡಿಯ ವ್ಯಾಪ್ತಿಯಿಂದ ಹೊರಗುಳಿದ ಅಲಾರವಾಡ ಮತ್ತು ಕುಡಚಿ ಗ್ರಾಮಗಳನ್ನು ದತ್ತು ಪಡೆದುಕೊಂಡು ಅವುಗಳ ಸಮಗ್ರ ಅಭಿವೃದ್ಧಿಗಾಗಿ ಒಂದು ಯೋಜನೆ ಹಾಕಿ ಈ ಎರಡೂ ಗ್ರಾಮಗಳನ್ನು ದತ್ತು ಪಡೆಯಲು ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಅನಿಲ ಬೆನಕೆ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಝೇಷನ ಜಿತೋ ಬೆಳಗಾವಿ ವಿಭಾಗದ ರವಿವಾರ ಜುಲೈ 22 ರಂದು ಬೆಳಗಾವಿ ನಗರದ ಸಮೀಪವಿರುವ ಅಲಾರವಾಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಕ್ಯಾನ್ಸ್ರ ರೋಗ ಪತ್ತೆ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಮಾರ್ಟ ಸಿಟಿ ಯೋಜನೆಗೆ ಕೆಲವು ನಿಯಮಗಳಿವೆ. ಈ ನಿಯಮಗಳಿಗೆ ಅನುಗುಣವಾಗಿ ಬೆಳಗಾವಿ ನಗರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಬೆಳಗಾವಿ ಮಹಾನಗರ ವ್ಯಾಪ್ತಿಯಡಿ ಬರುವ ಕುಡಚಿ ಮತ್ತು ಅಲಾರವಾದ ಗ್ರಾಮಗಳು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಈ ಎರಡೂ ಗ್ರಾಮಗಳ ಅಭಿವೃದ್ಧಿಗಾಗಿ ಜಿತೋ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಚಚರ್ಿಸಿ ಒಂದು ಯೋಜನೆಯನ್ನು ಸಿದ್ಧಪಡಿಸಿ ಈ ಗ್ರಾಮಗಳನ್ನು ದತ್ತು ಪಡೆಯುವ ಯೋಜನೆಗೆ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಜಿತೋ ಸಂಸ್ಥೆಯ ಚೇರಮನ್ ಸತೀಶ ಮೆಹತಾ ಅವರು ವಹಿಸಿದ್ದರು. ವೇದಿಕೆ ಮೇಲೆ ಉದ್ಯಮಿ ಗೋಪಾಲ ಜಿನಗೌಡ, ನಗರ ಸೇವಕಿ ಶ್ರೇಯಲಾ ಜನಗೌಡಾ, ರಾಜೇಂದ್ರ ಜೈನ, ಸಿ.ಬಿ,.ಜನಗೌಡಾ, ಪ್ರವೀಣ ಸಾಮಸುಖಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಜಿತೋ ಸಂಸ್ಥೆಯ ಕಾರ್ಯದಶರ್ಿ ವಿಕ್ರಮ ಜೈನ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು.
ಶಿಬಿರದಲ್ಲಿ ಸ್ತ್ರೀರೋಗ, ಮಕ್ಕಳ ಆರೋಗ್ಯ, ಬೆನ್ನು ನೋವು, ಕುತ್ತಿಗೆ ನೋವು, ಮೊಣಕಾಲು, ಸಂಧಿವಾತ, ಮೂಳೆ ಸಾಂದ್ರತೆ, ಎಲುಬು ಕೀಲುಗಳ ತೊಂದರೆ, ಬಿ.ಪಿ.ಡಯಾಬಿಟಿಸ್ (ಮಧುಮೇಹ) ಸೇರಿದಂತೆ ಇನ್ನಿತರ ಕಾಯಿಲೆಗಳ ಬಗ್ಗೆ ಉಚಿತ ತಪಾಸಣೆ ನಡೆಸಲಾಗುವುದು. ಅದಲ್ಲದೇ ವಿವಾ ಫಮರ್ಾ ವತಿಯಿಂದ ಮೂರು ದಿನಗಳ ಔಷಧಿಯನ್ನು ಸಹ ಉಚಿತವಾಗಿ ನೀಡಲಾಯಿತು.
ಅಲಾರವಾಡ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಫೋಟೊ ಕ್ಯಾಪ್ಶನ್: ಅಲಾರವಾಡ ಗ್ರಾಮದಲ್ಲಿ ಬೃಹತ್ತ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಶಾಸಕ ಅನಿಲ ಬೆನಕೆ ಅವರು ಉದ್ಘಾಟಿಸಿದರು. ಉದ್ಯಮಿ ಗೋಪಾಲ ಜಿನಗೌಡ, ನಗರ ಸೇವಕಿ ಶ್ರೇಯಲಾ ಜನಗೌಡಾ ಜಿತೋ ಚೇರಮನ್ ಸತೀಶ ಮೆಹತಾ ಮೊದಲಾದವರು ಉಪಸ್ಥಿತರಿದ್ದರು.