ಆತ್ಮ ಸ್ಥೈರ್ಯ ತುಂಬುವ ಮೂಲಕ ಸಮಾಜ ಮುಖಿಯಾಗಿ ಕಾರ್ಯ ಮಾಡಿ: ನೂತನ ಯುವ ಘಟಕದ ಅಧ್ಯಕ್ಷ ಕೃಷ್ಣಾ
ಕುಷ್ಟಗಿ 30: ಅಸಹಾಯಕ ಸ್ಥಿತಿಯಲ್ಲಿ ಇರುವ ಸಮಾಜದ ಯಾರೇ ವ್ಯಕ್ತಿ ಅಥವಾ ಕುಟುಂಬ ಇರಲಿ ಅವರಿಗೆ ಆತ್ಮ ಸ್ಥೈರ್ಯ ತುಂಬುವ ಮೂಲಕ ಸಮಾಜ ಮುಖಿಯಾಗಿ ಕಾರ್ಯಮಾಡಬೇಕು ಎಂದು ರಾಜ್ಯ ಸೋಮ ವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ನೂತನ ಯುವ ಘಟಕದ ಅಧ್ಯಕ್ಷ ಕೃಷ್ಣಾಸಾ (ಸಿಂಗಂ)ದಲಬಂಜನ ಹೇಳಿದರು.
ಕುಷ್ಟಗಿಯ ಎಸ್.ಎಸ್.ಕೆ.ಸಮಾಜದ ವತಿಯಿಂದ ನಗರದ ಬಸವ ಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರುಯಾವುದೇ ಸಮಾಜವಿರಲಿ ಸಂಘಟಿತರಾಗಿ ಹೋರಾಡಿದಾಗ ಮಾತ್ರ ಆರ್ಥಿಕವಾಗಿ ಸಮಾಜಿಕವಾಗಿ ರಾಜಕೀಯವಾಗಿ ಮುಂದೆ ಬರಲು ಸಾದ್ಯ ಎಂದು ಹೇಳಿದರು.
ನಿಮ್ಮ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಎಲ್ಲದಕ್ಕೂ ಶಿಕ್ಷಣವೇ ಶಕ್ತಿ ಯಾಗಿದೆ. ಅಂಭಾ ಭವಾನಿ ದೇವಸ್ಥಾನದ ನಿರ್ಮಾಣಕ್ಕೆ ಸುಮಾರು 85ಲಕ್ಷ ರೂಪಾಯಿ ಅವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಜನಪ್ರತಿ ನಿಧಿಗಳ ಮೂಲಕ ಸರಕಾರದ ಅನುದಾನ ಪಡೆದುಕೊಳ್ಳುವಲ್ಲಿ ನಾನು ಕೂಡಾ ಸಹಕಾರ ನೀಡುತ್ತೇನೆ ಸಮಾಜದ ಅಭಿವೃದ್ಧಿ ನಮ್ಮ ಗುರಿಯಾಗಲಿ ಎಂದು ಹೇಳಿದರು.
ಸನ್ಮಾನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ತೇರ್ಗಡೆಯಾದ ಸಮಾಜದ ಆರು ಜನ ವಿದ್ಯಾರ್ಥಿಗಳಾದ ಅಭಿಷೇಕ ಪವಾರ, ಸಂಗೀತಾ ಬಾಕಳೆ, ಮಂಜುಳಾ, ಬ್ಯಾಗ್ಯಶ್ರೀ ನಿರಂಜನ, ವೈಷ್ಣವಿ ಕಾಟವಾ, ಮಂಥನ ಸಿಂಗ್ರಿ, ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅದೇ ರೀತಿಯಲ್ಲಿ ನೂತನವಾಗಿ ರಾಜ್ಯ ಯುವ ಎಸ್.ಎಸ್.ಕೆ.ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಾ ಸಾ ದಲಬಂಜನ ಅವರಿಗೆ ಕುಷ್ಟಗಿ ಪಂಚ ಟ್ರಸ್ಟ್ ಕಮಿಟಿಯ ವತಿಯಿಂದ ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ರವಿಂದ್ರ ಬಾಕಳೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ಕಳೆದ ಎಂಟು ವರ್ಷ ದಿಂದ ಸಮಾಜದ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿ ಈ ಅವಧಿಗೆ ಅಧ್ಯಕ್ಷರಾಗಿ ಬೇರೆ ಆಸಕ್ತರು ಯಾರಾದರೂ ಇದ್ದರೆ ಅವರನ್ನು ನೇಮಿಸಲಾಗುವದು ಎಂದು ಹೇಳಿದಾಗ ಸಭೆಯಲ್ಲಿ ಇದ್ದ ಎಲ್ಲರೂ ತಾವೇ ಮುಂದೋರೆಯಬೇಕು ದೇವಸ್ಥಾನದ ನಿರ್ಮಾಣ ಪೂರ್ಣ ಗೋಳಿಸಬೇಕು ಎಂದು ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಂದು ಅವಧಿಗೆ ಈಗಿರುವ ಪದಾಧಿಕಾರಿಗಳ ನೇತೃತ್ವದಲ್ಲಿ ಆಗಲಿ ಎಂದು ಅಭಿಪ್ರಾಯ ಪಟ್ಟಿದ್ದು ನಮ್ಮ ಜವಬ್ದಾರಿ ಹೆಚ್ಚಿಸಿದೆ.
ಶ್ರೀ ಅಂಭಾ ಭವಾನಿ ದೇವಸ್ಥಾನದ ಕಟ್ಟಡಕ್ಕೆ ಈಗಾಗಲೇ ಶಾಸಕ ಅಮರೇಗೌಡ ಬಯ್ಯಾಪೂರ ಅವರು ಐದು ಲಕ್ಷ ಅನುದಾನ ನೀಡಿದ್ದಲ್ಲದೇ ತಮ್ಮ ವಯಕ್ತಿಕ ವಾಗಿ ಒಂದು ಲಕ್ಷ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಅದರಂತೆ ಪುರಸಭೆ ಅಧ್ಯಕ್ಷ ಜಿಕೆ ಹಿರೇಮಠ ಒಂದು ಲಕ್ಷ ದೇಣಿಗೆ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಸಂಸದ ಸಂಗಣ್ಣ ಕರಡಿಯವರು ತಮ್ಮ ಸಂಸದರ ನಿಧಿಯಿಂದ ಸಮುದಾಯ ಭವನಕ್ಕೆ ಅನುದಾನ ನೀಡುವದಾಗಿ ಹೇಳಿದ್ದಾರೆ. ಈ ಎಲ್ಲಾ ದಾನಿಗಳಿಗೂ ಸಮಾಜ ಋಣಿಯಾಗಿದೆ ಎಂದು ಹೇಳಿದ ಅವರು ಸ್ಥಳೀಯವಾಗಿ ವಾಸವಿರುವ ನಮ್ಮ ಸಮಾಜದ ಪ್ರತಿಯೊಬ್ಬರು ನೀಡಿದ ದೇಣಿಗೆ ಹಣ ಸುಮಾರು 23ಲಕ್ಷ ರೂಪಾಯಿಗಳಲ್ಲಿ ನಿವೇಶನ ಖರೀದಿಸಿದ ಪರಿಣಾಮವಾಗಿ ಇಂದು ಅಲ್ಲಿ ಭವ್ಯವಾದ ದೇವಸ್ಥಾನದ ಸಂಕಲ್ಪ ಈಡೇರುತ್ತಿದೆ ಎಂದು ನುಡಿದರು.
ವೇದಿಕೆಯ ಮೇಲೆ ಡಾ. ರವಿಕುಮಾರ್ ದಾನಿ, ಗೌರವಾಧ್ಯಕ್ಷ ಪರಶುರಾಮ ನಿರಂಜನ, ಉಪಾಧ್ಯಕ್ಷ ರಾಜಣಸಾ ಕಾಟವಾ, ಖಜಾಂಚಿ ಆನಂದ ರಾಯಬಾಗಿ, ಕಾರ್ಯದರ್ಶಿ ಕೇಶವ ಕಾಟವಾ, ದೇವಸ್ಥಾನ ಕಮೀಟಿ ಅಧ್ಯಕ್ಷ ವೆಂಕಟೇಶ ಕಾಟವಾ, ಮಹಿಳಾ ಮಂಡಳಿಯ ಅಧ್ಯಕ್ಷ ಅನಿತಾಬಾಯಿ ಸಿಂಗ್ರಿ, ಉಪಾಧ್ಯಕ್ಷ ಅರುಣಾಬಾಯಿ ಮಿಸ್ಕಿನ್, ತರುಣ ಸಂಘದ ಅಧ್ಯಕ್ಷ ಶಂಕರಸಾ ರಾಯಬಾಗಿ, ಉಪಾಧ್ಯಕ್ಷ ಆನಂದಸಾ ಸಿಂಗ್ರಿ, ಪ್ರಭಾಕರ ಸಿಂಗ್ರಿ, ವಿಠ್ಠಲ ದಲಬಂಜನ, ಶ್ರೀನಿವಾಸ ಬಾಕಳೆ, ಕುಬೇಂದ್ರಸಾ ದಾನಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದು ಚರ್ಚಿಸಿ ಸಮಾಜದ ಹಾಗೂ ದೇವಸ್ಥಾನದ ಅಭಿವೃದ್ಧಿ ಕುರಿತು ಸಲಹೆ ಸೂಚನೆ ನೀಡಿದರು. ಇಂದಿನ ಈ ಸಭೆಯಲ್ಲಿ ನಗರದ ಎಸ್ಎಸ್ಕೆ ಸಮುದಾಯದ ಎಲ್ಲಾ ಸದಸ್ಯರು ಹಾಗೂ ಮುಖಂಡರು ಮತ್ತು ತರುಣ ಸಂಘ ಮಹಿಳಾ ಸಂಘದ ಮತ್ತು ಪಂಚ ಟ್ರಸ್ಟ್ ಕಮೀಟಿ ಪದಾಧಿಕಾರಿಗಳು ಹಾಜರಿದ್ದು ಸಮಾಜದ ಅಭಿವೃದ್ಧಿ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.