ಪ್ರತಿ ಬೂತನಲ್ಲಿ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ : ಖಾದ್ರಿ
ಶಿಗ್ಗಾವಿ 24: ಪ್ರತಿ ಬೂತನಲ್ಲಿ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಬರುವ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ ಅಭ್ಯರ್ಥಿ ವಿನೋದ ಅಸೂಟಿಯವರನ್ನು ಹೆಚ್ಚು ಮತಗಳಿಂದ ಜಯಶಾಲಿ ಮಾಡುವುದೇ ನಮ್ಮ ಉದ್ದೇಶ ಎಂದು ಮಾಜಿ ಶಾಸಕ ಸೈಯದ ಅಜ್ಜಂಪೀರ ಖಾದ್ರಿ ಹೇಳಿದರು.
ಪಟ್ಟಣದ ಚೆನ್ನಮ್ಮ ವೃತ್ತದಲ್ಲಿರುವ ವೀರರಾಣಿ ಕಿತ್ತೂರ ಚೆನ್ನಮ್ಮ ಮೂರ್ತಿಗೆ ಹಾಗೂ ಮೆಹೆಬು ಸಬಾನಿ ದರ್ಗಾಕೆ ಮಾರ್ಲಾಪಣೆ ಸಲ್ಲಿಸಿ ದಿ 23-3-2024 ರಂದು ಶಿಸ್ತು ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಮಾಜಿ ಶಾಸಕ ಸೈಯದ ಅಜ್ಜಂಪೀರ ಎಸ್ ಖಾದ್ರಿ ಅವರ ಉಚ್ಚಾಟನೆ ಆದೇಶ ಹಿಂಪಡೆದ ಹಿನ್ನಲೆಯಲ್ಲಿ ಕಾರ್ಯಕರ್ತರ ವಿಜಯೋತ್ಸವ ಉದ್ದೇಶಿಸಿ ಮಾತನಾಡಿದ ಅವರು ಲೋಕಸಭಾ ಅಭ್ಯರ್ಥಿ ಯುವಕರು ಮತ್ತು ಉತ್ಸಾಹಿ ತರುಣರರಿರುವುದರಿಂದ ಮತ್ತು ಹೈ ಕಮಾಂಡ ಈ ಭಾರಿ ಯುವಕರಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡಿದ ಪರಿಣಾಮ ಅವರನ್ನು ಕಾಂಗ್ರೇಸ ಪಕ್ಷದ ಕಾರ್ಯವೈಖರಿಯನ್ನು ಪ್ರತಿ ಮನೆ ಮನೆಗೂ ತಲುಪಿಸಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದರು.
ಪುರಸಭೆ ಸದಸ್ಯ ಆಂಜನೇಯ ಬಂಕಾಪೂರ ಮಾತನಾಡಿ ಖಾದ್ರಿ ಸಾಹೇಬರು ಕಳೆದ 25 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ ಪರಿಣಾಮ ಇನ್ನೂ ಕ್ಷೇತ್ರದಲ್ಲಿ ಕಾಂಗ್ರೇಸ ಅಲೆ ಇದೆ ಆದ್ದರಿಂದ ಕ್ಷೇತ್ರದ ಎಲ್ಲ ಕಾರ್ಯಕರ್ತರೂ ಇಂದಿನಿಂದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಸಂತಾ ಬಾಗೂರ, ಮಹ್ಮದ ಗುಲ್ಮೀ, ಮುಖಂಡರಾದ ಅಣ್ಣಪ್ಪ ಲಮಾಣಿ, ಗುರುನಗೌಡ ಪಾಟೀಲ, ಶಂಭುಲಿಂಗಪ್ಪ ಆಜೂರ, ಮಂಜುನಾಥ ತಿಮ್ಮಾಪೂರ, ಶಬ್ಬೀರಹ್ಮದ ಮಕಾಂನದಾರ, ನ್ಯಾಯವಾದಿ ಹನುಮಂತ ಬಂಡಿವಡ್ಡರ, ಶಂಬು ನೆರ್ತಿ, ಗುರು ಅಣ್ಣಿಗೇರಿ, ಜಾಫರ ಭಾಗವಾನ, ರವಿ ಕೋವಣ್ಣವರ, ಸುರೇಶ ಹರಿಜನ, ಮಂಜುನಾಥ ಕಂಕನವಾಡ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.