ಚಿಕ್ಕೋಡಿ

ಆಸಕ್ತಿ ವಿಷಯದ ಅಭ್ಯಾಸದಿಂದ ಸಾಧನೆ ಸಾಧ್ಯ

ಆಸಕ್ತಿ ವಿಷಯದ ಅಭ್ಯಾಸದಿಂದ ಸಾಧನೆ ಸಾಧ್ಯ

ಡಿವೈಎಸ್ ಪಿ ಬಸವರಾಜ ಯಲಿಗಾರ ಅಭಿಮತ: ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ 

ಮಾಂಜರಿ 26: ಮನುಷ್ಯನು ಜೀವನದಲ್ಲಿ ಏನು ಸಾಧಿಸುತ್ತಾನೆ ಎಂಬುದು ಅವನ ವಿದ್ಯಾಬ್ಯಾಸಕ್ಕೆ ಮೇಲೆ ಅವಲಂಭನೆಯಾಗಿರುತ್ತದೆ ಎಂದು ಚಿಕ್ಕೋಡಿಯ ಡಿವೈಎಸ್ ಪಿ ಬಸವರಾಜ್ ಎಲಿಗಾರ್  ಹೇಳಿದರು. 

ಅವರು ಇಂದು ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಶಾರದಾದೇವಿ ಕೋರೆ ಪದವಿ ಪೂರ್ವ ಮಹಾ ವಿದ್ಯಾಲಯದ 2021-2022 ನೇ ಶೈಕ್ಷಣಿಕ ವರ್ಷದ ವಾರ್ಷಿಕ ದಿನಾಚರಣೆ ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಮತ್ತು ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾಡನಾಡುತ್ತಿದ್ದರು. 

ವಿದ್ಯಾರ್ಥಿಯು ಯಾವ ವಿಷಯದಲ್ಲಿ ಹೆಚ್ಚಿಗೆ ಗಮನ ಕೊಡುತ್ತಾನೆ. ಅದನ್ನು ಅರಿತು ಆ ದಿಕ್ಕಿನಲ್ಲಿ ಅವನನ್ನು ಬೆಳೆಸಿದರೆ ಆತನು ಅದರಲ್ಲಿ ಒಳ್ಳೆಯ ಸಾಧನೆ ಮಾಡುವದರಲ್ಲಿ ಸಂಶಯವಿಲ್ಲ. ಎಲ್ಲರೂ ಅಯ್‌.ಎ.ಎಸ್‌. ಅಧಿಕಾರಿಯಾಗಬೇಕೆಂಬುದರಲ್ಲಿ ಯಾವದೆ ಅರ್ಥವಿಲ್ಲ ಬೇರೆ ಬೇರೆ ವಿಭಾಗದಲ್ಲಿ ಅಬ್ಯಾಸ ಮಾಡಿ ಸಾದನೆ ಮಾಡಬಹುದು. ಎಂದರು. 

ಅಧ್ಯಕ್ಷತೆ ವಹಿಸಿದ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ರಾಗಿರುವ ಮಲ್ಲಿಕಾರ್ಜುನ ಕೋರೆ ಮಾತನಾಡಿ ಕೆ ಎಲ್ ಇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲ ವಿದ್ಯಾರ್ಥಿಗಳು  ಕಾಲೇಜಿನಲ್ಲಿ ಒಳ್ಳೆಯ ಶಿಕ್ಷಣ ಪಡಿದು  ತಾವು ನನ್ನಂತೆ ಆಗಬೇಕೆಂಬುದು ನನ್ನ ಆಸೆ. ಏಕಾಗ್ರತೆಯಿಂದ ಓದಿದರೆ ಎನು ಬೇಕಾದರೂ ಸಾದಿಸಬಹುದು ಎಂದರು. 

ಕಾರ್ಯಕ್ರಮಕ್ಕೆ ಕೆಎಲ್ ಇ ಶಿಕ್ಷಣ ಸಂಸ್ಥೆಯ ಅಜೀವ ಸದಸ್ಯ ಹಾಗೂ ಎಸ್ ಸಿ ಪಾಟೀಲ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕ ಬಿ ಎಸ್ ಅಂಬಿ  ಅಂಕಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪಾಟೀಲ್ ಡಾಕ್ ಆರ ಡಿ ಗಿಝರೆ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯಎ ಕೆ ಪಾಟೀಲ್ ಜೆ ಎಸ್ ತಮಗೌಂಡ ಹಾಜರಿದ್ದರು.  

2021-22ನೇ ಶೈಕ್ಷಣಿಕ ಸಾಲಿನ ಆದರ್ಶ ವಿದ್ಯಾರ್ಥಿಯಾಗಿ ರಾಕೇಶ ಎಂ. ಹೀರೀಕುರುಬರ ಹಾಗೂ ಸೌಜನ್ಯ ಕೆ. ಮೋರೆ ಆಯ್ಕೆಯಾಗಿರುವ ಪ್ರಯುಕ್ತ ಇವರನ್ನು ಸನ್ಮಾನಿಸಲಾಯಿತು. 

ಕುಮಾರಿ ಸಂಗಯ್ಯಗೋಳ ಹಾಗೂ ಸಂಗಡಿಗರು ಪ್ರಾರ್ಥನಾಗೀತೆಯನ್ನು ಹಾಡಿದರು. ಕಾಲೇಜಿನ ಪ್ರಾಚಾರ್ಯ ಆರ್‌. ಸಿ ಪಾಟೀಲರವರು ಸ್ವಾಗತ ಕೋರಿದರು. ಸಂತೋಷ ಕುಮಾರ ಖೋತ ರವರು ಕ್ರೀಡಾ ಹಾಗೂ ಎನ್‌.ಸಿ.ಸಿ. ಪ್ರಶಸ್ತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ. ಚಂದ್ರಕಾಂತ ಆರ್‌. ಬಿ. ಯವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿರುವ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿ ನಿಯರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ನಿರೂಪಿಸಿದರು. ಉಪನ್ಯಾಸಕ ವಂದನಾರೆ​‍್ಣಯನ್ನು ಗುಡೋಡಗಿ ಮಾಡಿದರು. 


ಸುದ್ದಿ ಓದಿ