ಬಾಲ್ಬ್ಯಾಡ್ಮಿಮಿಂಟನ್ ಚಾಂಪಿಯನ್ಸಿಪ್ ಪಂದ್ಯಾವಳಿಯಲ್ಲಿ ಸಾಧನೆ
ರಾಣೇಬೆನ್ನುರು 23: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಂತರ್ ಮಹಾವಿದ್ಯಾಲಯಗಳ ಬಾಲ್ಬ್ಯಾಡ್ಮಿಮಿಂಟನ್ ಪಂದ್ಯಾವಳಿ ಹಾಗೂ ಆಯ್ಕೆ ದಿನಾಂಕ 18, 19ನೇ ಜನೇವರಿ 2022 ರಂದು ಸತ್ಯಸಾಯಿ ಮಹಿಳಾ ಮಹಾವಿದ್ಯಾಲಯ ಧಾರವಾಡದಲ್ಲಿ ನಡೆಯಿತು. ಅಂತಿಮ ಸುತ್ತಿನಲ್ಲಿ ಸತ್ಯಸಾಯಿ ಮಹಿಳಾ ಮಹಾವಿದ್ಯಾಲಯ ಧಾರವಾಡ ವಿರುದ್ದ ಕೆ.ಎಲ್.ಇ.ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ರಾಣೇಬೆನ್ನೂರು ನಡೆಯಿತು. ಪಂದ್ಯಾವಳಿಯಲ್ಲಿ ನಮ್ಮ ಮಹಾವಿದ್ಯಾಲಯವು ಬಾಲ್ಬ್ಯಾಡ್ಮಿಮಿಂಟನ್ ಚಾಂಪಿಯನ್ಸಿಪ್ ಪಡೆಯಿತು. ಪಂದ್ಯಾವಳಿಯಲ್ಲಿ ಕು. ಸುನಿತಾ ಗಟ್ಟಿ ಬಿ.ಎ ದ್ವಿತೀಯ, ತಸ್ಲೀಮ ಎಸ್.ಬಿ, ಬಿ.ಎ ದ್ವಿತೀಯ, ಪ್ರಿಯಾಂಕ ಆರ್ ಎನ್, ಬಿ.ಎ ದ್ವಿತೀಯ, ನಾಗರತ್ನಾ ಎಂ, ಬಿಕಾಂ ದ್ವಿತೀಯ, ಪೂಜಾ ಯು ಪಾಟೀಲ, ಬಿಕಾಂ ಪ್ರಥಮ, ಅಶ್ವಿನಿ ವಿ ಹಾದಿಮನಿ, ಬಿ.ಎ ಪ್ರಥಮ, ವೀಣಾ ಆರ್ ಎಚ್ ಬಿಕಾಂ ಪ್ರಥಮ, ಕವನಾ ಎಸ್.ಎಸ್ ಬಿಕಾಂ ಪ್ರಥಮ ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು, ಆಡಳಿತ ಮಂಡಳಿಯ ಸದಸ್ಯರು, ಸ್ಥಾನಿಕ ಅಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ವ್ಹಿ.ಪಿ. ಲಿಂಗನಗೌಡರ, ಸದಸ್ಯರಾದ ಜಿ.ಸಿ.ಹುಲ್ಮನಿ, .ಬಿ.ಎಸ್.ಪಟ್ಟಣಶೆಟ್ಟಿ, .ವೀರಣ್ಣ ಅಂಗಡಿ, ಪ್ರಾಚಾರ್ಯರಾದ ಪ್ರೊ. ನಾರಾಯಣ. ನಾಯಕ ಎ ದೈಹಿಕ ನಿರ್ದೇಶಕರಾದ ಪ್ರೊ. ಮಂಜಪ್ಪ ಸಿ. ಎಸ್ ಸಿಬ್ಬಂದಿ ವರ್ಗ ಮತ್ತು ವಿಧ್ಯಾರ್ಥಿನಿಯರು ಅಭಿನಂದಿಸಿದ್ದಾರೆ.