ರಾಷ್ಟ್ರೀಯ

ಭಾರತ-ಚೀನಾ ಗಡಿಯಲ್ಲಿ ಒಳನುಸುಳುವಿಕೆ ನಡೆದಿಲ್ಲ : ಸರ್ಕಾರ

ಭಾರತ-ಚೀನಾ ಗಡಿಯಲ್ಲಿ  ಒಳನುಸುಳುವಿಕೆ ನಡೆದಿಲ್ಲ : ಸರ್ಕಾರ

ನವದೆಹಲಿ,  ಸೆಪ್ಟೆಂಬರ್ 16:  ಭಾರತ-ಚೀನಾ ಗಡಿಯಲ್ಲಿ ಕಳದೆ  6 ತಿಂಗಳಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಭಾರತ ಚೀನಾ ಗಡಿಯಲ್ಲಿ ಒಳನುಸಳುವಿಕೆ ಸಂಬಂಧ ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲಿಖಿತ ಉತ್ತರ ನೀಡಿದ್ದು, ಕಳೆದ ಆರು ತಿಂಗಳಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಆದರೆ ಭಾರತ ಪಾಕ್ ಗಡಿಯಲ್ಲಿ ಹಲವು ಬಾರಿ ಒಳನುಸುಳುವಿಕೆ ನಡೆದಿದ್ದು, ಕಳೆದ ಆರು ತಿಂಗಳಲ್ಲಿ ಇದು ಬಾರಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು 47 ಬಾರಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಒಳನುಸುಳಿವಿಕೆ ಯತ್ನ ನಡೆದಿದೆ ಎಂದೂ  ತಿಳಿಸಿದ್ದಾರೆ. 

ಸುದ್ದಿ ಓದಿ