ಬೈರುತ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 190 ಕ್ಕೆ ಏರಿಕೆ – ಲೆಬನಾನ್ ಸರ್ಕಾರ
ಮಾಸ್ಕೋ,
ಆಗಸ್ಟ್ 30: ಲೆಬೆನಾನ್ನ ಬೈರುತ್ ಬಂದರಿನಲ್ಲಿ ಆಗಸ್ಟ್ ಆರಂಭದಲ್ಲಿ ಸಂಭವಿಸಿದ ಪ್ರಬಲ
ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 190 ಕ್ಕೆ ಏರಿದ್ದು, 6,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ
ಎಂದು ಲೆಬನಾನ್ ಸರ್ಕಾರ ಭಾನುವಾರ ತಿಳಿಸಿದೆ.
ಸ್ಫೋಟದಲ್ಲಿ 170 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹಿಂದಿನ ವರದಿಗಳು ಹೇಳಿದ್ದವು.
ಅಧಿಕಾರಿಗಳ ಪ್ರಕಾರ, ಸ್ಫೋಟ ಘಟನೆಯಲ್ಲಿ ಇನ್ನೂ ಮೂರು ಜನರು ನಾಪತ್ತೆಯಾಗಿದ್ದಾರೆ. 300 ಜನರು ನಿರಾಶ್ರಿತರಾಗಿದ್ದು, 50,000 ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ.
ಆ 4 ರಂದು ಬೈರುತ್ ಬಂದರಿನಲ್ಲಿ ಸಂಭವಿಸಿದ ಭಾರಿ ಸ್ಫೋಟದಿಂದ ನಗರದ ಅರ್ಧದಷ್ಟು ಕಟ್ಟಡಗಳು ಹಾನಿಗೊಂಡಿದ್ದವು. ಬಂದರಿನಲ್ಲಿ 2,750 ಟನ್ ಅಮೋನಿಯಂ ನೈಟ್ರೇಟ್ ಅನ್ನು ಸರಿಯಾಗಿ ಸಂಗ್ರಹಿಸದೇ ಇರುವುದು ಸ್ಫೋಟಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಫೋಟಗಳ ಹಿನ್ನೆಲೆಯಲ್ಲಿ ಲೆಬೆನಾನ್ ಪ್ರಧಾನಿ ಹಸನ್ ಡಿಯಾಬ್ ಅವರು ಆಗಸ್ಟ್ 10ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ, ಹಂಗಾಮಿ ಪ್ರಧಾನಿಯಾಗಿ ಮುಂದುವರೆದಿದ್ದಾರೆ.