ಚಿಕ್ಕೋಡಿ

ರಸ್ತೆ ನಿಯಮ ಪಾಲನೆಯಿಂದ ಅಪಘಾತ ನಿಯಂತ್ರಣ ಸಾಧ್ಯ: ಆರ್‌ಟಿಒ ವಿಶಾಲ ಜಿಪಿ

ರಸ್ತೆ ನಿಯಮ ಪಾಲನೆಯಿಂದ ಅಪಘಾತ ನಿಯಂತ್ರಣ ಸಾಧ್ಯ: ಆರ್‌ಟಿಒ ವಿಶಾಲ ಜಿಪಿ

ರಾಷ್ಟ್ರೀಯ ಡ್ರೈವಿಂಗ್ ಶಾಲೆಯ ದಿನಾಚರಣೆ

ಚಿಕ್ಕೋಡಿ 23: ರಸ್ತೆ ಅಪಘಾತ ಪ್ರಮಾಣ ತಡೆಯಲು ವಾಹನ ಚಾಲನಾ ತರಬೇತಿ ಕಾರ್ಯ ಬಹುಮುಖ್ಯವಾಗಿದೆ. ಆದ್ದರಿಂದ ಚಾಲನಾ ತರಬೇತಿ ಪಡೆಯುವ ಚಾಲಕರಿಗೆ ಪರಿಪೂರ್ಣ ತರಬೇತಿ ನೀಡುವ ಮೂಲಕ ರಸ್ತೆ ಅಪಘಾತ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ ಎಂದು ಆರ್‌ಟಿಒ ವಿಶಾಲ ಜಿಪಿ ಹೇಳಿದರು. 

ಇಲ್ಲಿನ ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ ಶಾಲೆಯ ಮಾಲಿಕರ ಅಸೋಸೆಶನ್ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಡ್ರೈವಿಂಗ್ ಶಾಲೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸರ್ಕಾರ ಹೊರಡಿಸಿರುವ ರಸ್ತೆ ನಿಯಮಗಳನ್ನು ಯಾರು ಪಾಲಿಸುತ್ತಾರೇ ಅಂಥವರು ಪರಿಪೂರ್ಣವಾಗಿ ಚಾಲಕರಾಗಿ ಹೊರಹೊಮ್ಮುತ್ತಾರೆ. ರಸ್ತೆ ನಿಯಮಗಳನ್ನು ಕಡ್ಡಾಗಿ ಪಾಲಿಸಿದರೇ ಅಪಘಾತ ಪ್ರಮಾಣ ಕಡಿಮೆ ಆಗುತ್ತದೆ. ಹೀಗಾಗಿ ಮೋಟರ ಡ್ರೈವಿಂಗ ಶಾಲೆಗಳು ಚಾಲನೆಗೆ ಅವಕಾಶ ಪಡೆಯುವ ಪ್ರತಿಯೊಬ್ಬರಿಗೆ ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ತಿಳಿಹೇಳುವ ಸುಭದ್ರ ರಾಷ್ಟ್ರ ನಿರ್ಮಾಣವಾಗಲು ಕೈಜೋಡಿಸಬೇಕು ಎಂದರು.  

ಅತಿಥಿಗಳಾಗಿ ಆಗಮಿಸಿದ ಪಿಎಸ್‌ಐ ಬಸವರಾಜ ನೇರ್ಲಿ ಮಾತನಾಡಿ, ಇತ್ತಿಚ್ಚಿನ ದಿನಗಳಲ್ಲಿ ವಾಹನ ಸಂಖ್ಯೆ ಹೆಚ್ಚಾಗುವ ಜೊತೆಗೆ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಪರಿಪೂರ್ಣ ವಾಹನ ಚಲಾವಣೆ ಮಾಡುತ್ತಿದ್ದರೆ ರಸ್ತೆ ನಿಯಮಗಳು ಉಲ್ಲಂಘನೆ ಆಗುದಿಲ್ಲ, ಡ್ರೈವಿಂಗ್ ಶಾಲೆಯ ಮುಖ್ಯಸ್ಥರು ಪರಿಪೂರ್ಣವಾಗಿ ಚಾಲನೆ ಮಾಡಲು ತಿಳಿಸಬೇಕು ಎಂದರು. 

ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ್ ಸ್ಕೂಲ ಅಸೋಸಿಯೇಶನ್ ಅಧ್ಯಕ್ಷ ಎಂ.ಆರ್‌.ಮುನ್ನೋಳ್ಳಿಕರ ಅಧ್ಯಕ್ಷತೆ ವಹಿಸಿದ್ದರು. 

ವೇದಿಕೆ ಮೇಲೆ ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟರ ವಾಹನ ನೀರೀಕ್ಷಕ ಮಹೇಶ ಹನುಮಶೇಠ. ಟ್ರಾಪಿಕ್ ಪಿಎಸ್ ಐ ಅನೀಲ ಅಮ್ಮಿನಭಾವಿ. ಚಿಕ್ಕೋಡಿ ತಾಲೂಕಾ ಮೋಟರ ತರಬೇತಿ ಅಸೋಸಿಯೇಶನ್ ಉಪಾಧ್ಯಕ್ಷ ನಿಯಾಜ ಬುಡೇಖಾನ. ಕಾರ್ಯದರ್ಶಿ ವಿನಯ ಚೌಗಲಾ. ಖಜಾಂಚಿ ರಾಜು ಚಂದಗಡೆ.ಭಜರಂಗ ಮೋರೆ. ಸ್ವಪ್ನಿಲ ಅವಳೇಕರ. ರೋಹನ ಪವಾರ. ಸೂರಜ ನಾರೆ. ಶಫಿ ಕಂಕನವಾಡಿ. ಜ್ಯೊತಿರಾಮ ಪವಾರ. ಮಾರುತಿ ಮಾಳಿ. ಪ್ರಶಾಂತ ಕುಸ್ತಿಗಾರ.ಜಯಶ್ರೀ ದೇಸಾಯಿ. ಗಜೇಂದ್ರ ಮುನ್ನೋಳಿಕರ. ಮಲ್ಲಿಕಾರ್ಜುನ ಬಾಲಪ್ಪಗೋಳ. ಇಕ್ಬಾಲ ಮನಿಯಾರ ಸೇರಿದಂತೆ ಭಜರಂಗ ಮೋಟರ್ ಡ್ರಾವಿಂಗ್ ಸ್ಕೂಲ ನಿಪ್ಪಾಣಿ. ಆಧಿತ್ಯಾ ಮೋಟರ್ ಡ್ರಾವಿಂಗ್ ಸ್ಕೂಲ ರಾಯಬಾಗ. ನಾರೆ ಮೋಟರ ಡ್ರೈವಿಂಗ್ ಸ್ಕೂಲ ಬೇಡಕಿಹಾಳ.ಸಿದ್ದೇಶ್ವರ ಮೋಟರ ಡ್ರೈವಿಂಗ್ ಸ್ಕೂಲ ಅಂಕಲಿ. ಮಾತೋಶ್ರೀ ಡ್ರೈವಿಂಗ್ ಸ್ಕೂಲ ನಿಪ್ಪಾಣಿ. ಮಾಹಿ ಮೋಟರ ಡ್ರೈವಿಂಗ್ ಸ್ಕೂಲ ಸಂಕೇಶ್ವರ. ಮಾರುತಿ ಮೋಟರ ಡ್ರೈವಿಂಗ್ ಸ್ಕೂಲ ಬೋರಗಾಂವ. ಜ್ಯೋತಿ ಮೋಟರ ಡ್ರೈವಿಂಗ್ ಸ್ಕೂಲ ಚಿಂಚಲಿ. ಸಂತ ಬಾಳುಮಾಮ ಡ್ರೈವಿಂಗ್ ಸ್ಕೂಲ ಯಮಗರ್ಣಿ. ವಿನಾಯಕ ಮೋಯ ಡ್ರೈವಿಂಗ್ ಸ್ಕೂಲ ಸಂಕೇಶ್ವರ. ಸಾಯಿ ಮೋಟರ ಡ್ರೈವಿಂಗ್ ಸ್ಕೂಲ ಚಿಕ್ಕೋಡಿ. ಗಣೇಶ ಮೋಟರ ಡ್ರೈವಿಂಗ್ ಸ್ಕೂಲ ಚಿಕ್ಕೋಡಿ. ಆಧಿತ್ಯ ಮೋಟರ ಡ್ರೈವಿಂಗ್ ಸ್ಕೂಲ ಸದಲಗಾದ ಮಾಲಿಕರು ಉಪಸ್ಥಿತರಿದ್ದರು. 

ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಆರ್ ಟಿಒ ಕಚೇರಿಯ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ್ ಆಡಳಿತ ಕಚೇರಿಯವರಿಗೆ ರ್ಯಾಲಿ ನಡೆಸಿ ಸಿಹಿ ಹಂಚಿದರು. 

ಗಣಿ ಹಡಲಗಿ ಸ್ವಾಗತಿಸಿ ನಿರೂಪಿಸಿದರು. ರಾಜು ಚಂದಗಡೆ ವಂದಿಸಿದರು. 


ಸುದ್ದಿ ಓದಿ