ರಾಣೆಬೆನ್ನೂರ

ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ; 15 ಲಕ್ಷರೂ. ನಷ್ಟ!

ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ; 15 ಲಕ್ಷರೂ. ನಷ್ಟ!

ಲೋಕದರ್ಶನ ವರದಿ 


ರಾಣೀಬೆನ್ನೂರ: ನಗರ ಹೊರ ವಲಯದ ಗಂಗಾಪುರ ರಸ್ತೆಯ ಶನೈಶ್ಚರ ಮಂದಿರದ ಬಳಿ ರೈತ ಅರುಣಕುಮಾರ ಕೊಪ್ಪದರವರಿಗೆ ಸೇರಿದ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬು, 15 ಕ್ವಿಂಟಲ್ ಜೋಳ, ಪೈಪ್, ಬೇವಿನ ಮರ ಸೇರಿದಂತೆ ಅಂದಾಜು 15 ಲಕ್ಷಕ್ಕೂ ಅಧಿಕ ಮೊತ್ತದ ಹಾನಿಯಾಗಿದೆ ಎಂದು ತಿಳಿದು ಬಂದಿದೆ.  

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಮುಂದಾಗುವ ಹೆಚ್ಚಿನ ಅನಾಹುತ ತಪ್ಪಿಸಿ ಬೆಂಕಿ  ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳೆ ಹಾನಿಗೊಂಡ ರೈತನಿಗೆ ಶೀಘ್ರವೇ ಸರಕಾರವು ಪರಿಹಾರ ನೀಡಬೇಕು ಎಂದು ರೈತ ಮುಖಂಡ ಗುರುರಾಜ ತಿಳವಳ್ಳಿ ಆಗ್ರಹಿಸಿದ್ದಾರೆ. 


ಸುದ್ದಿ ಓದಿ