ಚಿಕ್ಕೋಡಿ

ನರೇಗಾ ಯೋಜನೆಯಲ್ಲಿ ಆಕಸ್ಮಿಕ ವ್ಯಕ್ತಿ ಮರಣ: ಸರಕಾರದಿಂದ 2 ಲಕ್ಷ ರೂ. ಪರಿಹಾರ

ನರೇಗಾ ಯೋಜನೆಯಲ್ಲಿ ಆಕಸ್ಮಿಕ ವ್ಯಕ್ತಿ ಮರಣ: ಸರಕಾರದಿಂದ 2 ಲಕ್ಷ ರೂ. ಪರಿಹಾರ

ಚಿಕ್ಕೋಡಿ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಕೂಲಿ ಕಾರ್ಯ ಮಾಡುತ್ತಿದ್ದ ಸಮಯದಲ್ಲಿ ಬೆಳಕೂಡ ಗ್ರಾಮದ ನಿವಾಸಿ ಸಂಜಯ ಯಶವಂತ ಮಾಳಗೆ ಅವರು ಆಕಾಸ್ಮಿಕವಾಗಿ ಮರಣ ಹೊಂದಿದ್ದರು. ಮೃತರ ಕುಟಂಬನ ವಾರಸ್ದಾರರಿಗೆ  ಆಮ ಆದ್ಮಿ ಭೀಮಾ ಯೋಜನೆ ಮಾರ್ಗಸೂಚಿಗಳಯಡಿಯಲ್ಲಿ 75 ಸಾವಿರ ರೂ.ಗಳ ಪರಿಹಾರವನ್ನು ತಾಲೂಕ ಪಂಚಾಯತ ಚಿಕ್ಕೋಡಿ ವತಿಯಿಂದ ಮೃತನ ವಾರಸ್ದಾರನ ಕುಟಂಬಸ್ಥರ ಬ್ಯಾಂಕ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಹಾಯಕ ನಿದರ್ೇಶಕ ಶಿವಾನಂದ ಶಿರಗಾಂವೆ ಅವರು ತಿಳಿಸಿದ್ದಾರೆ.

ನರೇಗಾದಲ್ಲಿ ಕೂಲಿ ಮಾಡುತ್ತಿರುವಾಗ ಕೂಲಿ ಕಾಮರ್ಿಕರು ಆಕಾಸ್ಮಿಕವಾಗಿ ಮೃತಪಟ್ಟರೆ ಸರಕಾರ ಅವರ ನೆರವಿಗೆ ಬರುತ್ತದೆ.  ನರೇಗಾದಲ್ಲಿ ಕೂಲಿ ಮಾಡುತ್ತಿರುವ ಯಾರಾದರು ಆಕ್ಮಾಸಿಕವಾಗಿ ಮರಣ ಹೊಂದಿದ್ದರೆ ರಾಜ್ಯ ಸರಕಾರ ಇದೀಗ ಮೃತ ವಾರಸ್ಥಾರನ ಕುಟಂಬಕ್ಕೆ 2 ಲಕ್ಷ ರೂ.ಗಳ ಪರಿಹಾರ ನೀಡುವದಾಗಿ ಸರಕಾರ ನೂತನ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಮೃತನ ವಾರಸ್ಧಾರಳಾದ ಅಮೃತಾ ಮಾಳಗೆ ಮಾತನಾಡಿ, ನರೇಗಾ ಯೋಜನೆ ನಮ್ಮಂತಹ ಬಡವರಿಗೆ ಸಹಾಯವಾಗಿದೆ. ಇದೀಗ ಸರಕಾರ ನೀಡಿರುವ ಪರಿಹಾರ ಧನ ನಮ್ಮ ಬಾಳಿಗೆ ಬೆಳಕಾಗಿದೆ. ಪರಿಹಾರ ಹಣ ಬಾರದೆ ಹೋಗಿದ್ದರೆ ನಮ್ಮ ಬದಕು ಬೀದಿ ಪಾಲಾಗುತ್ತಿತ್ತು. ಇದೀಗ ನರೇಗಾದ ಪರಿಹಾರ ಹಣ ಬಡವರ ಬಾಳಿಗೆ ಆಶರೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಪಿಡಿಓ  ಎಂ.ಪಿ.ಕಿಲ್ಲೇದಾರ, ಐಇಸಿ ಸಂಯೋಜಕರು ರಂಜೀತ ಕಾಂಬಳೆ,  ಆನಂದ ಮುಗಳಿ,ಸುರೇಶ ಅರಭಾವಿ,ಬಸವಣ್ಣೆ ಕುಂಬಾರ,ಉಪಸ್ಥಿತರಿದ್ದರು.ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ನರೇಗಾದಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ಮೃತ ಪಟ್ಟ ಸಂಜಯ ಯಶವಂತ ಮಾಳಗೆ   ಅವರ ವಾರಸ್ದಾರನ ಸಂಬಂಧಿಕರಿಗೆ ಸರಕಾರದ ಪರಿಹಾರ ಹಣ ಜಮಾವಾಗಿರುವ ಪಾಸ್ ಬುಕ್ ಪರಿಶೀಲನೆ ನಡೆಸಿದರು 

ಸುದ್ದಿ ಓದಿ