ಕಾರು-ಲಾರಿ ಡಿಕ್ಕಿ; ಇಬ್ಬರ ಸಾವು
ರಾಣೇಬೆನ್ನೂರ : ನಗರದ ಹೊರ ವಲಯದಲ್ಲಿ ದಾವಣಗೆರೆಯಿಂದ-ಹಾವೇರಿ ಕಡೆಗೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿರುವ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಮುತುಂ ಶೈಲಶ್ ಮತ್ತು ಚತ್ತೀಸ್ಗಡದ ಅಂಚನ್ ಆರ್.ಕೆ. ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ಸಂಚಾರಿ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.