ರಾಷ್ಟ್ರೀಯ

ಹೋಮಿಯೋಪಥಿ ವಿಧೇಯಕ ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕಾರ

ಹೋಮಿಯೋಪಥಿ ವಿಧೇಯಕ ರಾಜ್ಯಸಭೆಯಲ್ಲಿ  ಧ್ವನಿಮತದಿಂದ ಅಂಗೀಕಾರ

ನವದೆಹಲಿ,ಸೆಪ್ಟೆಂಬರ್ 18: ಭಾರತೀಯ ವೈದ್ಯ ಪದ್ಧತಿಯ ಕೇಂದ್ರೀಯ  ಮಂಡಳಿ (ತಿದ್ದುಪಡಿ) ವಿಧೇಯಕ, 2020.  ಹಾಗೂ  ಹೋಮಿಯೋಪಥಿ  ಕೇಂದ್ರೀಯ ಮಂಡಳಿ  (ತಿದ್ದುಪಡಿ) ವಿಧೇಯಕ,  2020ಕ್ಕೆ  ರಾಜ್ಯಸಭೆ ಶುಕ್ರವಾರ  ಧ್ವನಿ ಮತದಿಂದ ಅಂಗೀಕಾರ ನೀಡಿದೆ.

ವಿಧೇಯಕದ ಮೇಲೆ ನಡೆದ ಚರ್ಚೆಗೆ  ಉತ್ತರಿಸಿದ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್  ದೇಶದ ಜನರಿಗೆ  ಎಲ್ಲ ರೀತಿಯ ವೈದ್ಯ ಪದ್ದತಿಯ ಸೇವೆಗನ್ನು   ಖಾತರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಸುಗ್ರೀವಾಜ್ಞೆಗಳ ಮೂಲಕ  ಕಾಯ್ದೆ ಜಾರಿಗೊಳಿಸುವುದು  ಅಸಹಜ ಪ್ರಕ್ರಿಯೇನು  ಅಲ್ಲ ಎಂದ ಸಮರ್ಥಿಸಿಕೊಂಡ ಸಚಿವರು, ಕೊರೊನಾ ಸಾಂಕ್ರಾಮಿಕ ಕಾರಣದಿಂದ ಸಂಸತ್ ಅಧಿವೇಶನ     ಸೇರಿವುದು ವಿಳಂಬವಾಗಿರುವ   ಕಾರಣ ಸರ್ಕಾರ   ಪದೇ ಪದೇ ಸುಗ್ರೀವಾಜ್ಞೆ ಮಾರ್ಗವನ್ನು  ಅನುಸರಿಸಿತು  ಎಂದರು. 

ಸದನದ ಸದಸ್ಯರೊಬ್ಬರು ಭಾರತೀಯ ಔಷಧ ಪದ್ದತಿಗಳ   ಸುಧಾರಣೆ ಹಾಗೂ ನಿಯಂತ್ರಣಗೊಳಿಸಬೇಕೆಂದು ಕರೆ ನೀಡಿದ್ದರು. ಈ ವಿಧೇಯಕಗಳ ಮೂಲಕ  ಅವುಗಳನ್ನು ಕೈಗೊಳ್ಳಲಾಗುತ್ತಿದೆ,   ನಕಲಿ ವೈದ್ಯರಿಗೆ  ಉತ್ತೇಜನ ನೀಡುತ್ತದೆ  ಎಂಬ 'ಪದ' ಬಳಕೆಯಿಂದ  ತಮಗೆ  ತೀವ್ರ ನೋವಾಗಿದೆ  ಎಂದು  ಡಾ ಹರ್ಷ್ ವರ್ಧನ್   ಎಂದು ಹೇಳಿದರು.

ಹೋಮಿಯೋಪಥಿ  ಕೇಂದ್ರ ಮಂಡಳಿ ತಿದ್ದುಪಡಿ ವಿಧೇಯಕ 2020,  ರಾಜ್ಯಸಭೆಯಲ್ಲಿ  ಸೆಪ್ಟಂಬರ್ 14ರಂದು  ಮಂಡಿಸಲಾಗಿತ್ತು. ಹೋಮಿಯೋಪಥಿ ಕೇಂದ್ರೀಯ ಮಂಡಳಿ ಕಾಯ್ದೆ, 1973ಗೆ  ತಿದ್ದುಪಡಿ ತರುವ ಮೂಲಕ    ದೇಶದಲ್ಲಿ ಹೋಮಿಯೋಪಥಿ ಶಿಕ್ಷಣ ಹಾಗೂ ಚಿಕಿತ್ಸೆಗಳನ್ನು ನಿಯಂತ್ರಿಸಲು   ಅನುವು ನೀಡಲಿದೆ.

ಭಾರತೀಯ ವೈದ್ಯ ಪದ್ದತಿಯ ಶಿಕ್ಷಣ ಹಾಗೂ ಚಿಕಿತ್ಸೆಗಳನ್ನು ನಿಯಂತ್ರಿಸಲು  ಭಾರತೀಯ ವೈದ್ಯಕೀಯ ಕೇಂದ್ರೀಯ ಮಂಡಳಿ ಕಾಯ್ದೆ, 1970ಕ್ಕೆ    ತಿದ್ದುಪಡಿ ತರಲು   ಈ ವಿಧೇಯಕ ಅವಕಾಶ ಕಲ್ಪಿಸಲಿದೆ.

ಸುದ್ದಿ ಓದಿ