ರಾಣೆಬೆನ್ನೂರ

ಶೈಕ್ಷಣಿಕ ಪ್ರಗತಿಗೆ ಮಾನವೀಯ ಸಹಕಾರ ಅಗತ್ಯವಿದೆ: ಕಲ್ಯಾಣಿ

ಶೈಕ್ಷಣಿಕ ಪ್ರಗತಿಗೆ ಮಾನವೀಯ ಸಹಕಾರ ಅಗತ್ಯವಿದೆ: ಕಲ್ಯಾಣಿ

ರಾಣೀಬೆನ್ನೂರ 03: ಸರ್ಕಾರ ಉನ್ನತ ಶಿಕ್ಷಣದ ಪ್ರಗತಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರೂ ಸಹ ಎಲ್ಲರಿಗೂ ವಿಶೇಷವಾಗಿ ಬಡವರಿಗೆ ತಲುಪುತ್ತಿಲ್ಲ ಎನ್ನುವ ಬಲವಾದ ಕೂಗು ಕೇಳಿ ಬರುತ್ತಿದೆ. ಪದವಿ ಶಿಕ್ಷಣ ಪಡೆಯುವಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಬಡವರ ಮಕ್ಕಳೇ ಹೆಚ್ಚಾಗಿ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದೆ. ಅಂತಹ ವಿದ್ಯಾರ್ಥಿಗಳಿಗಾಗಿಯೇ ಪ್ರಗತಿಪೂರ್ವಕ ಶಿಕ್ಷಣ ಪಡೆಯಬೇಕಾದರೆ ಆಧುನಿಕ ತಂತ್ರಜ್ಞಾನ ಸಲಕರಣೆಗಳು ಬೇಕಾಗುತ್ತವೆ. ಆ ನಿಟ್ಟಿನಲ್ಲಿ ರೋಟರಿ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ತನ್ನ ಸಾಮಾಜಿಕ ಜವಾಬ್ದಾರಿ ಹೊತ್ತು ಕರ್ತವ್ಯ ನಿರ್ವಹಿಸುತ್ತಲಿದೆ ಎಂದು ರೋಟರಿ ಸೇವಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಜಗದೀಶ ಕಲ್ಯಾಣಿ ಹೇಳಿದರು.  

ಅವರು ಮಂಗಳವಾರ ನಗರ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಸಂಸ್ಥೆ ದೇಶಪಾಂಡೆ ಪೌಂಡೇಶನ್ ಮತ್ತು ಕಾಗ್ನಿಜೆಂಟ್ ಸಾಪ್ಟ್‌ವೇರ್ ಕಂಪನಿ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆಧುನಿಕ ತಂತ್ರಜ್ಞಾನದ ಗಣಕ ಯಂತ್ರಗಳನ್ನು ಕೊಡುಗೆಯಾಗಿ ವಿತರಿಸಿ ಮಾತನಾಡಿದರು. ಸಮಾಜದಲ್ಲಿ ಇದ್ದವರು ಇಲ್ಲದವರಿಗೆ ನೀಡುವುದು ಸಮಾಜ ಸೇವೆಯ ಅಂಗವಾಗಿದೆ. ಇಲ್ಲದವರಿಗೆ ಅವರ ಸಮಾನತೆಯ ಬದುಕು ಮತ್ತು ಶಿಕ್ಷಣ ಪೂರ್ಣತೆಗಾಗಿ ತಂತ್ರಜ್ಞಾನ ಸಲಕರಣೆಗಳನ್ನು ದೇಣಿಗೆಯಾಗಿ ನೀಡುವುದರ ಮೂಲಕ ಪ್ರತಿಯೊಬ್ಬರೂ ಸೇವಾ ಕಾರ್ಯ ಮೆರೆಯಬೇಕಾದ ಇಂದಿನ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಹಾಯಕ ರಾಜ್ಯಪಾಲ ಈಶ್ವರಗೌಡ ಪಾಟೀಲ, ಸಹಕಾರ್ಯದರ್ಶಿ ರೋಹಿತ್ ಅಗರವಾಲಾ, ಮಾಜಿ ಅಧ್ಯಕ್ಷ ವಿರೇಶ ಹನಗೋಡಿಮಠ, ಕಾಲೇಜಿನ ಪ್ರಾಚಾರ್ಯ ಎಲ್‌.ಬಿ.ಸಂಗಳದ, ಪೊ. ರಾಜಶೇಖರ ಚೆಕ್ಕಿ, ಪ್ರೊ.ಅರುಣಕುಮಾರ ಚಂದನ್, ಎಸ್‌.ಕೆ.ಪಾಟೀಲ, ರವಿಕುಮಾರ ನಾಯ್ಕ, ಸುನೀಲ ಎಂ.ಹೆಚ್‌. ವಿ.ಬಿ.ಕುಂಬಾರ, ಎಲ್‌.ಎಂ.ಪೂಜಾರ ಸೇರಿದಂತೆ ಮತ್ತಿತರ ಗಣ್ಯರು, ರೋಟರಿ ಸದಸ್ಯರು, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ