ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅವಿರತ ಶ್ರಮ ಅಗತ್ಯ: ಪಾಟೀಲ
ಲೋಕದರ್ಶನ ವರದಿ
ಶಿಗ್ಗಾವಿ 11: ಕುನ್ನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನಾನು ಕೂಡಾ ಶಾಲೆಗಳ ಅಭಿವ್ರದ್ದಿಗೆ ನನ್ನಕೈಲಾದ ಸಹಾಯ ಸಹಕಾರ ನೀಡುತ್ತೇನೆ ಅಲ್ಲದೇ ಗ್ರಾಮೀಣ ಬಡ ಮಕ್ಕಳಿಗೆ ಸ್ಪರ್ಧೆ ಮಾಡಲು ಉತ್ತಮವಾದ ಶಿಕ್ಷಣದ ಅವಶ್ಯಕತೆ ಇದೆ ಎಂದು ರೈತ ಸೇನಾ ಕರ್ನಾಟಕ ಹಾವೇರಿ ಜಿಲ್ಲಾ ಅಧ್ಯಕ್ಷ ವರುಣಗೌಡ ಎಂ ಪಾಟೀಲ ಹೇಳಿದರು.
ತಾಲೂಕಿನ ಕುನ್ನೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹಾಗೂ ಮೌಲಾನಾಆಜಾದ್ ಶಾಲೆಯಲ್ಲಿ ಏರ್ಪಡಿಸಿದ ಪಠ್ಯೇತರ ಚಟುವಟಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ನಮ್ಮಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳು ನಗರದ ವಿದ್ಯಾರ್ಥಿಗಳ ಜೊತೆಗೆ ಸ್ಪರ್ಧೆ ಒಡ್ಡಬೇಕಾದರೆ ಅವರಿಗೆ ಎಲ್ಲ ರೀತಿಯ ತರಬೇತಿಯ ಅವಶ್ಯಕತೆ ಇದೆ ಅದರಲ್ಲಿಯೂ ಎಸ್.ಎಸ್.ಎಲ್.ಸಿ ಮಕ್ಕಳ ಮುಂದಿನ ಹಂತದ ಭವಿಷ್ಯಕ್ಕೆ ಒಂದು ಪ್ರಮುಖವಾದ ಘಟ್ಟವಾಗಿದೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ವಿಧ್ಯಾರ್ಜನೆಯಲ್ಲಿ ತೊಡಗಿಕೊಂಡರೆ ಭವಿಷ್ಯತ್ತಿನಲ್ಲಿ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಸಾಧ್ಯ ನಾನು ಸಹ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ಮಾಡಲು ಸಿದ್ಧ.
**ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ 95% ಅಂಕ ಪಡೆದು ಪ್ರಥಮ ಸ್ಥಾನ ಪಡೆದಕುನ್ನೂರ ಸರ್ಕಾರಿ ಪ್ರೌಢಶಾಲೆ ಹಾಗೂ ಮೌಲಾನಾಆಜಾದ ಶಾಲೆಯ ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರರೂಪಾಯಿ, ದ್ವಿತೀಯ ಸ್ಥಾನದಲ್ಲಿರುವ ವಿದ್ಯಾರ್ಥಿಗಳಿಗೆ ಐದು ಸಾವಿರರೂ. ಬಹುಮಾನ ನೀಡುವುದಾಗಿಘೋಷಣೆ ಮಾಡಿದರು.
-ವರುಣಗೌಡ ಎಂ ಪಾಟೀಲ.
ರೈತ ಸೇನಾ ಕರ್ನಾಟಕ ಹಾವೇರಿ ಜಿಲ್ಲಾ ಅಧ್ಯಕ್ಷ
ಹಿರಿಯ ಪತ್ರಕರ್ತ ಬಿ.ಎಸ್. ಹಿರೇಮಠ ಅವರು ಮಾತನಾಡಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಒಳ್ಳೆಯ ದಾರಿಯಲ್ಲಿ ನಡೆದು ತಂದೆ-ತಾಯಿಗೆ ಹೆಸರು ತರಬೇಕು ಹಾಗೆಯೇ ವರುಣಗೌಡ ಪಾಟೀಲ ಅವರು ಘೋಸಿಷಿದ ಬಹುಮಾನ ಪಡೆಯಲು ಶ್ರಮವಹಿಸಿ ಅಧ್ಯಯನ ಮಾಡಿಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ಶರೀಫ್ ಮಾಕಪ್ಪನವರ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷಧನಪಾಲ ಮಾಳೋಜನವರ, ಮುಖ್ಯೋಪಾಧ್ಯಯ ಆರ್.ಎಸ್ ಲಮಾಣಿ, ದೇವರಾಜ ಲಮಾಣಿ ಶಿಕ್ಷಕ ಎಸ್.ವಿ.ಸವಣೂರ, ವಿನಾಯಕ ಹೊನ್ನಣ್ಣವರ, ಜೈಲಾನಿ ಮತ್ತೇಖಾನ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು