ಡಾ, ಸುಧಾ ಮೂರ್ತಿ ಅವರಿಗೆ ಕುಲಕರ್ಣಿ ಕುಟುಂಬದವರಿಂದ ಆರತಿ
ಜಮಖಂಡಿ 27: ನಗರದ ಬೃಂದಾನ ನಗರದ ಸಮೀಪ ಇನ್ನಪೋಸಿಸ್ ಸಂಸ್ಥೆಯ ಅಧ್ಯಕ್ಷೆ ಡಾ, ಸುಧಾ ಮೂರ್ತಿ ಅವರ ಅಕ್ಕ ಡಾ, ಸುನಂದ ಕುಲಕರ್ಣಿ, ವನಜಾಕ್ಷಿ ಕುಲಕರ್ಣಿ, ಶ್ರೇಯಾ ಕುಲಕರ್ಣಿ ಅವರು ಆರತಿ ಬೆಳಗಿಸಿ ಶುಭವನ್ನು ಕೋರಿದ್ದಾರೆ. ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ತಂಗಿದ್ದ ಡಾ,ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದ ಕಾರಣ ಅವರಿಗೆ ಆರತಿಯನ್ನು ಮಾಡಲಾಗಿದೆ ಎಂದರು. ಡಾ, ಸುಧಾ ಮೂರ್ತಿ ಅವರ ಅಕ್ಕ ಡಾ,ಸುನಂದ ಕುಲಕರ್ಣಿ, ನಾರಾಯಣ ಕುಲಕರ್ಣಿ, ವನಜಾಕ್ಷಿ ಕುಲಕರ್ಣಿ, ಶ್ರೇಯಾ ಕುಲಕರ್ಣಿ ಅವರು ಶುಭಾಶಯ ತಿಳಿಸಿದರು. ಇವರಿಗೆ ಪದ್ಮ ಭೂಷಣ ಪ್ರಶಸ್ತಿ ಬಂದಿರುವುದು ನಾಡಿನ ಜನರಿಗೆ ಖುಷಿ ತಂದಿದೆ. ಮನೆಯ ಮನಗಳಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ನಾರಾಯಣ ಕುಲಕರ್ಣಿ ತಿಳಿಸಿದರು.