ಅಥಣಿ

ಗುಜರಾತ, ಹಿಮಾಚಲ ಪ್ರದೇಶದಲ್ಲಿ ಆಮ್ ಆದ್ಮಿ ಗೆಲುವು ಖಚಿತ: ಶೆಟ್ಟಿ

ಗುಜರಾತ, ಹಿಮಾಚಲ ಪ್ರದೇಶದಲ್ಲಿ ಆಮ್ ಆದ್ಮಿ ಗೆಲುವು ಖಚಿತ: ಶೆಟ್ಟಿ

ಲೋಕದರ್ಶನ ವರದಿ 


ಅಥಣಿ 18: ಗುಜರಾತ ಮತ್ತು ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಈ ಎರಡೂ ರಾಜ್ಯಗಳಲ್ಲಿ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಪಕ್ಷದ ಚಿಕ್ಕೋಡಿ ಜಿಲ್ಲಾ ಸಂಯೋಜಕ ಸಂಪತ್ತಕುಮಾರ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.  

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಈ ಎರಡೂ ರಾಜ್ಯಗಳ ವಿಧಾನ ಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲ್ಲಿ ಚಿಕ್ಕೋಡಿ ಜಿಲ್ಲೆಯಿಂದಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದ ಅವರು ಇಡೀ ದೇಶದಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಜನತೆಯ ಅದರಲ್ಲೂ ಗುಜರಾತ ಜನತೆಯ ವಿಶ್ವಾಸ ಕಳೆದುಕೊಂಡಿದ್ದು, 27 ವರ್ಷಗಳಿಂದ ಸತತ ಆಡಳಿತ ನಡೆಸುತ್ತಿದ್ದರೂ ಕೂಡ ರಾಜ್ಯದಲ್ಲಿ ದಿನದಂದ ದಿನಕ್ಕೆ ಬಡತನ, ನಿರುದ್ಯೋಗ ಹೆಚ್ಚುತ್ತಿದೆ ಎಂದರು.  

    ಆಮ್ ಆದ್ಮಿ ರೈತ ವಿಭಾಗದ ಮುಖ್ಯಸ್ಥ ಶಿವಾನಂದ ಖೋತ ಮಾತನಾಡಿ, ಕಬ್ಬು ಬೆಳೆಗಾರರಿಗೆ ಕರ್ನಾಟಕದ ಯಾವ ಕಾರಖಾನೆಯೂ ಕೂಡ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ ಹೀಗಾಗಿ ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ 4000 ರೂ.ಗಳನ್ನು ನೀಡಬೇಕು ಎಂದು ಆಗ್ರಹಿಸಿ ಪಾರ್ಟಿಯ ನೇತೃತ್ವದಲ್ಲಿ ಸಾವಿರಾರು ರೈತರು ಅಕ್ಟೋಬರ 20 ರಂದು ಬೃಹತ್ ರಾ​‍್ಯಲಿ ನಡೆಸಿ ತಾಲೂಕಾ ಆಡಳಕಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.  

    ಆಪ್ ತಾಲೂಕಾ ಸಂಯೋಜಕ ವಿನಾಯಕ ದೇಸಾಯಿ ಮಾತನಾಡಿ, ಅ.20ರಂದು ಪಾರ್ಟಿಯ ಕಾರ್ಯಾಲಯದ ಉದ್ಘಾಟನೆಯನ್ನು ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಉಪಾಧ್ಯಕ್ಷ ಭಾಸ್ಕರಾವ್ ನೆರವೇರಿಸಲಿದ್ದಾರೆ ಎಂದ ಅವರು ದಿನದಿಂದ ದಿನಕ್ಕೆ ಆಮ್ ಆದ್ಮಿ ಪಾರ್ಟಿಗೆ ವಿವಿಧ ವರ್ಗಗಳಿಂದ ಸಾಮಾನ್ಯ ಜನ ಸೇರೆ​‍್ಡಯಾಗುತ್ತಿದ್ದಾರೆ ಎಂದರು.  

    ಮಾಜಿ ಸೈನಿಕ ಸಂಘದ ಗುರ​‍್ಪ ಮಗದುಮ್ ಮಾತನಾಡಿ, ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಇದರಿಂದ ರಾಜ್ಯದ ಜನರ ಮನಸ್ಸಿನಿಂದ ದೂರಾಗುತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮಾಜಿ ಸೈನಿಕರು ಕೂಡ ಪಾರ್ಟಿಗೆ ಸೇರೆ​‍್ಡಯಾಗುತ್ತಾರೆ ಎಂದರು.  

ರಜಾಕ್ ಮುಲ್ಲಾ, ಸಿದ್ಧರಾಜ ಬೋರಾಡೆ, ಶ್ರೀಮಂತ ಸೊಂದಕರ, ಶಿವಮಲ್ಲಪ್ಪ ಕುಳಲಿ, ಆಸೋಕ ಮೆಂಡಿಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ