ಬೆಳಗಾವಿ

ಆಶಾ ಕಾರ್ಯಕರ್ತೆಯರಿಗೆಆರೋಗ್ಯೇತರ ಕೆಲಸದ ಹೊರೆ ಬೇಡ

ಆಶಾ ಕಾರ್ಯಕರ್ತೆಯರಿಗೆಆರೋಗ್ಯೇತರ ಕೆಲಸದ ಹೊರೆ ಬೇಡ

ಲೋಕದರ್ಶನ ವರದಿ 

ಬೆಳಗಾವಿ 06 : ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳನ್ನು ಮನೆ ಮನೆಗೆ ತೆರಳಿ ವಿತರಿಸುವಕಾರ್ಯಕ್ಕೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿರುವ ಆದೇಶವನ್ನುತಕ್ಷಣವೇ ಹಿಂಪಡೆಯಬೇಕುಎಂದು ಆಶಾ ಕಾರ್ಯಕರ್ತೆಯರ ಸಂಘ ಸರ್ಕಾರವನ್ನು ಆಗ್ರಹಿಸಿದೆ.  ಸಂಘದ ಪ್ರಕಾರ, ಆಶಾ ಕಾರ್ಯಕರ್ತೆಯರುಗ್ರಾಮೀಣ ಮತ್ತು ನಗರಆರೋಗ್ಯ ಸೇವೆಗಳ ಬೆನ್ನೆಲುಬಾಗಿದ್ದಾರೆ.

ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು, ಮಕ್ಕಳ ಲಸಿಕಾ ಕಾರ್ಯಕ್ರಮ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಕುಟುಂಬ ಕಲ್ಯಾಣ, ಪೌಷ್ಟಿಕಾಂಶ ಹಾಗೂ ಮನೆ ಮನೆ ಆರೋಗ್ಯ ಭೇಟಿ ಸೇರಿದಂತೆ ಹಲವು ಪ್ರಮುಖಆರೋಗ್ಯ ಸೇವೆಗಳನ್ನು ಪ್ರತಿದಿನ ಕಾಲಮಿತಿಯೊಳಗೆ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಅವರ ಮೇಲೆ ಇಲಾಖೆಯ ಅನೇಕ ಜವಾಬ್ದಾರಿಗಳಿದ್ದು, ಸಾರ್ವಜನಿಕಆರೋಗ್ಯ ಸೇವೆಗಳನ್ನು ನಿರಂತರವಾಗಿಜನರಿಗೆತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.  

ಇಂತಹ ಸಂದರ್ಭದಲ್ಲಿಜಾತಿ ಹಾಗೂ ಆದಾಯ ಪ್ರಮಾಣಪತ್ರಗಳ ಮನೆಮನೆ ವಿತರಣೆಯ ಹೆಚ್ಚುವರಿಜವಾಬ್ದಾರಿಯನ್ನು ವಹಿಸಿರುವುದು ಆಶಾ ಕಾರ್ಯಕರ್ತೆಯರ ಮೂಲ ಕರ್ತವ್ಯಗಳಿಗೆ ಅಡ್ಡಿಯಾಗಲಿದೆಎಂದು ಸಂಘ ಆತಂಕ ವ್ಯಕ್ತಪಡಿಸಿದೆ. ಈ ಕಾರ್ಯಕ್ಕಾಗಿಯಾವುದೇ ಸಂಭಾವನೆ, ಪ್ರಯಾಣ ಭತ್ಯೆಅಥವಾಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ. ಅಲ್ಲದೆ, ಹಲವಾರು ಆಶಾ ಕಾರ್ಯಕರ್ತೆಯರ ಬಳಿ ಸ್ಮಾರ್ಟ್‌ಫೋನ್‌ಇಲ್ಲದಿರುವುದು ಹಾಗೂ ಕೆಲವರಿಗೆಡಿಜಿಟಲ್ ಸಾಧನಗಳನ್ನು ಬಳಸುವಲ್ಲಿ ತಾಂತ್ರಿಕ ತೊಂದರೆಗಳಿರುವುದರಿಂದ ಈ ಕಾರ್ಯವನ್ನು ಸಮರ​‍್ಕವಾಗಿ ನಿರ್ವಹಿಸುವುದುಕಷ್ಟಕರವಾಗಿದೆಎಂದು ತಿಳಿಸಿದೆ.  


ಸುದ್ದಿ ಓದಿ