‘ಲಕ್ಷ್ಮೀ ಬಾಂಬ್’ ಅಲ್ಲ “ಲಕ್ಷ್ಮೀ”
ನವದೆಹಲಿ, ಅ 30 :ಕೆಲ ಸಂಘಟನೆಗಳ ಪ್ರತಿಭಟನೆಗೆ ಮಣಿಯಲಾಗಿದ್ದು, ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್' ಚಿತ್ರದ ಶೀರ್ಷಿಕೆಯನ್ನು ಈಗ 'ಲಕ್ಷ್ಮಿ' ಎಂದು ಬದಲಾಯಿಸಲಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಸಾರ್ವಜನಿಕರ ಕೆಲ ವಿಭಾಗಗಳು ಆಕ್ಷೇಪಣೆ ವ್ಯಕ್ತಪಡಿಸಿದ ನಂತರ 'ಬಾಂಬ್' ಎಂಬ ಪದವನ್ನು ಚಿತ್ರದ ಶೀರ್ಷಿಕೆಯಿಂದ ಕೈಬಿಡಲಾಗಿದೆ ಎಂದು ಹೇಳಲಾಗಿದೆ. ‘ಬಾಂಬ್’ ಪದವನ್ನು ಶೀರ್ಷಿಕೆಯಿಂದ ಕೈಬಿಡಲಾಗಿದೆ, ಶೀರ್ಷಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಜನರ ಭಾವನೆಗಳಿಗೆ ಅನುಗುಣವಾಗಿ ಶೀರ್ಷಿಕೆಯಿಂದ ‘ಬಾಂಬ್’ ಪದವನ್ನು ಬಿಡಲು ನಿರ್ಮಾಪಕರು ಒಪ್ಪಿದ್ದಾರೆ.
ಹಿಂದೂಗಳ ದೇವತೆ ಲಕ್ಷ್ಮೀ ಹೆಸರಿನ ಪಕ್ಕದಲ್ಲಿ ಬಾಂಬ್ ಎಂದು ಬಳಸಿರುವುದು ಸರಿಯಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಹಿಂದೂ ಸೇನಾ ಕಾರ್ಯಕರ್ತರು, ಶೀರ್ಷಿಕೆ ಬದಲಾಗಬೇಕು ಎಂದು ಒತ್ತಾಯಿಸಿದ್ದರು. ಜೊತೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಕೂಡ ಬರೆಯಲಾಗಿತ್ತು. ಒಂದು ವೇಳೆ ಶೀರ್ಷಿಕೆ ಬದಲಾಗದಿದ್ದರೆ ಪ್ರತಿಭಟನೆ ಮಾಡುವುದಾಗಿ ಸಂಘಟನೆ ತಿಳಿಸಿತ್ತು. ಇದೀಗ ಅಂತಿಮವಾಗಿ ಚಿತ್ರತಂಡ ಶೀರ್ಷಿಕೆಯನ್ನು 'ಲಕ್ಷ್ಮೀ ಬಾಂಬ್' ಬದಲು 'ಲಕ್ಷ್ಮೀ' ಎಂದು ಬದಲಿಸಿದೆ. ನಿರ್ಮಾಪಕರಾದ ಅಕ್ಷಯ್ ಕುಮಾರ್, ಶಬಿನಾ ಖಾನ್ ಮತ್ತು ತುಷಾರ್ ಕಪೂರ್ ಚಿತ್ರಕ್ಕಾಗಿ ರಾಘವ ಲಾರೆನ್ಸ್ ನಿರ್ದೇಶಿಸಿದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ.ಕೇಪ್ ಆಫ್ ಗುಡ್ ಫಿಲ್ಮ್ಸ್, ಶಬಿನಾ ಎಂಟರ್‌ಟೈನ್‌ಮೆಂಟ್ ಮತ್ತು ತುಷಾರ್ ಎಂಟರ್‌ಟೈನ್‌ಮೆಂಟ್ ಹೌಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗಿರುವ ಹಾರರ್ ಮಿಶ್ರಿತ ಹಾಸ್ಯ ಚಿತ್ರವು ನವೆಂಬರ್ 9 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.