ನಟ ರಜಿನಿಕಾಂತ್ ಹುಟ್ಟುಹಬ್ಬ –ಪ್ರಧಾನಿ ಶುಭ ಹಾರೈಕೆ
ಚನ್ನೈ, ಡಿ 12 : ಇಂದು ಸೂಪರ್ಸ್ಟಾರ್ ರಜಿನಿಕಾಂತ್ 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ನಟ ರಾಜಕಾರಣಿ ರಜಿನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಪ್ರೀತಿಯ ರಜಿನಿಕಾಂತ್ ಜಿ , ನಿಮಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತೇನೆ, ಆರೋಗ್ಯವಂತರಾಗಿ, ದೀರ್ಘಾಯುಷಿಗಳಾಗಿ ಬಾಳಲೆಂದು ಹಾರೈಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅತ್ತ ಚೆನ್ನೈನಲ್ಲಿ ತಲೈವಾ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರಲು ಬೆಳ್ಳಂಬೆಳಗ್ಗೆ ಅವರ ಮನೆ ಮುಂದೆ ಅಭಿಮಾನಿಗಳ ದಂಡೇ ಹರಿದು ಬಂದಿದೆ.