ಹೂವಿನ ಹಡಗಲಿ

ಭೂ ಮಾಪಕರ ಬೇಡಿಕೆ ಈಡೇರಿಸಲು : ಎಎಪಿ ಪ್ರತಿಭಟನೆ

ಭೂ ಮಾಪಕರ ಬೇಡಿಕೆ ಈಡೇರಿಸಲು : ಎಎಪಿ ಪ್ರತಿಭಟನೆ

ಲೋಕದರ್ಶನ ವರದಿ 

ಹೂವಿನಹಡಗಲಿ  10: ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪರವಾನಗಿ ಭೂ ಮಾಪಕರು 60 ದಿನಗಳಿಂದ  ಮುಷ್ಕರ ಹೂಡಿರುವುದರಿಂದ ಭೂ ಮಾಪನ ಇಲಾಖೆಯ ಎಲ್ಲ ಕೆಲಸಗಳು ಈ ಸ್ಥಗಿತಗೊಂಡಿದೆ ಎಂದು ಆಕ್ಷೇಪಿಸಿ ಅಮ್ ಅದ್ಮಿ ಪಾರ್ಟಿ ನೇತೃತ್ವದಲ್ಲಿ ನಾನಾ ರೈತ ಸಂಘಟನೆಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಕೆ.ಎಂ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಲಾಯಿತು.ಎಎಪಿ ಅಧ್ಯಕ್ಷ ಎನ್‌.ಶ್ರೀಧರನಾಯ್ಕ ಮಾತನಾಡಿ, ’ಭೂ ಮಾಪಕರ ಮುಷ್ಕರದಿಂದ  ಸರ್ವೆ, ಹದ್ದುಬಸ್ತ್‌, ಪೋಡಿ ಸೇರಿದಂತೆ ಇತರ ಕೆಲಸಗಳಿಗೆ ಸಲ್ಲಿಕೆಯಾಗಿರುವ ಎರಡು ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇ ವಾರಿ ಆಗದೇ ಉಳಿದಿವೆ. ಜಮೀನು ಮಾರಾಟ, ಹಕ್ಕು ಬದಲಾವಣೆ ಎಲ್ಲ ಕೆಲಸಗಳಿಗೂ ತೊಡಕು ಉಂಟಾಗಿದೆ. ಸರ್ಕಾರ ಕೂಡಲೇ ಭೂ ಮಾಪಕರ ಬೇಡಿಕೆ ಈಡೇರಿಸಿ ಅವರನ್ನು ಕೆಲಸಕ್ಕೆ ನಿಯೋಜಿಸಬೇಕು, ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಬೇಕು’ ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ಎಚ್‌.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಶಿವರಾಜ ಹೊಳಗುಂದಿ ಮಾತನಾಡಿ, ’ಎರಡು ತಿಂಗಳಿಂದ ಭೂ ಮಾಪನ ಇಲಾಖೆ ರೈತರ ಪಾಲಿಗೆ ಸತ್ತು ಹೋಗಿದೆ. ರೈತರ ಸಮಸ್ಯೆ ಯಾರೂ ಆಲಿಸುತ್ತಿಲ್ಲ ಎಂದು ದೂರಿದರು. ಸರ್ಕಾರ ಕೂಡಲೇ ಭೂ ಮಾಪಕರ ಬೇಡಿಕೆ ಈಡೇರಿಸಿ ಭೂ ಸರ್ವೆ ಕಾರ್ಯಗಳನ್ನು ಮಾಡಿಸಬೇಕು’ ಎಂದು ಒತ್ತಾಯಿಸಿದರು.ಕೆಆರ್‌ಎಸ್ ಪಕ್ಷದ ಮುಖಂಡರಾದ ಚಂದ್ರಶೇಖರ ದೊಡ್ಡಮನಿ, ಸುಭಾನ್ ಹುಗಲೂರು, ಗನಿಸಾಬ್, ಕೆ.ಲಲಿತಮ್ಮ ಕೆ.ಮಂಜುನಾಥ, ಮಂಜುನಾಥ, ಪಕ್ಕೀರ​‍್ಪ, ಬಸವರಾಜ, ಎಚ್‌.ಶಂಭುನಾಥ, ಮಂಜುನಾಯ್ಕ, ಗಿರಿನಾಯ್ಕ,  ಶಿವಾನಂದಪ್ಪ, ಶಂಭುನಾಥ, ನಾಗಪ್ಪ ಇದ್ದರು. 


ಸುದ್ದಿ ಓದಿ