ಶಿಗ್ಗಾವ್

ವೀರಯೋಧ ಪೀರಸಾಬ ನದಾಫ್‌ಗೆ ಆತ್ಮೀಯ ಸ್ವಾಗತ

ವೀರಯೋಧ  ಪೀರಸಾಬ ನದಾಫ್‌ಗೆ ಆತ್ಮೀಯ ಸ್ವಾಗತ

ಶಿಗ್ಗಾವಿ 03 : ತಾಲೂಕಿನ ಕಾಲಕೊಂಡ ಗ್ರಾಮಸ್ಥರು 22 ವರ್ಷಗಳ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ವೀರಯೋಧ ಪೀರಸಾಬ ನದಾಫ್ ಅವರನ್ನು ಪಿಂಜಾರ ಸಮುದಾಯ  ಅಭಿಮಾನಿ ಬಳಗ ಆತ್ಮೀಯವಾಗಿ ಸ್ವಾಗತಿಸಿಕೊಂಡರು. 

ಸವಣೂರ ತಾಲೂಕಿನ ಕಲಿವಾಳ ಗ್ರಾಮದಲ್ಲಿ ಹುಟ್ಟಿದ ಈಗ ಶಿಗ್ಗಾವಿ ಪಟ್ಟಣದಲ್ಲಿ ನೆಲೆಸಿರುವ ವೀರ ಸೇನಾನಿ ಪೀರಸಾಬ ನದಾಫ ಅವರನ್ನು ಶಿಗ್ಗಾವಿ ಪ್ರವಾಸಿ ಮಂದಿರದಲ್ಲಿ ಅತಿಥಿಯಾಗಿ ಮಾತನಾಡಿದ  ಕಾಂಗ್ರೆಸ್ ಪಕ್ಷದ ಮುಖಂಡ ಮಂಜುನಾಥ ಮಣ್ಣಣ್ಣವರ ಕಾರ್ಯ ಸೇವೆಗಳಲ್ಲಿ ಹಲವಾರು ಆದರೆ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಸಿಗುವುದು ಹಲವರಿಗೆ ಮಾತ್ರ ಅದು ಗಡಿ ಕಾಯುವ ಸೇನಾನಿಯ ಕೆಲಸ ಅಂದರೆ ಅತಿ ಕ್ಷಣವು ಜೀವದ ಭಯ ಅದಕ್ಕೆ ಎದೆ ಕೊಟ್ಟು ಮಾಡುವ ಸಾಹಸ ಕೆಲಸ ತಂದೆ ತಾಯಿ ಪತ್ನಿ ಮಕ್ಕಳು ಬಂಧು ಬಳಗ ಎಲ್ಲವೂ ಇದ್ದರೂ ಅವರ ಬಗ್ಗೆ ಚಿಂತಿಸಲು ಸಮಯವು ಇರುವುದಿಲ್ಲ ಜೈ ಜವಾನ್ ಜೈ ಕಿಸಾನ್ ಈ ನಾನುಡಿಗೆ ಯುವಜನತೆ ಗೌರವ ಸಲ್ಲಿಸಲೇಬೇಕು ಗಡಿ ಕಾಯುದಿದ್ದರೆ ಅನ್ನದಾತರು ಅನ್ನ ಬೆಳೆಯದಿದ್ದರೆ ನಮ್ಮ ಬದುಕು ಸಾಧ್ಯವೇ ಇಂತಹ ಕಾರ್ಯಕ್ರಮಗಳಲ್ಲಿ ಸ್ವಯಂ ಪ್ರೇರಿತವಾಗಿ ಭಾಗಿಯಾಗಿ ಗೌರವ ಸಲ್ಲಿಸುವ ಕೆಲಸ ಮಾಡಬೇಕು ನಿವೃತ್ತಿ ಜೀವನ ಸುಖ ಸಮೃದ್ಧಿಯಿಂದ ಇರಲಿ ಎಂದು ಹಾರೈಸಿದರು. 

ಸಂದರ್ಭದಲ್ಲಿ ಹಲವಾರು ಪ್ರಮುಖರು ಮಾತನಾಡಿದರು ಕಾರ್ಯಕ್ರಮದಲ್ಲಿ ವೀರ ಸೇನಾನಿಯ ದಂಪತಿಗಳಿಗೆ ವಿಶೇಷವಾಗಿ ಸವಿ ನೆನಪು ಕೊಟ್ಟು ಗೌರವಿಸಲಾಯಿತು ತಾಲೂಕ ಪಿಂಜಾರ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ನೌಕರ ಬಾಂಧವರು ಕ್ಯಾಲಕೊಂಡ ಗ್ರಾಮದ ಅನೇಕ ಗುರುಹಿರಿಯರು ಯುವಕರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ