ರಾಣೆಬೆನ್ನೂರ

ಶಿಕ್ಷಕ ಅರಿವಿನ ಅಕ್ಷಯ ಪಾತ್ರೆ - ಡಾ.ಆರ್‌.ಎಂ.ಕುಬೇರಪ್ಪಾ

ಶಿಕ್ಷಕ ಅರಿವಿನ ಅಕ್ಷಯ ಪಾತ್ರೆ - ಡಾ.ಆರ್‌.ಎಂ.ಕುಬೇರಪ್ಪಾ

ರಾಣೇಬೆನ್ನೂರು 07: ಶಿಕ್ಷಕ ನಿರಂತರ ಅಧ್ಯಯನ ಶೀಲ , ಜ್ಞಾನದ ಖಣಿಯಾಗಿ ಹಾಗೂ ತಪಸ್ವಿಯಂತೆ ಶಿಕ್ಷಣ ಪಡೆದು ಸಮಾಜಸೇವೆಗೆ ಮುಂದಾಗಬೇಕು, ಸಾಮಾಜಿಕ ಸಾಮರಸ್ಯದ ಜೊತೆಗೆ ತನಗಾಗಿ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯವನ್ನು ಹೊಂದಿ ಆದರ್ಶ ಶಿಕ್ಷಕರಾಗಬೇಕೆಂದು ಬಿ.ಎ.ಜೆ.ಎಸ್‌.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಆರ್ ಎಂ ಕುಬೇರ​‍್ಪರನವರು ಇಂದು ಬಿ.ಎ.ಜೆ.ಎಸ್ ಎಸ್ ಬಿ.ಇಡಿ ಕಾಲೇಜಿನಲ್ಲಿ ನೆಡೆದ ಶಿಕ್ಷಕ ವಿದ್ಯಾರ್ಥಿ ಸಂಘದ ಸಮಾರೋಪ ಹಾಗೂ ದೀಪದಾನ ಸಮಾರಂಭದಲ್ಲಿ ಭಾವೀ ಶಿಕ್ಷಕರಿಗೆ ಶುಭ ಹಾರೈಸಿದರು. 

ಮುಖ್ಯ ಅತಿಥಿಗಳಾಗಿ ಸಮಾರೋಪ ನುಡಿಗಳನ್ನಾಡಿದ ಡಾ. ಎಂ. ರಾಮಮೋಹನ ರಾವ್ ರವರು ಉತ್ತಮ ಶಿಕ್ಷಕ ಭರವಸೆಯ ಪ್ರೇರಕರಾಗಿದ್ದು ಮುಂದಿನ ಪೀಳಿಗೆಯ ನಿರ್ಮಾತೃಗಳಾಗಿರುವುದರಿಂದ ಶಿಕ್ಷಕರು ಪರಿಪೂರ್ಣ ಜ್ಞಾನ ಹೊಂದುವುದರ ಜೊತೆಗೆ ಅತ್ಯುತ್ತಮ ಸಂವಹನ ಕೌಶಲ್ಯವನ್ನು ಒಳಗೊಂಡು ಆದರ್ಶ ಸಮಾಜ ನಿರ್ಮಿಸುವ ದೃಢ ಸಂಕಲ್ಪ ಹೊಂದಬೇಕೆಂದರು. 

ಮುಖ್ಯ ಅತಿಥಿಗಳಾದ ಎಂ. ಚಿರಂಜೀವಿ ಪ್ರಶಿಕ್ಷಣಾರ್ಥಿಗಳು ಸಕಾರಾತ್ಮಕ ಚಿಂತನೆ ಮುಕ್ತ ಕಲಿಕೆಯ ವಾತಾವರಣ ಹಾಗೂ ವಿದ್ಯಾರ್ಥಿಗಳ ಸ್ವ ಸಾಮರ್ಥ್ಯವನ್ನು ಹೊರಸೆಳೆಯುವ ಹಾಗೂ ಕಲಿಕೆಯಲ್ಲಿ ಕುತೂಹಲ ಕೆರಳಿಸುವ ಬೋಧಕರಾಗಬೇಕೆಂದು ಕರೆ ನೀಡಿದರು. 

ಮತ್ತೋರ್ವ ಅತಿಥಿಗಳಾದ ಯಲ್ಲಪ್ಪ ಹೆಚ್ ಕುಡುಪಲಿ ಆದರ್ಶ ಶಿಕ್ಷಕರು ಅನ್ವೇಷಣಾ ಕೌಶಲ್ಯವನ್ನು ಹೊಂದಿ ವಿದ್ಯಾರ್ಥಿಯ ಜ್ಞಾನವನ್ನು ಹೊರಸೆಳೆಯುವ ನವೀನ ತಂತ್ರಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. 

ಕಾರ್ಯಕ್ರಮವನ್ನು ಕುರಿತು ಅತಿಥಿಗಳಾದ ಕೆ. ಕೆ. ಹಾವಿನಾಳ ಶೈಕ್ಷಣಿಕ ಸಲಹೆಗಾರರು ಹಾಗೂ ಸಾಹಿತಿಗಳಾದ ಎಚ್‌. ಎ. ಭಿಕ್ಷಾವರ್ತಿಮಠರವರು ಮಾತನಾಡಿ ಆದರ್ಶ ಸಮಾಜ ನಿರ್ಮಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. 

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕು. ಪ್ರಶಾಂತಕುಮಾರ ಹುಲ್ಲತ್ತಿ, ಕು. ಮೇಘನಾ ಎಸ್ ಮಾಕನೂರ, ಕು. ಚನ್ನವೀರಸ್ವಾಮಿ ಹಿರೇಮಠ ಇವರಿಗೆ ಸನ್ಮಾನಿಸಲಾಯಿತು. 

 ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ.ಎಂ.ಮೃತ್ಯುಂಜಯ ರವರು ಆದರ್ಶ ಸಮಾಜದ ರೂವಾರಿ ಶಿಕ್ಷಕರಾಗಿರುವುದರಿಂದ ಸಮಾಜ ತಿದ್ದುವ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರಿ ಎಂದು ಶುಭ ಹಾರೈಸಿದರು.  

ಈ ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಶಿವಕುಮಾರ ಬಿಸಲಳ್ಳಿ ಉಪನ್ಯಾಸಕರುಗಳಾದ ಎ. ಶಂಕರನಾಯ್ಕ, ಪ್ರೊ. ಪರಶುರಾಮ ಪವಾರ, ಡಾ. ಹೆಚ್‌. ಐ. ಬ್ಯಾಡಗಿ, ಶ್ರೀಕಾಂತ ಗೌಡಶಿವಣ್ಣನವರ, ರಾಜೀವ್ ಕೆ ಎಂ,  ಪ್ರಿಯಾಂಕ ಮಲ್ಲಾಡದ, ಮುತ್ತುರಾಜ ಸಿದ್ದಣ್ಣನವರ, ಚಂದನ ಕಿಚಡಿ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಇದ್ದರು. 

ಪೂಜಾ ಹುಲ್ಲತ್ತಿ ಹಾಗೂ ಭೂಮಿಕಾ ಪ್ರಾರ್ಥಿಸಿದರು, ಭಾರತಿ ಸ್ವಾಗತಿಸಿದರು,  ಪ್ರೊ.ಎ. ಶಂಕರನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಭೂಮಿಕಾ ಎನ್ ಕೆ ವಂದಿಸಿದರು, ನಿರೂಪಣೆಯನ್ನು ಭಾಗ್ಯ ದೇವಗಿರಿಮಠ ಹಾಗೂ ರುಕ್ಮಿಣಿ ನೆರವೇರಿಸಿದರು 

ಸುದ್ದಿ ಓದಿ