ನಾಲ್ಕು ಮಕ್ಕಳನ್ನು ಕೊಂದು, ಪತ್ನಿ ಹಾಗೂ ಮತ್ತೊಂದು ಮಗುವಿಗೆ ಇರಿದ ಪಾಪಿ!
ಸಿವಾನ್, ಡಿಸೆಂಬರ್ 01: ದುರಾತ್ಮನೊಬ್ಬ ತನ್ನ ನಾಲ್ಕು
ಮಕ್ಕಳನ್ನು ಕೊಂದು, ಪತ್ನಿ ಹಾಗೂ ಮತ್ತೊಂದು ಮಗುವಿಗೆ ಇರಿದಿರುವ ಘಟನೆ ಬಿಹಾರದ ಭಗವಾನ್ಪುರ ಪೊಲೀಸ್
ಠಾಣೆ ವ್ಯಾಪ್ತಿಯ ಬಾಲ್ಹಾ ಅಲಿಮಾರ್ದನ್ ಗ್ರಾಮದಲ್ಲಿ ನಡೆದಿದೆ.
ಅವಧೇಶ್ ಚೌಧರಿ ಎಂಬಾತ ತನ್ನ ನಾಲ್ಕು ಮಕ್ಕಳನ್ನು ಹರಿತ ಆಯುಧದಿಂದ ಇರಿದು ಕೊಂದು ಪತ್ನಿ ಮತ್ತು ಇನ್ನೊಂದು ಮಗುವನ್ನು ಗಾಯಗೊಳಿದ ಪಾಪಿ. ಕೆಲವು ವಿವಾದಗಳ ಹಿನ್ನೆಲೆಯಲ್ಲಿ ಅವಧೇಶ್ ಚೌಧರಿ ಅವರ ಪತ್ನಿ ಮತ್ತು ಐದು ಮಕ್ಕಳ ಮೇಲೆ ಮಾರಕ ಆಯುಧದ ಮೂಲಕ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮೃತರಾದ ಮಕ್ಕಳನ್ನು ಜ್ಯೋತಿ ಕುಮಾರಿ (17), ಅಭಿಷೇಕ್ ಕುಮಾರ್ (15), ನಿತೇಶ್ ಕುಮಾರ್ (12) ಮತ್ತು ಮುಖೇಶ್ ಕುಮಾರ್ (07) ಎಂದು ಗುರುತಿಸಲಾಗಿದೆ.
ಚೌಧರಿ ಅವರ ಪತ್ನಿ, ರೀಟಾ ದೇವಿ ಮತ್ತು ಅವರ ಇನ್ನೊಬ್ಬ ಮಗಳು ಅಂಜಲಿ ಕುಮಾರಿ ಗಂಭೀರ ಸ್ಥಿತಿಯಲ್ಲಿದ್ದು, ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏತನ್ಮಧ್ಯೆ, ಪೊಲೀಸರು ಅವೇಶ್ ಚೌಧರಿಯನ್ನು ಬಂಧಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.