ರಾಷ್ಟ್ರೀಯ

ಗಾಂಧಿ ಜಯಂತಿಯಂದು ನ್ಯಾಚುರೋಪತಿ ಕುರಿತು ಸರಣಿ ವೆಬಿನಾರ್‌ ಆಯೋಜನೆ

ಗಾಂಧಿ ಜಯಂತಿಯಂದು ನ್ಯಾಚುರೋಪತಿ ಕುರಿತು ಸರಣಿ ವೆಬಿನಾರ್‌ ಆಯೋಜನೆ

ನವದೆಹಲಿ, ಸೆಪ್ಟೆಂಬರ್ 29: ರಾಷ್ಟ್ರಪತಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನದ ಅಂಗವಾಗಿ ಅ.2ರಿಂದ ನ.18ರವರೆಗೆ ಗಾಂಧಿ ಸಿದ್ಧಾಂತಗಳ ಸ್ವಾವಲಂಬನೆ ಕುರಿತು ಸರಣಿ ವೆಬಿನಾರ್‌ಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆಯುಷ್‌ ಸಚಿವಾಲಯ ತಿಳಿಸಿದೆ. 

ಈ ವೆಬಿನಾರ್‌ಗಳನ್ನು ಆಯುಷ್‌ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ನ್ಯಾಚುರೋಪತಿ ಸಂಸ್ಥೆ (ಎನ್‌ಐಎನ್‌) ಪುಣೆ ಆಯೋಜಿಸಿದೆ. ಈಮೂಲಕ ಸಿಂಪಲ್‌ ನ್ಯಾಚುರೋಪತಿ ವಿಧಾನದ ಮೂಲಕ ಆರೊಗ್ಯ ಕಾಪಾಡಿಕೊಳ್ಳುವ ಕುರಿತು ಜನರಿಗೆ ಮಾಹಿತಿ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. 

ಫೇಸ್‌ಬುಕ್‌ ಲೈವ್ ಕಾರ್ಯಕ್ರಮಗಳು, ಚರ್ಚೆಗಳು ಕೂಡ ನಡೆಸಲಾಗುವುದು ಎಂದು ಅಧಿಕೃತ ಪ್ರಕಟಣೆ ಮಾಹಿತಿ ನೀಡಿದೆ. 

ಇದಕ್ಕೆ ಗಾಂಧಿ ಸಂಶೋಧನಾ ಫೌಂಡೇಷನ್‌ ಸೇರಿದಂತೆ ಜರ್ಮನಿ, ವರ್ಜೀನಿಯಾ, ಅಮೆರಿಕ, ಯುಟಿಎಸ್‌, ಸಿಡ್ನಿ, ಆಸ್ಟ್ರೇಲಿಯಾ ದೇಶಗಳ ಗಾಂಧಿ ಫೌಂಡೇಷನ್‌ ಸದಸ್ಯರು ವೆಬಿನಾರ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುದ್ದಿ ಓದಿ