ಮುಂದಗೋಡ

ಕೆರೆಗೆ ನೀರು ತುಂಬಿಸುವ ಯೋಜನೆ ರೈತರ ಜೇಬು ತುಂಬಿಸುವ ಯೋಜನೆಯಾಗಿದೆ: ಹೆಬ್ಬಾರ

ಕೆರೆಗೆ ನೀರು ತುಂಬಿಸುವ ಯೋಜನೆ ರೈತರ ಜೇಬು ತುಂಬಿಸುವ ಯೋಜನೆಯಾಗಿದೆ: ಹೆಬ್ಬಾರ

ಲೋಕದರ್ಶನ ವರದಿ 

ಮುಂಡಗೋಡ:ಮಾಜಿ ಶಾಸಕರು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಜೇಬು ತುಂಬಿಸುವ ಯೋಜನೆ ಎಂದು ಹೇಳುತ್ತಿದ್ದು ಅವರು ಹೇಳಿದಂತೆ ಈ ಯೋಜನೆ ತಾಲೂಕಿನ ರೈತರ ಜೇಬು ತುಂಬಿಸುವ ಯೋಜನೆಯಾಗಿದೆ ಎಂದು ಶಿವರಾಮ ಹೆಬ್ಬಾರ ಮಾಜಿ ಶಾಸಕರಿಗೆ ಟಾಂಗ್ ನೀಡಿದರು.   

ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರೈತರ ಬದುಕಿಗೆ ಹೊಸರೂಪ ಕೊಡಬೇಕೆಂಬ ನನ್ನ ಇಚ್ಛಾಶಕ್ತಿಗೆ ಯಾರೇ ವಿರೋಧ ಮಾಡಿದರೂ ನಾನು ನನ್ನ ಕಾರ್ಯ ಮಾಡಿಯೇ ತೀರುತ್ತೇನೆ. ಸಾಕಷ್ಟು ರೈತರು ಆರ್ಥಿಕ ಬೆಳೆ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಸಕ್ಕರೆ ಕಾರ್ಖಾನೆಯಿಂದ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತಿದೆ. ತಾಲೂಕಿನ ರೈತರಿಗೆ ಸುಮಾರು 79 ಕೋಟಿ ರೂ. ಜಮಾ ಆಗಿದೆ. ಯಾವುದೆ ಜಾತಿ, ಧರ್ಮ ಎನ್ನದೆ ಬಡವರ ಪರ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ಈ ಬಾರಿ ನಡೆಯುವ ಚುನಾವಣೆ ಕ್ಷೇತ್ರದ ಅಭಿವೃದ್ಧಿಯ ಚುನಾವಣೆಯಾಗಿದ್ದು ಜಾತಿ ಆಧಾರದ ಮೇಲೆ ಚುನಾವಣೆ ನಡೆಯುವುದಿಲ್ಲ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕ್ಷೇತ್ರದಲ್ಲಿ ಶಾಸಕನಾಗಿ ಬಡವರ ಪರ ಕೆಲಸ ಮಾಡಲು ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು.    

 ಗುಡ್ಡಪ್ಪ ಕಾತೂರ ಮಾತನಾಡಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್‌.ಟಿ.ಪಾಟೀಲ ಮಾತನಾಡಿದರು. ನಂತರ ತಾಲೂಕಿನ ಕಾತೂರ, ಹನುಮಾಪುರ, ಚವಡಳ್ಳಿ ಮತ್ತು ಸಾಲಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಭೆ ನಡೆಸಿದರು. 

ಈ ವೇಳೆ ರವಿಗೌಡ ಪಾಟೀಲ, ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ದೇವು ಪಾಟೀಲ, ಸಿದ್ದು ಹಡಪದ, ಮಹೇಶ ಹೊಸಕೊಪ್ಪ, ಹಾಲಪ್ಪ ಕೊಣ್ಣನವರ, ಸಂತೋಷ ತಳವಾರ, ಮಂಜುನಾಥ ಹರಿಜನ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ