ಶಿಗ್ಗಾವ್

ಸಸ್ಯ ಶ್ಯಾಮಲ ಕಾರ್ಯಕ್ರಮದೊಂದಿಗೆ ಪರಿಸರ ಪ್ರೀತಿಯನ್ನು ಪಸರಿಸಿದ ಆಡಳಿತ ವರ್ಗ

ಸಸ್ಯ ಶ್ಯಾಮಲ ಕಾರ್ಯಕ್ರಮದೊಂದಿಗೆ ಪರಿಸರ ಪ್ರೀತಿಯನ್ನು ಪಸರಿಸಿದ  ಆಡಳಿತ ವರ್ಗ

ಶಿಗ್ಗಾವಿ 12:  ತಾಲೂಕಿನ ಹೊಸೂರು ಸರಕಾರಿ ಪ್ರೌಢ ಶಾಲೆಯಲ್ಲಿ ತಾಲೂಕ ಪಂಚಾಯತ, ತಾಲೂಕ ಆಡಳಿತ, ಶಾಲಾ ಶಿಕ್ಷಣ ಇಲಾಖೆ.  ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಸ್ಯ ಶ್ಯಾಮಲ ಶಾಲಾ ಆವರಣದಲ್ಲಿಗಿಡ ನೆಡುವ ಕಾರ್ಯಕ್ರಮ ಅತ್ಯಂತ ಸಡಗರದಿಂದ ನಡೆಯಿತು.  

ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕದಂಡಾಧಿಕಾರಿ ಸಂತೋಷ್ ಹಿರೇಮಠ ನೆರವೇರಿಸಿದರು, ಹಾಗೂ ಮುಖ್ಯ ಅತಿಥಿಗಳಾಗಿ ತಾಲೂಕ ಪಂಚಾಯತ್‌ಕಾರ್ಯ ನಿರ್ವಹಣಾಧಿಕಾರಿ ವಿಶ್ವನಾಥ್ ಹಾಗೂ  ಪ್ರಾಸ್ತಾವಿಕವಾಗಿ  ಕ್ಷೇತ್ರ ಶಿಕ್ಷಣಾಧಿಕಾರಿ ಎಂ .ಬಿ. ಅಂಬಿಗೇರ್  ಮಾತನಾಡಿ ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಪಸರಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದರು. ಹಾಗೂ ಅತಿಥಿಗಳಾಗಿ ಗ್ರಾಮ ಪಂಚಾಯತ್ ಹೊಸೂರ್‌ಅಧ್ಯಕ್ಷ್ಯೆರಾಜೇಶ್ವರಿ ಲಮಾಣಿ, ಮಾಜಿಅಧ್ಯಕ್ಷಅಣ್ಣಪ್ಪ ಲಮಾಣಿ, ಸಾಮಾಜಿಕ ವಲಯ ಉಪ ಅರಣ್ಯಅಧಿಕಾರಿ ಮಂಜುನಾಥ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ .ಡಿ. ಎಮ್ .ಸಿ .ಅಧ್ಯಕ್ಷದಾವಲ್ ಸಾಬ್ ಹುಬ್ಬಳ್ಳಿ ವಹಿಸಿ ಮಾತನಾಡಿದ ಅವರು ಗಿಡಗಳಿಗೆ ನೀರುಣಿಸಿ, ಶಾಲಾ ಆವರಣದಲ್ಲಿಗಿಡ  ನೆಡುವುದರ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟ  ಎಲ್ಲಾ ಅತಿಥಿಗಳು  ಹಾಗೂ ಮಕ್ಕಳಿಗೆ  ಪರಿಸರ ಪ್ರೀತಿ,  ಪರಿಸರ ಕಾಳಜಿ ಮತ್ತು ಪರಿಸರ ಪ್ರಜ್ಞೆಯ ಕುರಿತು ತಿಳುವಳಿಕೆ ನೀಡಿದರು. ಹಾಗೂ ಶಾಲೆಯ ಮುಖ್ಯ ಶಿಕ್ಷಕ ನರಸಿಂಹ ಕೋಮಾರ  ಸ್ವಾಗತಿಸಿದರು.  ಇಲಾಖೆಯ ಅಧಿಕಾರಿಗಳು, ಎಸ್ .ಡಿ .ಎಂ. ಸಿ ಸದಸ್ಯರು, ಊರಿನಗಣ್ಯರು, ಶಿಕ್ಷಕ ವೃಂದ , ಶಾಲಾ ಸಿಬ್ಬಂದಿ ಮತ್ತು ಹತ್ತನೇ ವರ್ಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ