ಹೊಸಪೇಟೆ ನಗರದ ಕೇಂದ್ರ ಸ್ಥಾನದಲ್ಲಿಯೇ ಕಛೇರಿಯನ್ನು ಆರಂಭಿಸುವಂತೆ ಮನವಿ
ಹೊಸಪೇಟೆ : ನೂತನ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ವಕ್ಫ್ ಕಛೇರಿಯನ್ನು ಹೊಸಪೇಟೆ ನಗರದ ಕೇಂದ್ರ ಸ್ಥಾನದಲ್ಲಿಯೇ ಆರಂಭಿಸಬೇಕೆಂದು ಸ್ಥಳೀಯ ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿಯ ಆಧ್ಯಕ್ಷರಾದ ಹೆಚ್.ಎನ್. ಮಹಮ್ಮದ ಇಮಾಮ್ ನಿಯಾಜಿ ರವರ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್. ಮಹ್ಮಮದ ಇಮಾಮ್ ನಿಯಾಜಿ ಯವರು ಮನವಿ ಸಲ್ಲಿಸಿ ಮಾತನಾಡಿ ನೂತನ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ವಕ್ಫ್ ಕಛೇರಿಯನ್ನು ಹೊಸಪೇಟೆ ಕೇಂದ್ರ ಸ್ಥಾನವನ್ನು ಹೊರತು ಪಡಿಸಿ ಕಮಲಾಪುರದಲ್ಲಿ ಕಚೇರಿಯನ್ನು ಆರಂಭಿಸಲಾಗುವುದು ಎಂಬ ಮಾಹಿತಿ ಸಮುದಾಯಕ್ಕೆ ತಿಳಿದುಬಂದಿದ್ದು, ಕಮಲಾಪುರದಲ್ಲಿ ಕಛೇರಿಯನ್ನು ಪ್ರಾರಂಭಿಸುವುದರಿಂದ ಜಿಲ್ಲೆಯ ವ್ಯಾಪ್ತಿಗೆ ಬರುವ ಹರಪನಹಳ್ಳಿ, ಹೂವಿನಹಡಗಲಿ, ಹ.ಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕಿನ ಸಮುದಾಯದ ಸಾರ್ವಜನಿಕರಿಗೆ ಕಛೇರಿ ಕೆಲಸಗಳಿಗೆ ಹೋಗಲು ತುಂಬಾ ಅನಾನೂಕೂಲವಾಗುತ್ತದೆ, ಹೊಸಪೇಟೆ ನಗರದಲ್ಲಿಯೇ ಜಿಲ್ಲಾ ಮಟ್ಟದ ಎಲ್ಲಾ ಕಛೇರಿಗಳು ಇರುವುದರಿಂದ ಜಿಲ್ಲಾ ವಕ್ಫ್ ಕಛೆರಿಯು ಸಹ ಇಲ್ಲಿಯೇ ಆರಂಭಿಸುವುದರಿಂದ ದೂರದ ತಾಲೂಕುಗಳಿಂದ ಬರುವ ಅಲ್ಪಸಂಖ್ಯಾತ ಸಮುದಾಯದವರಿಗೆ ಸಾರಿಗೆಯ ವ್ಯವಸ್ಥೆಯು ಕೂಡ ಬಹಳ ಅನೂಕೂಲಕರವಾಗಿರುತ್ತದೆ ಇಲ್ಲದಿದ್ದರೆ ನಮ್ಮ ಸಮುದಾಯವರಿಗೆ ಕೆಲಸ ಕಾರ್ಯಗಳಿಗೆ ಕಮಲಾಪುರಕ್ಕೆ ಹೋಗಿ ಬರಲು ತುಂಬಾ ತೊಂದರೆಯಾಗುತ್ತದೆ ಹಾಗಾಗಿ ನೂತನ ಜಿಲ್ಲಾ ವಕ್ಫ್ ಕಛೇರಿಯನ್ನು ಕಮಲಾಪುರದಲ್ಲಿ ಆರಂಭಿಸುವುದನ್ನು ಕೈಬಿಟ್ಟು ಹೊಸಪೇಟೆಯ ನಗರದಲ್ಲಿಯೇ ಆರಂಭಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿಯ ಉಪಾಧ್ಯಕ್ಷರಾದ ಎಂ.ಫಿರೋಜ್ ಖಾನ್, ಕಾರ್ಯದರ್ಶಿ ಮೊಹಮ್ಮದ ಅಬೂಬಕರ್, ಖಜಾಂಚಿ ಬಿ.ಅನ್ಸರ್ ಭಾಷಾ, ಸಹ ಕಾರ್ಯದರ್ಶಿ ಡಾ. ಮಹಮ್ಮದ ದರ್ವೇಶ್ ಮೊಹಿದ್ದೀನ್, ಆಡಳಿತ ಮಂಡಳಿಯ ಸದಸ್ಯರಾದ ಬಿ. ಸದ್ದಾಂ ಹುಸೇನ ದರ್ವೇಶ್, ಗುಲಾಮ್ ರಸೂಲ್ ರವರು ಉಪಸ್ಥಿತರಿದ್ದರು.