ಹೊಸಪೇಟೆ

ಕಾರಿಗನೂರು ಗ್ರಾಮಕ್ಕೆ ಸುಸಜ್ಜಿತ ರುದ್ರಭೂಮಿ ಅಭಿವೃದ್ಧಿ ಒದಗಿಸಲು ಮನವಿ

ಕಾರಿಗನೂರು ಗ್ರಾಮಕ್ಕೆ ಸುಸಜ್ಜಿತ ರುದ್ರಭೂಮಿ ಅಭಿವೃದ್ಧಿ ಒದಗಿಸಲು ಮನವಿ

ಹೊಸಪೇಟೆ( ವಿಜಯನಗರ) 12:  ಕಾರಿಗನೂರು ಗ್ರಾಮದಲ್ಲಿ ಶವಸಂಸ್ಕಾರ ಮಾಡಲು ಸಾರ್ವಜನಿಕ ರುದ್ರಭೂಮಿ ಅಭಿವೃದ್ಧಿ ಪಡಿಸುವಂತೆ ಕೋರಿ ದಿ. 12ರಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.  

ಎಲ್ಲಾ ಸಂಘಟನೆಗಳು ಒಕ್ಕಟ್ಟಿನಿಂದ ಸುಮಾರು 6ರಿಂದ 8 ಸಾವಿರ ಜನಸಂಖ್ಯೆ ಇರುವ ಕಾರಿಗನುರು ಗ್ರಾಮದಲ್ಲಿ ಸರ್ವೆ ನಂ : 180/2 ಭೂಮಿಯನ್ನು ತಾವುಗಳೂ ನಮಗೆ ಶವಸಂಸ್ಕಾರ ಮಾಡಲು, ಅಗ್ನಿಸ್ಪರ್ಶ ಮಾಡಲು ಒಂದು ಮನೆಯನ್ನು ನಿರ್ಮಿಸಿ ಅಲ್ಲಿಯೇ ಮರಣ ಪ್ರಮಾಣ ಪತ್ರ ನೊಂದಣಿಯನ್ನು ನೀಡುವ ಸೌಲಭ್ಯ ಕಲ್ಪಿಸಬೇಕು.  

ತಾವುಗಳು ಈ ಸರ್ವೆ ನಂ : 180/2 ರಲ್ಲಿ ತಾವುಗಳು ನಮಗೆ ಭೂಮಿಯನ್ನು ವಶಪಡಿಸಿಕೊಂಡು ಹದ್ದುಬಸ್ತು ಮಾಡಿ ಸುತ್ತಲು ಕಾಂಪೌಂಡ್ ಗೋಡೆ ನಿರ್ಮಿಸಿ ಒಂದು ಬೋರ್‌ವೆಲ್ ಹಾಕಿಸಿ, ತಗ್ಗುಗುಂಡಿಗಳನ್ನು ಮುಚ್ಚಿ ಸುಸಜ್ಜಿತವಾಗಿರುವ ಸಾರ್ವಜನಿಕ ರುದ್ರಭೂಮಿ ನಿರ್ಮಿಸಿ ಕೊಡಬೇಕೆಂದು ಒತ್ತಾಯಿಸಲಾಯಿತು. 

ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ, ಕಾರಿಗನೂರು ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ವಿಜಯನಗರ ಸಾಹಿತ್ಯ ಪರಿಷತ್ತು, ಮಾರೆಮ್ಮ ದೇವಿ ಸೇವಾ ಟ್ರಸ್ಟ್‌, ಆರು ಮತ್ತು ಹತ್ತು ಚಕ್ರಗಳ ಲಾರಿ ಮಾಲೀಕರ ಸಂಘ, ಮಹರ್ಷಿ ವಾಲ್ಮೀಕಿ ನಾಯಕ ಸಂಘ ಕಾರಿಗನೂರು ಸಂಘಟನೆಗಳು ಆಗ್ರಹಿಸಿವೆ.  

ಪಿ.ವೆಂಕಟೇಶ್, ಪರಮೇಶ್ವರ ಗೌಡ, ಗುಜ್ಜಲ್ ಗಣೇಶ್, ಎಸ್‌.ಯರಿಸ್ವಾಮಿ, ಬಾಲುಸಾಬ್, ಹುಲುಗಪ್ಪ, ವದ್ದಟ್ಟಿ ಸುಂಕಪ್ಪ, ಮದುರಚಂದ್ರಶಾಸ್ತ್ರಿ, ಗಂಟೆ ಸೋಮಶೇಖರ, ಬೋಡ ರಾಮಪ್ಪ, ಹೊನ್ನೂರಸ್ವಾಮಿ, ದೊಡ್ಡ ಬಜಾರೆಪ್ಪ, ವಿ.ರಂಗಯ್ಯ, ಇನ್ನು ಮುಂತಾದವರು ಉಪಸ್ಥಿತರಿದ್ದರು, 


ಸುದ್ದಿ ಓದಿ