ಹೊಸಪೇಟೆ

ಗುಂಡಿಯಲಿ ಬಿದ್ದು ಮರಣ ಹೊಂದಿರುವ ಕುಟುಂಬಕ್ಕೆ ನೆರವು ನೀಡುವಂತೆ ಮನವಿ

ಗುಂಡಿಯಲಿ ಬಿದ್ದು ಮರಣ ಹೊಂದಿರುವ ಕುಟುಂಬಕ್ಕೆ  ನೆರವು ನೀಡುವಂತೆ ಮನವಿ

ಹೊಸಪೇಟೆ 28: ಈ ಮೇಲ್ಕಾಣಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಬರುವ 7ನೇ ವಾರ್ಡ್‌ನ ಚಪ್ಪರದಹಳ್ಳಿಯಲ್ಲಿ ವಾಸವಾಗಿರುವ ಅಲೆಮಾರಿ ಸಮುದಾಯಗಳಾದ ಹಂಡಿಜೋಗಿ ಸಮುದಾಯದ ಬಡ ಕುಟುಂಬದವರಾದ ಮಚ್ಚೇಂದ್ರನಾಥ ಹಾಗೂ ಹರ್ಷಿತಾ ಇವರ ಮಗ ವಿರಾಟ್ ಪ್ರಜ್ವಲ್ (04ವರ್ಷ) ಬಾಲಕಂದಮ್ಮ ಇವರ ಮನೆ ಮುಂದೆ ಇರುವ ದಳವಾಯಿಯವರ ಖಾಲಿ ಸೈಟ್‌ನಲ್ಲಿ ಸುಮಾರು 5 ಅಡಿ ಆಳದ ಗುಂಡಿಯಲ್ಲಿ ದಿನಾಂಕ 23ರಂದು ಸಂಜೆ : 04:00 ಗಂಟೆ ಸಮಯದಲ್ಲಿ ಕಾಲುಜಾರಿ ನೀರಿನಲ್ಲಿ ಬಿದ್ದು ಮೃತ ಪಟ್ಟಿರುತ್ತಾನೆ. ಸದ್ರಿ ನೀರು ತುಂಬಿದ ಗುಂಡಿಯ ಬಗ್ಗೆ ಮುಚ್ಚುವಂತೆ ಸ್ಥಳಿಯ ಸಾರ್ವಜನಿಕರು ಹತ್ತಾರು ಬಾರಿ ಸೈಟ್‌ನ ಮಾಲೀಕರಿಗೆ ಮತ್ತು ನಗರಸಭೆಯ ಅಧಿಕಾರಿಗಳಿಗೆ ಹೇಳಿದರೂ ಸೈಟ್‌ನ ಮಾಲೀಕರು ನಿರ್ಲಕ್ಷ ವಹಿಸಿರುತ್ತಾರೆ. ಮಗುವಿನ ಸಾವಿಗೆ ಕಾರಣ ಸೈಟ್‌ನ ಮಾಲೀಕರಾದ ದಳವಾಯಿ ಇವರೇ ನೇರ ಹೊಣೆಗಾರರಾಗಿರುತ್ತಾರೆ.  

ಆದ್ದರಿಂದ ತಾವುಗಳು ಪರಿಶಿಷ್ಟ ಜಾತಿ (ಎಸ್‌.ಸಿ) ಅಲೆಮಾರಿ ಸಮುದಾಯದ ಹಂಡಿಜೋಗಿ ಸಮಾಜ ಬಡ ಕುಟುಂಬದ ಮಗು ಗುಂಡಿಯಲ್ಲಿ ಬಿದ್ದು ಮರಣ ಹೊಂದಿರುವ ಕುಂಬಟಕ್ಕೆ ಘನ ಸರ್ಕಾರದಿಂದ ನೆರವು ಮತ್ತು ಪರಿಹಾರವನ್ನು ಈ ಕೂಡಲೇ ನೀಡುವಂತೆ ಮನವಿ ಮತ್ತು ದಳವಾಯಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಮಾಲೀಕನಿಂದ ಕೂಡ ಪರಿಹಾರವನ್ನು ನೊಂದ ಕುಟುಂಬಕ್ಕೆ ಕೊಡಿಸಬೇಕೆಂದು ವಿಜಯನಗರ ಜಿಲ್ಲೆಯ ಅಲೆಮಾರಿ ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಜಿಲ್ಲಾ ಘಟಕ ಅಧ್ಯಕ್ಷರಾದ ಸಣ್ಣಮಾರೆಪ್ಪ ಮತ್ತು ಸರ್ವ ಪದಾಧಿಕಾರಿಗಳು ತಮ್ಮಲ್ಲಿ ಈ ದೂರನ್ನು ನೀಡುತ್ತಿದ್ದೇವೆ. ಒಂದುವೇಳೆ ನೀವು ಈ ದೂರಿನ ಬಗ್ಗೆ ನಿರ್ಲಕ್ಷ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಉಘ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ.  

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಣ್ಣ ಮಾರೆಪ್ಪರವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು ಹಾಗೂ ಒಕ್ಕೂಟದ ಸದಸ್ಯರು ಮತ್ತು ಪದಾಧಿಕಾರಿಗಳಾದ ಜೆ.ರಮೇಶ್, ಪಕ್ಕೀರ​‍್ಪ ಬಾದಿಗಿ, ರಾಜಕುಮಾರ್, ಡಿ.ಶೇಖರ್, ಕಾಶಿವಿಶ್ವನಾಥ, ಅಂಜಿನಪ್ಪ ಮತ್ತಿತರರು ಭಾಗಿಯಾಗಿ ಮನವಿ ಪತ್ರವನ್ನು ಸಲ್ಲಿಸಿದರು. 


ಸುದ್ದಿ ಓದಿ