ಸಿಂಧಗಿ

ಅಧಿಕಾರಿಗಳ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ

ಅಧಿಕಾರಿಗಳ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ

ಸಿಂದಗಿ 31; ಎಸ್‌.ಸಿ. ಹಾಗೂ ಎಸ್‌.ಟಿ ಸಮುದಾಯಕ್ಕೆ ಮೀಸಲಿದ್ದ ಮನೆಗಳನ್ನು ಅಕ್ರಮವಾಗಿ ಬೇರೆ ವರ್ಗದವರಿಗೆ ಹಂಚಿಕೆ ಮಾಡಿದ ಅಧಿಕಾರಿಗಳ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. 

ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಪಟ್ಟಣಕ್ಕೆ 750 ಮನೆಗಳು ಮತ್ತು ಎಸ್‌.ಸಿ. ಹಾಗೂ ಎಸ್‌.ಟಿ ಪಂಗಡಕ್ಕೆ 181 ಮನೆಗಳು ಮಂಜೂರಾಗಿರುತ್ತವೆ ಆದರೆ ಪುರಸಭೆ ಅಧಿಕಾರಿಗಳು ಹಾಗೂ ಪಟ್ಟಬದ್ಧ ಹಿತಾಸಕ್ತಿವುಳ್ಳ ಜನಪ್ರತಿನಿಧಿಗಳ ದುರಾಡಳಿತದಿಂದ ಎಸ್‌.ಸಿ. ಹಾಗೂ ಎಸ್‌.ಟಿ ಸಮುದಾಯದ ಫಲಾನುಭವಿಗಳಿಗೆ ಮೀಸಲಿದ್ದ ಮನೆಗಳನ್ನು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೇ ಠರಾವು ಪತ್ರದಲ್ಲಿ ಇರುವ ಫಲಾನುಭವಿಗಳೆ ಬೇರೆ ಇದ್ದು ಆನಲೈನನ್ನಲಿ ಆಯ್ಕೆಗೊಂಡ ಫಲಾನುಭವಿಗಳೆ ಬೇರೆ ಇರುತ್ತಾರೆ. ಸಾಮಾನ್ಯ ವರ್ಗದ ಫಲಾನುಭವಿಗಳನ್ನು ನೇರವಾಗಿ ಆಯ್ಕೆ ಮಾಡಿರುತ್ತಾರೆ. ಈ ಘಟನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಮನೆಗಳ ಹಂಚಿಕೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಜಿಲ್ಲಾ ನಗರಾಭಿವೃದ್ಧಿ ಕೋಶ, ಅಧಿಕಾರಿಗಳು ಹಾಗೂ ಈ ಬಗ್ಗೆ ತನಿಖೆ ನಡೆಸಿದ ತನಿಖಾ ತಂಡದಲ್ಲಿ ಹಲವು ಲೋಪ ದೋಷಗಳಿದ್ದು ಸದರೀ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಮಾನ್ಯ ಜಾರಿ ನೀರ್ದೇಶನಾಲಯ ವಿಜಯಪೂರ ಇವರ ನೇತ್ರತ್ವದಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ಮೇಲೂ ಅಟ್ರಾಸಿಟಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಜಿಲ್ಲೆಯಾಧ್ಯಂತ ಕಾನೂನಾತ್ಮಕ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಏಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಸಿದ್ರಾಮ ಆನಗೊಂಡ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಅಶೋಕ ನಾರಾಯಣಪುರ, ರೈತ ಮೋರ್ಚಾ ಮೋರ್ಚಾ ಮಂಡಲ ಅಧ್ಯಕ್ಷ ಪೀರು ಕೇರೂರ, ಹಿಂದುಳಿದ ಮೋರ್ಚಾ ಮಂಡಲ ಅಧ್ಯಕ್ಷ ವಿಠಲ ನಾಯ್ಕಡಿ,  ಜಿಪಂ ಮಾಜಿ ಸದಸ್ಯ ಬಿ.ಆರ್‌.ಯಂಟಮಾನ, ಖಾಜು ಬಂಕಲಗಿ, ಸಿದ್ದು ಪೂಜಾರಿ, ಭೀಮು ಮೇಲಿನಮನಿ, ರವಿ ಯಂಪೂರೆ, ಪುರಸಭೆ ಸದಸ್ಯ ಮಹಾಂತಗೌಡ ಬಿರಾದಾರ, ಬಸವರಾಜ ಐರೋಡಗಿ, ಸಾಯಬಣ್ಣ ದೇವರಮನಿ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ