ವಿಶ್ವಕರ್ಮ ಸಮಾಜಕ್ಕೆ ಸಭಾಭವನ ನಿರ್ಮಿಸಲು ಮನವಿ
ಲೋಕದರ್ಶನ ವರದಿ
ಶಿಗ್ಗಾವಿ 17: ಶಿಗ್ಗಾವಿಯಲ್ಲಿ ವಿಶ್ವಕರ್ಮ ಸಮಾಜಕ್ಕೆ ಸಭಾಭವನ ನಿರ್ಮಿಸಲು ನಿವೇಶನ ನೀಡುವಂತೆ ಭಗವಾನ ವಿಶ್ವಕರ್ಮ ಸಮಾಜ ಹಾವೇರಿ ಜಿಲ್ಲಾಧ್ಯಕ್ಷ ಕಾಳಪ್ಪ ಮಾ ಬಡಿಗೇರ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿಗೆ ಶನಿವಾರ ಮನವಿ ಅರ್ಿಸಲಾಯಿತು.
ಹಾವೇರಿ ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜಕ್ಕೆ ನಿವೇಶನ ನೀಡಲು ಯಾವ ನಾಯಕರು ಇದುವರೆಗೂ ಮುಂದೆ ಬಂದಿಲ್ಲ, ತೀರಾ ಹಿಂದೆ ಉಳಿದ ಸಮಾಜವಾದ ವಿಶ್ವಕರ್ಮ ಸಮಾಜಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಶಿಗ್ಗಾವಿ ಮತ್ತು ಸವಣೂರ ತಾಲೂಕಿನ ಕೇಂದ್ರ ಸ್ಥಳವಾದ ಶಿಗ್ಗಾವಿಯ ಮುಗಳಿ ರಸ್ತೆಯಲ್ಲಿರುವ ಐಟಿಐ ಕಾಲೇಜಿನ ಪಕ್ಕದ ಈಗಾಗಲೇ ಕುರುಬ ಸಮಾಜಕ್ಕೆ ನೀಡಿದ ಜಾಗೆಯ ಪಕ್ಕದಲ್ಲಿಯೆ ವಿಶ್ವಕರ್ಮ ಸಮಾಜಕ್ಕೆ ನಿವೇಶನ ನೀಡಿ ಅನೂಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ವಾಸ್ತು ತಜ್ಞ ಆರ್ ವಿ ಕಮ್ಮಾರ, ಮುಖಂಡರಾದ ಡಿ ಎಸ್ ಮಾಳಗಿ, ಸವಣೂರ ಅಧ್ಯಕ್ಷ ಬಸವರಾಜ ಬಡಿಗೇರ, ಶಿಗ್ಗಾವಿ ಅಧ್ಯಕ್ಷ ದೇವೆಂದ್ರ್ಪ ಬಡಿಗೇರ, ಹಾನಗಲ್ ಅಧ್ಯಕ್ಷ ಮಂಜುನಾಥ ಅರ್ಕಸಾಲಿ, ಹಾನಗಲ್ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಬಡಿಗೇರ ಮುಖಂಡರಾದ ನಾಗರಾಜ ಬಡಿಗೇರ, ಷಣ್ಮುಖ ಬಡಿಗೇರ, ಮೊನೇಶ ಬಡಿಗೇರ, ಪ್ರಶಾಂತ ಬಡಿಗೇರ, ಶಾಂತಪ್ಪ ಬಡಿಗೇರ, ದೇವರಾಜ ಬಡಿಗೇರ, ದೇವೆಂದ್ರ್ಪ ಬಡಿಗೇರ ಉಳಿದ ಮುಖಂಡರು ಇದ್ದರು.