30ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಮನವಿ
ಹೊಸಪೇಟೆ 11: ಕಾರಿಗನೂರು ಭಾಗದಲ್ಲಿ 30ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ದಿ. 11 ರಂದು ಜಿಲ್ಲಾ ಆರೋಗ್ಯಾಧಿಕಾರಿಗಳು, ಹೊಸಪೇಟೆ, ವಿಜಯನಗರ ಜಿಲ್ಲೆ ಇವರಿಗೆ ಮನವಿ ಸಲ್ಲಿಸಲಾಯಿತು.
ಸದರಿ ಮನವಿಯಲ್ಲಿ ವಿನಂತಿಸಿಕೊಂಡಿರುವುದೇನೆಂದರೆ, ಕಾರಿಗನೂರು ಭಾಗದಲ್ಲಿ 30ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಕಾರಣ ಕಾರಿಗನೂರಿನ ಸುತ್ತ ಮುತ್ತ ಇರುವ ಇಂಗಳಿಗಿ, ಶಂಕರನಗರ ಕ್ಯಾಂಪ್, ಸಂಕ್ಲಾಪುರ, ವಡ್ಡರಹಳ್ಳಿ, ವಿನಾಯಕ ನಗರಗಳನ್ನು ಒಳಪಟ್ಟಂತೆ ಸುಮಾರು 50ಸಾವಿರಕ್ಕೂ ಹೆಚ್ಚಿನ ಜನರಿದ್ದು ಇವರೆಲ್ಲರೂ ಕೂಲಿ ಕಾರ್ಮಿಕರೇ ಆಗಿದ್ದು ತಮ್ಮ ದಿನ ನಿತ್ಯದ ಬದುಕು ಧೂಳಿನಲ್ಲಿಯೇ ಕಾಳೆದು, ಜೀವನ ಸಾಗಿಸುತ್ತಿರುವುದರಿಂದ ಸಾಕಷ್ಟು ಜನರಿಗೆ ಅಸ್ತಮಾ, ಕಿಡ್ನಿ, ಹೃದಯ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆಗಳಿಂದ ನರಳುತ್ತಿದ್ದು, ಹಾಗೂ ಅನೇಕ ಖಾಯಿಲೆಗಳಿಂದ ನರಳುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆಗೆ ಬರಬೇಕಾದ ಅನಿವಾರ್ಯತೆ ಇರುವುದರಿಂದ ಸಕಾಲಕ್ಕೆ ಸರಿಯಾದ ಸಾರಿಗೆ ವ್ಯವಸ್ತೆ ಸಿಗದಿರುವುದರಿಂದ ಸಾಕಷ್ಟು ಸಾವು ನೋವುಗಳು ಸಂಭವಿಸಿ ಸಾಕಷ್ಟು ತೊಂದರೆ ಅನುಭವಿಸುವಂತೆ ಆಗಿರುತ್ತದೆ. ಕಾರಣ 30ಹಾಸಿಗೆ ಆಸ್ಪತ್ರೆಯು ಇಲ್ಲಿ ನಿರ್ಮಾಣವಾದರೆ ಬಡವರಿಗೆ, ಶ್ರಮಿಕರಿಗೆ, ಕೂಲಿ ಕಾರ್ಮಿಕರಿಗೆ ತುಂಬಾ ಉಪಯೋಗವಾಗಲಿದೆ, ಕೂಡಲೇ ತಾವುಗಳು ಸಂಬಂಧಪಟ್ಟವರೊಂದಿಗೆ ಸುದೀರ್ಘವಾಗಿ ಚರ್ಚಿಸಿ ನಮಗೆ 30ಹಾಸಿಗೆ ಆಸ್ಪತ್ರೆ ನಿರ್ಮಿಸಬೇಕೆಂದು ಮನವಿಯಲ್ಲಿ ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಿ.ವಿ.ವೆಂಕಟೇಶ್ ವಕೀಲರು, ಗುಜ್ಜಲ್ ಗಣೇಶ್, ಪರಮೇಶ್ವರ ಗೌಡ, ಗಂಟೆ ಸೋಮಶೇಖರ, ಏಸು, ಬೋಡ ರಾಮಣ್ಣ, ಯರಿಸ್ವಾಮಿ, ಚಂದ್ರಶೇಖರ್ ಶಾಸ್ತ್ರಿ, ಸೂಗಪ್ಪ ವದ್ದಟ್ಟಿ, ಸಂಕ್ಲಾಪುರ ಗೋಪಿ, ನಾಗಪ್ಪ, ಸುಂಕಪ್ಪ ಮತ್ತು ಕೊಟ್ರೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.