ಎಲ್ಎಲ್ಸಿ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿ ಹೋದ ವ್ಯಕ್ತಿ
ಬಳ್ಳಾರಿ ಜ 26: ತಾಲೂಕಿನ ಕೆಕೆ ಹಾಳ್ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಗಂಗಾಧರ ಗೌಡ ಅವರ ಸಹೋದರ 43 ವರ್ಷದ ಚಂದ್ರಶೇಖರ್ ಗೌಡ ರೈತ ಬೆಳಿಗ್ಗೆ 11:30ಕ್ಕೆ ಎಲ್ ಎಲ್ ಸಿ ಕಾಲುವೆಗೆ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿರುತ್ತಾನೆ.
ಈ ಘಟನೆ ಸುದ್ದಿ ತಿಳಿದ ತಕ್ಷಣ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರು ಸಂಜೆ 8 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆಗೆ ನಿರಂತರವಾಗಿ ಹುಡುಕಾಟದಲ್ಲಿ ತೊಡಗಿದ್ದರೂ ರೈತ ಪತ್ತೆಯಾಗಿಲ್ಲ. ನಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಇಂದು ಬೆಳಿಗ್ಗೆ 6 ಗಂಟೆಗೆ ಬೋಟ್, ನಿಪುಣ ಈಜುಗಾರರನ್ನು ಮತ್ತು ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕಳುಹಿಸಿ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದರು.
ನಂತರ ಶಾಸಕ ಬಿ.ನಾಗೇಂದ್ರ ಅವರು ರೈತನ ಮನೆಗೆ ಭೇಟಿ ನೀಡಿ, ಸಹೋದರರಾದ ಗಂಗಾಧರ ಗೌಡ ಅವರಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮೋಕಾ ಠಾಣೆಯ ಪಿಎಸ್ಐ ಪರುಶುರಾಮ ಅವರು, ಮೋಕಾ ರೂಪನಗುಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿನ್ನಳ್ಳಿ ಚಂದ್ರಶೇಖರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಅಣ್ಣ ನಾಗರಾಜ್, ಗೋವರ್ಧನ್ ರೆಡ್ಡಿ, ಸಿಂಧುವಾಳ್ ಗಾದಿಲಿಂಗನಗೌಡ, ಬೆಣಕಲ್ ಬಸವರಾಜ್ ಗೌಡ, ಬಿ.ಆರ್.ಎಲ್ ಸೀನಾ, ಕೆ.ಹೊನ್ನಪ್ಪ, ಹಗರಿ ಗೋವಿಂದ, ಶ್ರೀನಾಥ್, ಗೋನಾಳ್ ನಾಗಭೂಷಣ ಗೌಡ, ದುರುಗಣ್ಢ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.