ಕಾಗವಾಡ

ಮಿರಜ್‌ನಲ್ಲಿ ಸೌಂದರ್ಯ ಚಿಕಿತ್ಸೆಯ ಹೊಸ ಅಧ್ಯಾಯ ಪ್ರಾರಂಭ: ಡಾ. ಸುರೇಶಭಾವು ಖಾಡೆ

ಮಿರಜ್‌ನಲ್ಲಿ ಸೌಂದರ್ಯ ಚಿಕಿತ್ಸೆಯ ಹೊಸ ಅಧ್ಯಾಯ ಪ್ರಾರಂಭ: ಡಾ. ಸುರೇಶಭಾವು ಖಾಡೆ

ಕಾಗವಾಡ, 02 : ತಂತ್ರಜ್ಞಾನ ಮತ್ತು ಆಯುರ್ವೇದದ ಸಂಗಮದೊಂದಿಗೆ ಸೌಂದರ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಿರಜ್ ಪಟ್ಟಣದಲ್ಲಿ ಡಾ. ವಿನಾಯಕ ಲೋಕರೆ ಮತ್ತು ಡಾ. ವಿದ್ಯಾ ಲೋಕರೆ ಅವರು ಸೌಂದರ್ಯ ಚಿಕಿತ್ಸೆಗೆ ಹೊಸ ರೂಪ ನೀಡಿದ್ದಾರೆಂದು ಮಿರಜ್‌ನ ಶಾಸಕ ಡಾ. ಸುರೇಶಭಾವು ಖಾಡೆ ತಿಳಿಸಿದ್ದಾರೆ. 

ಅವರು, ಶನಿವಾರ ದಿ. 30 ರಂದು ಮಿರಜ್ ಪಟ್ಟಣದ ಸುಭಾಷ ನಗರದಲ್ಲಿ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜನ್ ಡಾ. ವಿನಾಯಕ ಲೋಕರೆ ಮತ್ತು ಕಾಸ್ಮೆಟಾಲಜಿಸ್ಟ್‌ ಡಾ. ವಿದ್ಯಾ ಲೋಕರೆ ಅವರ ಕಾಸ್ಮೋವರ್ಸ್‌ ಚರ್ಮ, ಕೂದಲು ಮತ್ತು ಲೇಸರ್ ಕ್ಲಿನಿಕ್‌ನ 2ನೇ ಶಾಖೆಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಮಿರಜ್ ಪಟ್ಟಣದಲ್ಲಿ ಅತ್ಯಾಧುನಿಕ ಸೌಂದರ್ಯ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುವುದು ಹೆಮ್ಮೆಯ ವಿಷಯವಾಗಿದೆ. ಮಿರಜ್ ಪಟ್ಟಣದಲ್ಲಿ ಹೊಸ ತಂತ್ರಜ್ಞಾನದ ಆಸ್ಪತ್ರೆಗಳಿಂದ ರೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗುವುದಲ್ಲದೇ ಮಿರಜ್‌ನ ವೈದ್ಯಕೀಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದರು. ಜೊತೆಗೆ ಕಾಸ್ಮೋವರ್ಸ್‌ ತಂಡಕ್ಕೆ ಶುಭ ಹಾರೈಸಿ, ಡಾ. ಲೋಕರೆ ದಂಪತಿಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಶ್ರೀಮತಿ ಸುಮಂತಾಯಿ ಸುರೇಶಭಾವು ಖಾಡೆ, ನಿರಂಜನದಾದಾ ಅವಟಿ, ಪಾಂಡುರಂಗ ಕೋರೆ, ಸಾಮಾಜಿಕ ಕಾರ್ಯಕರ್ತ ಸಂದೀಪದಾದಾ ಸಲಗರ ಸೇರಿದಂತೆ ಮಿರಜ್ ಪಟ್ಟಣದ ಅನೇಕ ಗಣ್ಯರು, ಸಾಮಾಜಿಕ ಕಾರ್ಯಕರ್ತರು ನಾಗರೀಕರು ಉಪಸ್ಥಿತರಿದ್ದರು. ಡಾ. ವಿನಾಯಕ ಲೋಕರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿದ್ಯಾ ಲೋಕರೆ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ