ಮನರಂಜನೆ

ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಶಾದರ್ೂಲ

ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಶಾದರ್ೂಲ

ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಶಾದರ್ೂಲ
ನಾಳೆ ರಾಜ್ಯಾದ್ಯಂತ ತೆರೆಗೆ
ನಿದರ್ೇಶಕ ಅರವಿಂದ್ ಕೌಶಿಕ್ ಆ್ಯಕ್ಷನ್-ಕಟ್ ಹೇಳಿರುವ 'ಶಾದರ್ೂಲ' ಇಂದು ರಾಜ್ಯಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ರಿಲೀಸ್ ಆಗುತ್ತಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಸಿನಿಮಾ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಮೊನ್ನೆಯಷ್ಟೇ ನಡೆದೆ ಸೆಲೆಬ್ರಿಟಿ ಶೋನಲ್ಲಿ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಚಿತ್ರ ಗೆದ್ದೆ ಗೆಲುತ್ತದೆ ಎಂಬ ವಿಶ್ವಾಸದಲ್ಲಿ ತಂಡವಿದೆ. ಅರವಿಂದ್ ಕೌಶಿಕ್ ಈ ಮೊದಲು 'ನಮ್ ಏರಿಯಲ್ಲೊಂದು ದಿನ', 'ತುಘಲಕ್' ಹಾಗೂ 'ಹುಲಿರಾಯ' ಚಿತ್ರಗಳನ್ನು ನಿದರ್ೇಶನ ಮಾಡಿದ್ದರು ಈಗ ಗ್ಯಾಪ್ ತೆಗೆದುಕೊಂಡು ಶಾದರ್ೂಲ ನಿದರ್ೇಶಿಸಿದ್ದಾರೆ. ಶಾದರ್ೂಲಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಅರವಿಂದ್ ಅವರೇ ಬರೆದಿದ್ದಾರೆ.
ಸಿನಿಮಾ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಪತ್ರಿಕಾಗೋಷ್ಠಿ ಆಯೋಜಿಸಿತ್ತು ಚಿತ್ರತಂಡ. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಚೇತನ್ ಚಂದ್ರ 'ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯವೂ ಸೂಪರ್. ಇಂತ ಪ್ಯಾಂಡಮಿಕ್ ಸಮಯದಲ್ಲಿ ಜನರಿಗೆ ಉತ್ತಮ ಮನೋರಂಜನೆ ನೀಡಲು ಇದೇ ಇಪ್ಪತ್ತರಂದು "ಶಾದರ್ೂಲ" ಆಗಮಿಸುತ್ತಿದೆ. ನೀವೆಲ್ಲಾ ನೋಡಿ ಹರಸಿ' ಎಂದು ಹೇಳಿದರು. ನಂತರ 'ತುಂಬಾ ಹೆದರಿಕೆಯುಳ್ಳ ಹುಡುಗಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ದೀಕ್ಷ ಎನ್ನುವುದು ನನ್ನ ಪಾತ್ರದ ಹೆಸರು' ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡ ನಾಯಕಿ ಕೃತಿಕಾ ರವೀಂದ್ರ, ಉತ್ತಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಡಿರುವ "ರಾಬಟರ್್" ಖ್ಯಾತಿಯ ಐಶ್ವರ್ಯ ಪ್ರಸಾದ್, 'ಆ ಚಿತ್ರದ ಪಾತ್ರಕ್ಕೂ, ಈ ಚಿತ್ರದ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ. ಕೃತಿಕಾ ಅವರದು ಹೆದರಿಕೊಳ್ಳುವ ಪಾತ್ರವಾದರೆ, ನನ್ನದು ಬೋಲ್ಡ್ ಹುಡುಗಿ ಪಾತ್ರ'ವೆಂದರು. ಮತ್ತೊಬ್ಬ ಪ್ರಮುಖ ಪಾತ್ರಧಾರಿ ರವಿತೇಜ ತಮ್ಮ ಪಾತ್ರ ಪರಿಚಯ ಮಾಡಿಕೊಳುತ್ತಾ, ಚಿತ್ರೀಕರಣದಲ್ಲಿ ನಡೆದ ಕೆಲವು ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡರು. 'ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇಂತಹ ಸಮಯದಲ್ಲಿ ಪ್ರೇಕ್ಷಕರೆ ನಮ್ಮ ಕೈ ಹಿಡಿಯಬೇಕು. ಕೊರೋನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಬಿಡುಗಡೆ ಮಾಡುತ್ತಿದ್ದೇವೆ. ಯಾವುದೇ ಭಯವಿಲ್ಲದೇ ಚಿತ್ರಮಂದಿರಕ್ಕೆ ಬಂದು ನಮ್ಮ ಚಿತ್ರವನ್ನು ನೋಡಿ ಗೆಲ್ಲಿಸಿ' ಎನ್ನುತ್ತಾರೆ ನಿಮರ್ಾಪಕದ್ವಯರಾದ ರೋಹಿತ್ ಹಾಗೂ ಕಲ್ಯಾಣ್. 'ನನ್ನ ಪಾತ್ರದ ಬಗ್ಗೆ ಎಲ್ಲೂ ರಿವಿಲ್ ಮಾಡಿಲ್ಲ. ಸಿನಿಮಾ ಬಿಡುಗಡೆ ದಿನವೇ ಎಲ್ಲರಿಗೂ ನನ್ನ ಪಾತ್ರದ ಬಗ್ಗೆ ತಿಳಿಯತ್ತದೆ ಎಂದರು ನಟ ನವೀನ್ ಕುಮಾರ್. ಇದೇ ಸಂದರ್ಭದಲ್ಲಿ ಸಂಗೀತ ನಿದರ್ೇಶಕ ಸತೀಶ್ ಬಾಬು ಚಿತ್ರದ ಸಂಗೀತದ ಬಗ್ಗೆ ಮಾತನಾಡಿದರು. ನಿಮರ್ಾಪಕರಾದ ಭಾ.ಮ.ಹರೀಶ್, ಭಾ.ಮ.ಗಿರೀಶ್, ರಿವೈಂಡ್ ಖ್ಯಾತಿಯ ತೇಜ್ ಮೊದಲದವರು ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಭೈರವ ಸಿನಿಮಾಸ್ ಮತ್ತು ಸಿ ವಿ ಆರ್ ಸಿನಿಮಾಸ್ ಲಾಂಛನದಲ್ಲಿ ರೋಹಿತ್ ಶಾಂತಪ್ಪ ಹಾಗೂ ಕಲ್ಯಾಣ್ ಸಿ ನಿಮರ್ಿಸಿರುವ ಈ ಚಿತ್ರಕ್ಕೆ ದೆವ್ವ ಇರಬಹುದ್ದಾ? ಎಂಬ ಅಡಿಬರಹವಿದೆ. ವೈ.ಜಿ.ಆರ್ ಮನು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ ನಿದರ್ೇಶನ, ಶಿವರಾಜ್ ಮೇಹು ಸಂಕಲನ ಹಾಗು ಮಾಸ್ ಮಾದ, ವೈಲೆಂಟ್ ವೇಲು ಮತ್ತು ಅಲ್ಟಿಮೇಟ್ ಶಿವು ಅವರ ಸಾಹಸ ನಿದರ್ೇಶನ ಈ ಚಿತ್ರಕ್ಕಿದೆ. ತಾರಾಗಣದಲ್ಲಿ ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಇದ್ದಾರೆ.  
 

ಸುದ್ದಿ ಓದಿ