ಶಿಗ್ಗಾವ್

ಬಿಜೆಪಿ ಪದಾಧಿಕಾರಿಗಳ, ಕಾರ್ಯಕರ್ತರ ಸಭೆ

ಬಿಜೆಪಿ ಪದಾಧಿಕಾರಿಗಳ, ಕಾರ್ಯಕರ್ತರ ಸಭೆ

ಶಿಗ್ಗಾವಿ 18 : ಕಾಂಗ್ರೆಸ್ ಭ್ರಹ್ಮಾಂಡ ಭ್ರಷ್ಟಾಚಾರ ಅಂದು ಮಾಡಿದ ಪರಿಣಾಮ ದೇಶ ಅಧೋಗತಿಗೆ ಇಳಿದಿತ್ತು, ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಕುಷಿದು ಹೋಗಿತ್ತು ಆಗ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕ್‌ಗಳು ಒಂದು ಸಾವಿರ ಲಕ್ಷ ಕೋಟಿಯಷ್ಟು ಲಾಭದಾಯವಾಗುವಂತೆ ಮಾಡಿ ಪ್ರತಿಯೋಬ್ಬ ಬಡ ವ್ಯಕ್ತಿಗೂ ಕೇಂದ್ರ ಸರಕಾರದ ವಿವಿಧ ಸಾಲ ಸೌಲಭ್ಯಗಳ ಯೋಜನೆಗಳ ಮೂಲಕ ಜನರಿಗೆ ನೀಡಲಾಗುತ್ತಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಹೇಳಿದರು. 

ಪಟ್ಟಣದ ಬಸವರಾಜ ಬೊಮ್ಮಾಯಿಯವರ ನಿವಾಸದ ಸಬಾಭವನದಲ್ಲಿ ಬಿಜೆಪಿ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನ ಜಬರ್ದಸ್ತ್‌ ಆಶೀರ್ವಾದ ಮಾಡಿದ ಪರವಾಗಿ ಮೋದಿಯವರು ಕೇಂದ್ರದಲ್ಲಿ ಮೂರು ಭಲಿಷ್ಟ ಖಾತೆಗಳನ್ನ ನಿಭಾಯಿಸಲು ನನಗೆ ನೀಡಿದರು, ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವ ಪಡೆದಿದೆ, ದೇಶದ ಬದಲಾವಣೆ, ಬಡವರ ಉದ್ದಾರ ಮೋದಿಯವರಿಂದ ಮಾತ್ರ ಸಾದ್ಯ, ದೇಶವನ್ನ ಅವ್ಯವಸ್ಥೆಯ ತಾಣವನ್ನಾಗಿ ಕಾಂಗ್ರೇಸ್ ಮಾಡಿತ್ತು ಅದನ್ನ ಸರಿಪಡಿಸಲು ಮೋದಿಯವರು ಬರಬೇಕಾಯಿತು, ಕಾಂಗ್ರೇಸ್ ನವರು ಸುಳ್ಳು ಬುರುಕರು, ಸುಳ್ಳು ಹೇಳುವ ಪಾರ್ಟಿ ಕಾಂಗ್ರೇಸ್ ಪಾರ್ಟಿಯಾಗಿದೆ, ಕೆಂದ್ರ ಸರಕಾರ ನೀಡಿದ ಅಕ್ಕಿಯನ್ನ ನಾವು ಕೊಟ್ಟಿದ್ದೇವೆ ಎಂದು ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ, ಜಾಗತಿಕ ಮಟ್ಟದಲ್ಲಿ ಭಾರತವನ್ನ ಭಲಿಷ್ಟ ಮಾಡಿದ್ದಲ್ಲದೇ ಬ್ರಷ್ಟಾಚಾರಿಗಳನ್ನ ಅವರ ಮನೆಗೆ ತೆರಳಿ ಬಾಲವನ್ನ ಕಟ್ ಮಾಡಿದ್ದು ಮೋದಿ ಸರಕಾರದ ಸಾಧನೆಯಾಗಿದೆ, ಬೋಮ್ಮಾಯಿಯವರಿಗೆ ಕ್ಷೇತ್ರದ ಜನರ ಆಶೀರ್ವಾದದ ಫಲ ಬಹಳಷ್ಟಿದೆ ನಿಮ್ಮ ಮತದಿಂದ ಶಾಸಕರು, ಸಚಿವರು, ಮುಖ್ಯಮಂತ್ರಿಗಳಾಗಿ ಈಗ ರಾಷ್ಟ್ರ ರಾಜಕಾರಕ್ಕೆ ತೆರಳುತ್ತಿದ್ದಾರೆ, ದೇಶದ ಪರಿವರ್ತನೆಗೆ ಮೋದಿ ಅನಿವಾರ್ಯ ಎಂದರು.  

ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ನನ್ನ ಕ್ಷೇತ್ರದ ಜನರೊಂದಿಗೆ ರಾಜಕೀಯ ಸಂಭಂದವಿಲ್ಲ, ಅದನ್ನೂ ಮೀರಿಸುವ ಸಂಭಂದವಿದೆ, ಕ್ಷೇತ್ರದ ಜನರು ನೀಡಿದ ಪ್ರೀತಿ ಒಂದು ಡಾಕ್ಟರೇಟ್ ಪದವಿಯನ್ನ ಪಡೆಯುವಷ್ಟು ಅನುಭವವನ್ನ ನೀಡಿದ್ದಾರೆ, ಎಲ್ಲಿಯೂ ನಿಮ್ಮಂತ ಪ್ರೀತಿ ನೀಡುವ ಜನ ಸಿಗುವುದಿಲ್ಲ, ಅಧಿಕಾರ ಅರಸಿ ಎಂದಿಗೂ ನಾನು ಹೋದವನಲ್ಲ, ಪಾರ್ಲಿಮೆಂಟರಿ ಬೋರ್ಡಲ್ಲಿ ಬೇರೆ ಯಾರಿಗಾದರೂ ಹಾವೇರಿ ಟಿಕೇಟ್ ಕೊಡಿ ಎಂದು ಹೇಳಿದ್ದೆ, ಭಾರತದ ಭವಿಷ್ಯವನ್ನ ಬಯಸುವ ಮಹಾನ್ ನಾಯಕರಾದ ಮೋದಿಯವರ ತೀರ್ಮಾನ, ನನ್ನನ್ನ ಕಟ್ಟಿ ಹಾಕಿದೆ, ಇದು ಭಾರತ ಮಾತೆಯ ತೀರ್ಮಾನ ಎಂದರು. 

ಭಾವುಕರಾದ ಬೊಮ್ಮಾಯಿ :   ಎಂದಿಗೂ ನನ್ನ ಕ್ಷೇತ್ರವನ್ನ ಮತ್ತು ನನ್ನ ಜನರನ್ನ ಮರೆಯುವುದಿಲ್ಲ, ಕ್ಷೇತ್ರದ ಜನರನ್ನ ನೋಡಿದಾಗ ಸಾಕ್ಷಾತ್ ಪರಮಾತ್ಮನನ್ನ ನೋಡಿದ ಅನುಭವವಾಗುತ್ತದೆ, ನೀವು ನೀಡಿದ ಪ್ರೀತಿಯ ರೊಟ್ಟಿ ನವಣಕ್ಕಿ ಅನ್ನ, ಉಪ್ಪಿಟ್ಟನ್ನ ನಾನು ಎಂದಿಗೂ ಮರೆಯಲು ಸಾದ್ಯವಿಲ್ಲ, ಅಧಿಕಾರ ಹೋದ ಮೇಲೆ ಇದೆ ಮಣ್ಣಲ್ಲಿ ಮಣ್ಣಾಗುತ್ತೇನೆ ಎಂದು ಬೊಮ್ಮಾಯಿ ಭಾವುಕರಾದರು.  

ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಶಿಗ್ಗಾವಿ ಕ್ಷೇತ್ರವನ್ನ ಅಭಿವೃದ್ದಿ ಪಡಿಸಿದಂತೆ ಜಿಲ್ಲೆಯನ್ನ ಅಭಿವೃದ್ದಿ ಪಡಿಸಲು ಅವಕಾಶ ಸಿಕ್ಕಿದೆ ಜೊತೆಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಿ ದೇಶದ ಅಭಿವೃದ್ದಿಯನ್ನ ಬೊಮ್ಮಾಯಿಯವರು ಮಾಡಲಿದ್ದಾರೆ ಎಂದರು. 

ಉದ್ಯಮಿ ಶಶಿಧರ ಯಲಿಗಾರ ಮಾತನಾಡಿ, ನಮ್ಮ ಮೈಯಲ್ಲೂ ಬಿಜೆಪಿ ರಕ್ತವೇ ಹರಿದಿದೆ, ಮೊದಲಿಗಿಂತಲೂ 50 ಸಾವಿರ ಹೆಚ್ಚಿನ ಮತಗಳನ್ನ ಪಡೆದು ಗೆಲ್ಲಲು ಹಾವೇರಿ ಮತ್ತು ಧಾರವಾಡ ಕ್ಷೇತ್ರದ ಅಭ್ಯರ್ಥಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಪ್ರಲ್ಹಾದ್ ಜೋಷಿಯವರನ್ನ ಗೆಲ್ಲಿಸಲು ಮೋದಿಯವರನ್ನ ಮತ್ತೆ ಪ್ರಧಾನಿಯಾಗಿಸಲು ಪಣ ತೊಟ್ಟಿದ್ದೇನೆ ಎಂದರು. 

ಚುನಾವಣಾ ಉಸ್ತುವಾರಿ ಬಸವರಾಜ ಕುಂದಗೋಳಮಠ, ಜೆಡಿಎಸ್ ತಾಲೂಕಾದ್ಯಕ್ಷ ಈರಣ್ಣ ನವಲಗುಂದ, ಮುಖಂಡರಾದ ಬಸವರಾಜ ಕೇಲಗಾರ, ಶಶಿಧರ ಯಲಿಗಾರ, ನರಹರಿ ಕಟ್ಟಿ, ಶಿವಪ್ರಸಾದ ಸುರಗೀಮಠ, ಶೋಭಾ ನಿಸ್ಸಿಮಗೌಡ್ರ, ದೇವಣ್ಣ ಚಾಕಲಬ್ಬಿ, ಸುಭಾಸ್ ಚೌಹಾಣ್, ತಿಪ್ಪಣ್ಣ ಸಾತಣ್ಣವರ, ಡಾ. ಮಲ್ಲೇಶಪ್ಪ ಹರಿಜನ, ಎಸ್ ಕೆ ಅಕ್ಕಿ, ಮಂಜುನಾಥ ಗಾಣಗೇರ, ರುದ್ರಗೌಡ್ರ ಪಾಟೀಲ, ಸುಭಾಸ್ ಗಡ್ಡೆಪ್ಪನವರ, ಹನುಮರೆಡ್ಡಿ ನಡುವಿನಮನಿ, ಬಸವರಾಜ ನಾರಾಯಣಪುರ, ರಮೇಶ ವನಹಳ್ಳಿ, ರೇಣುಕನಗೌಡ ಪಾಟೀಲ, ಸಂಜೀವ ಮಣ್ಣಣ್ಣವರ ಸೇರಿದಂತೆ ವಿವಿಧ ಮುಖಂಡರು, ಪದಾಧಿಕಾರಿಗಳು, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಇದ್ದರು. 

ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಂಗಾಧರ ಬಾಣದ ಸ್ವಾಗತಿಸಿದರು, ಬಸವರಾಜ ನಾರಾಯಣಪೂರ ನಿರ್ವಹಿಸಿದರು. 


ಸುದ್ದಿ ಓದಿ