ಆಕ್ರಮವಾಗಿ ಗಾಂಜಾ ಮಾರಾಟ: ವ್ಯಕ್ತಿ ಬಂಧನ
ಬೈಲಹೊಂಗಲ ಸಪ್ಟೆಂಬರ್ 11- ಆಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ವ್ಯಕ್ತೊಯೋರ್ವನನ್ನು ಬಂಧಿಸಿದ ಘಟನೆ ಪಟ್ಟಣದ ಬಾಯಪಾಸ ರಸ್ತೆಯ ಇಂದಿರಾ ನಗರದ ಬಳಿ ಶುಕ್ರವಾರ ಜರುಗಿದೆ.
ಬಂಧಿತ ವ್ಯಕ್ತಿಯನ್ನು ಜವಳಿಕೂಟದ ಶಿವಾನಂದ ಗುರುಲಿಂಗಯ್ಯ ಕಡಪಟ್ಟಿಮಠ(55) ಎಂದು ಗುರುತಿಸಲಾಗಿದೆ. ಬಂಧಿತನಿಂದ ರೂ. 4 ಸಾವಿರ ಮೌಲ್ಯದ 195 ಗ್ರಾಂ. ಗಾಂಜಾ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಸಹಾಯಕ ಪೊಲೀಸ್ ಅಧೀಕ್ಷಕ ಪ್ರದೀಪ ಗುಂಟಿ, ಸಿಪಿಐ ಉಳವಪ್ಪ ಸಾತೇನಹಳ್ಳಿ ಮಾರ್ಗದರ್ಶನದಲ್ಲಿ ಪಿಎಸ್ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂದಿಗಳಾದ ಎಚ್.ಬಿ.ಮಾಲದಿನ್ನಿ, ಎಂ.ಬಿ.ವಸ್ರ್ತದ, ಎಸ್.ಸಿ. ಕರವೀರನವರ, ಎಸ್.ಯು.ಮಾಡಿ, ಎಲ್.ಬಿ.ಹಮಾಣಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.