ಚಕ್ರ ಬಡ್ಡಿ ಮನ್ನಾ , ಸಾಲಗಾರರಿಗೆ ಕೇಂದ್ರದಿಂದ ಕೊಂಚ ರಿಲೀಫ್
ನವದೆಹಲಿ, ಅಕ್ಟೋಬರ್ 3: ಶಿಕ್ಷಣ, ಮನೆ, ಗ್ರಾಹಕ, ವಾಹನ ಸಾಲಗಳಿಗೆ ಅನ್ವಯವಾಗುವ ಸಾಲದ ಮೇಲಿನ ಚಕ್ರಬಡ್ಡಿ ಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಈ ಮೂಲಕ ಕೇಂದ್ರ ಸಾಲ ಗಾರರಿಗೆ ದೊಡ್ಡ ಪರಿಹಾರ ಘೋಷಿಸಿದೆ. ಎಂಎಸ್ ಎಂಇ ಸಾಲ, ಶಿಕ್ಷಣ, ವಸತಿ, ಗ್ರಾಹಕ, ಆಟೋ, ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಬಳಕೆ ಸಾಲಗಳಿಗೆ ಅನ್ವಯವಾಗುವ ಚಕ್ರಬಡ್ಡಿ (ಬಡ್ಡಿ ಮೇಲಿನ ಬಡ್ಡಿ) ಮನ್ನಾ ಮಾಡಲಾಗುವುದು ಎಂದು ಕೇಂದ್ರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.
ಕರೋನಾ ವೈರಸ್ ಸಾಂಕ್ರಾಮಿಕ ರೋಗ ಕಂಡು ಬಂದ ಸಂದರ್ಭದಲ್ಲಿ ಸರ್ಕಾರ ಬಡ್ಡಿ ಹೊರೆ ಯನ್ನು ಹೊರಬೇಕು ಎಂದು ಕೋರ್ಟ್ ಹೇಳಿತ್ತು ಇದೇ ವೇಳೆ, ಸೂಕ್ತ ಅನುದಾನಕ್ಕೆ ಸಂಸತ್ತಿನಿಂದ ಅನುಮತಿ ಕೋರುವುದಾಗಿ ಹೇಳಿದೆ.
ಇಎಂಐ ಮರುಪಾವತಿ ಮಾಡದ ಸ್ಥಿತಿಯಲ್ಲಿ ಹಲವರು ಇದ್ದರು. ಹೀಗಾಗಿ ಯೇ ಆರು ತಿಂಗಳವರೆಗೆ ಇಎಂಐಗಳನ್ನು ಪಾವತಿಸದಂತೆ ಆರ್ ಬಿಐ ಆದೇಶ ನೀಡಿದೆ.ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯುವವರು ಇನ್ನು ಮುಂದೆ ಬಡ್ಡಿಗೆ ಹೆಚ್ಚುವರಿ ಹಣ ಪಾವತಿಸಬೇಕಿಲ್ಲ. ಆದರೆ ಅಂತಹ ಗ್ರಾಹಕರು ಸಾಲದ ಮೇಲಿನ ಸಾಮಾನ್ಯ ಬಡ್ಡಿಯನ್ನು ಮಾತ್ರ ನೀಡಬೇಕಿದೆ.