ಸಂಕೇಶ್ವರದಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ
ಲೋಕದರ್ಶನ ವರದಿ
ಸಂಕೇಶ್ವರ 05: ಸಂಕೇಶ್ವರದಲ್ಲಿ 67ನೆಯ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಸಂಭ್ರಮ ಮತ್ತು ಸಡಗರಗಳಿಂದ ಆಚರಿಸಲಾಯಿತು. ಇಂದು ದಿ. 5ರಂದು ಮುಂಜಾನೆ 10 ಗಂಟೆಗೆ ಕನ್ನಡ ಧ್ವಜಾರೋಹಣವನ್ನು ನಗರದ ಗಣ್ಯ ವ್ಯಕ್ತಿ, ಮಹಾದಾನಿ, ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ ಇವರು ಕನ್ನಡ ಧ್ವಜಾರೋಹಣದ ಕಾರ್ಯಕ್ರಮವನ್ನು ನೆರವೇರಿಸಿದರು. ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಪೂಜೆಯನ್ನು ಪುರಸಭೆಯ ಆಧ್ಯಕ್ಷೆ ಸೀಮಾ ಬಂಡು ಹತನೂರಿ ಇವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಭುವನೇಶ್ವರಿ ದೇವಿಯ ಮೂರ್ತಿ ಪೂಜೆಯನ್ನು ಪುರಸಭೆಯ ಉಪಾಧ್ಯಕ್ಷ ಅಜಿತ ಕರಜಗಿ ನೆರವೇರಿಸಿದರು.
ರೂಪಕ ಮೆರವಣಿಗೆಗಳ ಕಾರ್ಯಕ್ರಮವನ್ನು ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸುನೀಲ ಅಣ್ಣಾಸಾಹೇಬ ಪರ್ವತರಾವ ಉದ್ಘಾಟಿಸಿದರು. ವೀರರಾಣಿ ಕಿತ್ತೂರು ಚೆನ್ನಮ್ಮ ಭಾವಚಿತ್ರದ ಪೂಜೆಯನ್ನು ಪುರಸಭೆಯ ಸದಸ್ಯೆ ಸುಚಿತಾ ಶ್ರೀಕಾಂತ ಪರೀಟ ನೆರವೇರಿಸಿದರು. ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಪೂಜೆಯನ್ನು ಪುರಸಭೆಯ ಸದಸ್ಯ ಶಿವಾನಂದ ಉರ್ಫ ನಂದು ಮುಡಶಿ ನೆರವೇರಿಸಿದರು. ಭವ್ಯ ವಾದ್ಯಮೇಳಗಳ ಉದ್ಘಾಟನೆಯನ್ನು ನ್ಯಾಯವಾದಿ ವಿಕ್ರಮ ಕರನಿಂಗ ಇವರು ನೆರವೇರಿಸಿದರು. ಭವ್ಯ ಮೆರವಣೆಗೆಗಳ ಚಾಲನೆಯನ್ನು ಪುರಸಭೆಯ ಸದಸ್ಯೆ ಸಂಗೀತಾ ಪ್ರಶಾಂತ ಕೋಳಿ ನೆರವೇರಿಸಿದರು.
ರಾಜ್ಯೋತ್ಸವ ಕಾರ್ಯಕ್ರಮವನ್ನು ಬಲೂನುಗಳನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಇಂದು ಗಾಂಧಿಚೌಕದ ಮುಖಾಂತರ ಭವ್ಯ ಮೆರವಣಿಗೆಯು ಸ್ತಬ್ಧಚಿತ್ರ ರೂಪಕಗಳನ್ನು, ನಾಡು ನುಡಿಗಾಗಿ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಮೊದಲಾದ ಹೋರಾಟಗಾರರ ಕ್ರಾಂತಿಕಾರರ ರೂಪಕಗಳನ್ನು ಪ್ರದರ್ಶಿಸಲಾಯಿತು. ಕನ್ನಡದ ಮೇರು ನಟ, ಕರ್ನಾಟಕರತ್ನ ದಿ. ಪುನೀತ ರಾಜಕುಮಾರ ಇವರ ಭಾವಚಿತ್ರವನ್ನು ಅಭಿಮಾನಿಗಳು ಜಯಕಾರದೊಂದಿಗೆ ಎತ್ತಿ ಕುಣಿದಾಡಿದರು. ಮೆರವಣಿಗೆಯು ಗಾಂಧಿಚೌಕದಿಂದ ಪ್ರಾರಂಭಗೊಂಡು, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ಸಾಗಿತು. ಕೊನೆಗೆ 3 ಗಂಟೆಗೆ ಪುನ: ಗಾಂಧಿಚೌಕದಲ್ಲಿ ಬಂದು ಮುಕ್ತಾಯಗೊಂಡಿತು.
ಸಮಾರಂಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಸಂಜಯ ಶಿರಕೋಳಿ, ರೋಹನ ನೇಸರಿ, ದೀಲೀಪ ಹೊಸಮನಿ, ಚಿದಾನಂದ ಕರದನ್ನವರ, ಡಾ.ಜಯಪ್ರಕಾಶ ಕರಜಗಿ, ಪಿಂಟು ಪರೀಟ, ಸಂತೋಷ ಮುಡಶಿ, ಹಾಗೂ ಈ ರಾಜ್ಯೋತ್ಸವದ ಅಧ್ಯಕ್ಷ ಪ್ರೀತಮ ಸುಮಾರೆ, ಉಪಾಧ್ಯಕ್ಷ ಆನಂದ ಹರಗಾಪೂರೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಮನ್ನಿಕೇರಿ, ಸಂತೋಷ ಆಲತಗಿ, ರಮೇಶ ಅಕ್ಕಿವಾಟೆ, ಮಹೇಶ ದೇಸಾಯಿ, ಲಕ್ಷ್ಮಣ ಬಾನೆ, ಪುರಸಭೆಯ ಮುಖ್ಯಾಧಿಕಾರಿ ರಾಜಶೇಖರ ಚೌಗುಲಾ, ಪುರಸಭೆಯ ಕಿರಿಯ ಅಭಿಯಂತ ರವೀಂದ್ರ ಬ ಗಡಾದ, ಪವನ ರಮೇಶ ಕತ್ತಿ, ಪೃಥ್ವಿ ರಮೇಶ ಕತ್ತಿ, ನಿಖಿಲ ಉಮೇಶ ಕತ್ತಿ, ಶಂಕರರಾವ ಹೆಗಡೆ ಮೊದಲಾದವರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಯುವಕರು ಜಮಾಯಿಸಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಂಗು ತಂದರು. ನಗರದಲ್ಲಿನ ಎಲ್ಲ ಯುವಕರು ನಾಗರಿಕರು ಕನ್ನಡದ ಧ್ವಜವನ್ನು ಹಾರಿಸಿದರು.
ಸಂಕೇಶ್ವರ ಪೋಲೀಸರು ಬಿಗಿ ಬಂದೊಬಸ್ತಿಯನ್ನು ಏರಿ್ಡಸಿದ್ದರು. ಮೆರವಣಿಗೆಯಲ್ಲಿ 16 ರೂಪಕಗಳು ಸ್ತಭ್ಧ ಚಿತ್ರಗಳು ಭಾಗವಹಿಸಿದ್ದವು. ಕುಂಬಾರ ಗಲ್ಲಿಯ ಬಸವೇಶ್ವರ ಯುವಕ ಮಂಡಳ, ಪಾಟೀಲ ಗಲ್ಲಿಯ ಬಸವ ಯುವಕ ಮಂಡಳಗಳು ರಾಜ್ಯೋತ್ಸವದ ಬ್ಯಾನರ್ ಹಾಗೂ ಧ್ವಜಗಳು ನಗರದೆಲ್ಲೆಡೆ ರಾರಾಜಿಸುವಂತೆ ಮಾಡಿದರು.