ಉತ್ತಮ ಬದುಕಿಗೆ ಸ್ವಾಸ್ತ್ಯ ಮನಸ್ಸು ಮುಖ್ಯ : ಡಾ. ಸಿ. ಆರ್. ಚಂದ್ರಶೇಖರ್
ವಿಜಯನಗರ (ಹಂಪಿ) 12: ಸಕಲ ಭಾಗ್ಯಗಳಲ್ಲಿ ಮೀಗಿಲಾದ ಭಾಗ್ಯ ಆರೋಗ್ಯ ಭಾಗ್ಯ ಉತ್ತಮ ಆರೋಗ್ಯ ಪಡೆಯಲು ದೇಹ, ಮನಸ್ಸು, ಇಂದ್ರಿಯ ಮತ್ತು ಆತ್ಮ ಪ್ರಸನ್ನವಾಗಿರಬೇಕು ಎಂದು ಹಿರಿಯ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ರವರು ಅಭಿಪ್ರಾಯ ಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ದಿ. 10ರಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಯೋಜಿಸಿದ್ದ ಸ್ವಾಸ್ತ್ಯ ಬದುಕಿನ ಸೂತ್ರಗಳು ಎಂಬ ವಿಷಯದ ಕುರಿತು ಕನ್ನಡ ವಿಶ್ವವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ ಒಂದು ದಿನದ ತಿಳುವಳಿಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಎಲ್ಲಾ ಚಟುವಟಿಕೆಗೆ ಮನಸ್ಸೇ ಮೂಲ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಾವೇ ಸಂಪಾದಿಸಬೇಕು. ಪೌಷ್ಟಿಕ ಆಹಾರದ ಸೇವನೆ, ಧ್ಯಾನ, ವ್ಯಾಯಾಮ, ಶಿಸ್ತುಬದ್ಧ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನಮ್ಮ ವ್ಯಕ್ತಿವನ್ನು ರೂಪಿಸುವಲ್ಲಿ ಮನಸ್ಸಿನ ಪಾತ್ರ ಹಿರಿದಾದು. ಒಂದೊಂದು ಮನಸ್ಸು ಒಂದು ಸಮುದ್ರ. ಸಮಾಜದಲ್ಲಿ ಎಷ್ಟು ಜನರಿದ್ದಾರೆ ಅಷ್ಟು ವಿಭಿನ್ನ ರೀತಿಯ ಮನಸ್ಸುಗಳಿವೆ. ನಾವು ಬದುಕಿನಲ್ಲಿ ತಿಳಿದೋ ತಿಳಿಯದೆಯೋ ಹಲವಾರು ಚಟಗಳಿಗೆ ಬಲಿಯಾಗಿರುತ್ತೇವೆ, ಹೀಗಾಗಿ ಅವುಗಳಿಂದ ಹೊರಬಂದು ಉತ್ತಮ ಆರೋಗ್ಯವನ್ನು ಹೊಂದಬೇಕಿದೆ. ಮುಂದಿನ ಪೀಳಿಗೆಯನ್ನು ಸ್ವಸ್ತವಾಗಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕ ಡಾ. ವೀರೇಶ ಬಡಿಗೇರ ಅವರು ಮಾತನಾಡುತ್ತ ಸದೃಢವಾದ ದೇಹದಲಿ ಸದೃಢವಾದ ಮನಸ್ಸು ಇರುತ್ತದೆ. ನಮ್ಮ ಬದುಕಿನಲ್ಲಿ ದೇಹ ಮತ್ತು ಮನಸ್ಸಿನ ಸಮತೋಲನ ತುಂಬಾ ಮುಖ್ಯ. ಇಂದಿನ ಯುವಜನಾಂಗ ಋಣಾತ್ಮಕ ಆಲೋಚನೆಗಳನ್ನು ಬಿಟ್ಟು ಸಕರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ಸುಬ್ಬಣ್ಣ ರೈ, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಚಾಲಕ ಡಾ. ಅಮರೇಶ ಯತಗಲ್ ಅವರು ಸ್ವಾಗತಿಸಿದರು. ಮಾಹಿತಿ ಕೇಂದ್ರದ ಉಪನಿರ್ದೇಶಕ ಡಾ. ಡಿ. ಮೀನಾಕ್ಷಿಯವರು ನಿರೂಪಿಸಿದರು