ಸೌಂದತ್ತಿ

ಈ ಬಾರಿ ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಣೆ: ಜಕ್ಕನಗೌಡರ

ಈ ಬಾರಿ ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಣೆ: ಜಕ್ಕನಗೌಡರ

ಶಾಲಾ ಮಕ್ಕಳಿಂದ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮ ಹರ್ ಘರ್ ತಿರಂಗದಡಿ ಎಲ್ಲ ಶಾಲಾ ಕಾಲೇಜು, ಸರಕಾರಿ ಕಟ್ಟಡಗಳ ಮೇಲೆ ಅ.13, 14 ರಂದು ಧ್ವಜಾರೋಹಣ

ಸವದತ್ತಿ 04: ಇಲ್ಲಿನ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ತಾಲೂಕಾಡಳಿತದಿಂದ 75 ನೇ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆ ಜರುಗಿತು.

ತಹಶೀಲ್ದಾರ ಜಿ.ಬಿ. ಜಕ್ಕನಗೌಡರ ಮಾತನಾಡಿ, ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಅದ್ದೂರಿ ಸಮಾರಂಭಗಳು ಜರುಗಿಲ್ಲ. ಸದ್ಯ ಸೊಂಕಿನ ಆರ್ಭಟ ಕ್ಷೀಣಿಸಿದ್ದು, 2020ರ ಮೊದಲಿನ ಹಾಗೆ ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಿಸಲು ಎಲ್ಲ ಇಲಾಖೆಯ ಸಹಕಾರ ಅತ್ಯಗತ್ಯ. ಶಾಲಾ ಮಕ್ಕಳಿಂದ ಮನರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. 

ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗದಡಿ ಎಲ್ಲ ಶಾಲಾ ಕಾಲೇಜು, ಸರಕಾರಿ ಕಟ್ಟಡದಲ್ಲಿ ಅ.13, 14 ರಂದು ಸೂಯರ್ೋದಯದಿಂದ ಸೂಯರ್ಾಸ್ತವರೆಗೆ ಧ್ವಜಾರೋಹಣ ನೆರವೇರಿಸಲಾಗುವುದು. ಅ. 15 ರಂದು ಮುಂಜಾನೆ 8 ಗಂಟೆಗೆ ತಹಶೀಲ್ದಾರ ಕಚೇರಿಯಿಂದ ಆರಂಭವಾಗುವ ಪ್ರಭಾತಫೇರಿ ಆನಿ ಅಗಸಿ, ಕಟಕೋಳ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಎಸ್.ಕೆ ಹೈಸ್ಕೂಲ್ ಮೈದಾನಕ್ಕೆ ತಲುಪಿ ಸಾರ್ವಜನಿಕ ಧ್ವಜಾರೋಹಣ ನೆರೆವೇರುವುದು. ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದರು.

ಸಿಪಿಐ ಕರುಣೇಶಗೌಡ ಜೆ ಮಾತನಾಡಿ, ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಅಚಾತುರ್ಯ ನಡೆಯದಂತೆ ಇಲಾಖೆ ಕ್ರಮವಿರಿಸುತ್ತದೆ. ಪ್ರತಿಬಾರಿಯೂ ಒಂದೇ ದಿನ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿತ್ತು. ಈ ಬಾರಿ 75 ನೇ ವಷರ್ಾಚರಣೆ ನಿಮಿತ್ಯವಾಗಿ ದೇಶಾದ್ಯಂತ 3 ದಿನಗಳವರೆಗೆ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಲಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ತಿಳಿಸಿದರು. 

ಈ ವೇಳೆ ಯಶವಂತಕುಮಾರ, ಎಸ್.ಸಿ. ಕರೀಕಟ್ಟಿ, ಎಮ್.ವಿ. ಗುಂಡಪ್ಪಗೋಳ, ಶಂಕರ ಅಂತರಗಟ್ಟಿ, ಶ್ರೀಶೈಲ ಅಕ್ಕಿ, ಆರ್.ಆರ್. ಕುಲಕಣರ್ಿ, ವಿಜಯ ವನಕೆ, ಎಚ್.ಸಿ. ತಳವಾರ, ಎಸ್.ವಿ ಪಾಟೀಲ, ಪಿ.ಎಮ್. ಚನ್ನಪ್ಪನವರ, ಹಾಗೂ ತಾಲೂಕಾಡಳಿತದ ಅಧಿಕಾರಿಗಳಿದ್ದರು 

ಸುದ್ದಿ ಓದಿ