ರಾಷ್ಟ್ರೀಯ

ಅಪಘಾತ: ಗ್ರಾಮ ಲೆಕ್ಕಿಗ ಯುವತಿ ಸಾವು

ಅಪಘಾತ: ಗ್ರಾಮ ಲೆಕ್ಕಿಗ ಯುವತಿ ಸಾವು

ಶಿವಮೊಗ್ಗ, ನವೆಂಬರ್ 19: ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾ‌ಮ

ಗ್ರಾಮ ಲೆಕ್ಕಿಗ ಯುವತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ರಸ್ತೆಯ ತಾಳಗುಪ್ಪ ಸಮೀಪದ ಆಲಳ್ಳಿ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಮೃತರನ್ನು ಉಷಾ (22) ಎಂದು ಗುರುತಿಸಲಾಗಿದೆ.

ಸಾಗರದ ವಿನೋಬಾ ನಗರ ನಿವಾಸಿಯಾಗಿದ್ದ ಉಷಾ ಸೊರಬ ತಾಲೂಕಿನ ಹಚ್ಚೆ ಗ್ರಾಮದ  ಸಿದ್ದಾಪುರದಲ್ಲಿ ಗ್ರಾಮ ಲೆಕ್ಕಿಗರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಎದುರಿನಿಂದ ವೇಗವಾಗಿ ಬಂದ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಕಾರು ಸ್ಕೂಟರ್ ಗೆ ಡಿಕ್ಕಿಹೊಡೆದಿದೆ. ಪರಿಣಾಮ ಸ್ಕೂಟರ್ ನಲ್ಲಿದ್ದ ಯುವತಿ ಉಷಾಳ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ ತಲೆಗೆ ಪೆಟ್ಟಾಗಿದೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸುದ್ದಿ ಓದಿ