ರಾಷ್ಟ್ರೀಯ

ಕೋವಿಡ್ ಲಸಿಕೆ ದಾಸ್ತಾನಿಗೆ ಸಾಮಾನ್ಯ ರಿಫ್ರಿಜರೇಟರ್ ಸಾಕು

ಕೋವಿಡ್  ಲಸಿಕೆ  ದಾಸ್ತಾನಿಗೆ  ಸಾಮಾನ್ಯ ರಿಫ್ರಿಜರೇಟರ್  ಸಾಕು

ನವದೆಹಲಿ, 18: ಭಾರತದಲ್ಲಿ  ಲಭಿಸಲಿರುವ   ಕೋವಿಡ್ -19 ಲಸಿಕೆಗಳನ್ನು ಸುರಕ್ಷಿತವಾಗಿ  ಶೇಖರಿಸಲು  2-8 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುವ ಸಾಮಾನ್ಯ ರೆಫ್ರಿಜರೇಟರ್‌ಗಳು ಸಾಕಷ್ಟಿವೆ ಎಂದು ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ   ಸಮುದಾಯ ಔಷಧ ವಿಭಾಗದ ನಿರ್ದೇಶಕ ಡಾ.ಸುನೀಲಾ ಗರ್ಗ್ ತಿಳಿಸಿದ್ದಾರೆ.

'ಮೊಡರ್ನಾ ತನ್ನ  ಲಸಿಕೆಗಳ ದಾಸ್ತಾನಿಗೆ  -20 ಡಿಗ್ರಿ ಸೆಲ್ಸಿಯಸ್‌  ಉಷ್ಣಾಂಶ ಪೂರೈಸಬೇಕು ಎಂದು ಹೇಳುತ್ತಿದೆ.  ಆದರೆ, ಸಾಮಾನ್ಯ ರೆಫ್ರಿಜರೇಟರ್ ನಲ್ಲಿ  2-8 ಡಿಗ್ರಿ ಸೆಲ್ಸಿಯಸ್   ಉಷ್ಣಾಂಶದಲ್ಲಿ 30 ದಿನಗಳವರೆಗೆ ಸಂಗ್ರಹಿಸಬಹುದು. ಝೈಡಸ್ ಕ್ಯಾಡಿಲ್ಲಾ  ಹಾಗೂ  ಇತರ ಕಂಪನಿಗಳು ಅಭಿವೃದ್ಧಿಪಡಿಸಿದ ಲಸಿಕೆಗಳು ಇದೇ  ತಾಪಮಾನದಲ್ಲಿ ಸುರಕ್ಷಿತವಾಗಿರಲಿವೆ ಎಂದು ಗಾರ್ಗ್ ಹೇಳಿದ್ದಾರೆ.  ಫಿಜರ್ ಅಭಿವೃದ್ಧಿ  ಪಡಿಸುತ್ತಿರುವ ಲಸಿಕೆಯನ್ನು -80 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬೇಕು ಎಂದು ಹೇಳುತ್ತದೆ,  ಭಾರತದಲ್ಲಿ  ಲಭ್ಯವಿರುವ ಶೀತಲ ಸರಪಳಿ  ಪರಿಗಣಿಸಿದರೆ  ಈ  ಸೌಲಭ್ಯ  ಕಲ್ಪಿಸುವುದು  ಕಷ್ಟ ಎಂದು ಅವರು ಹೇಳಿದ್ದಾರೆ.

'ಭಾರತಕ್ಕೆ 82.8 ಕೋಟಿ ಜನಸಂಖ್ಯೆಗೆ  ಆರಂಭದಲ್ಲಿ  170 ಕೋಟಿ ಡೋಸ್ ಕೋವಿಡ್ -19 ಲಸಿಕೆ ಬೇಕು. ಒಟ್ಟು 138 ಕೋಟಿ ಜನಸಂಖ್ಯೆಯಲ್ಲಿ, 14 ವರ್ಷಕ್ಕಿಂತ ಮೇಲ್ಪಟ್ಟವರು  ಶೇ 80ರಷ್ಟಿದ್ದಾರೆ. 2021 ರ ಹೊತ್ತಿಗೆ,  ಶೇ 25 ರಷ್ಟು  ಜನರಲ್ಲಿ   ಕೋವಿಡ್  ಪ್ರತಿಕಾಯಗಳು   ಅಭಿವೃದ್ಧಿಯಾಗಲಿವೆ. ಉಳಿದ 82.8 ಕೋಟಿ ಜನರಿಗೆ ಎರಡು ಹಂತಗಳಲ್ಲಿ ಲಸಿಕೆ ಹಾಕಬೇಕಾಗುತ್ತದೆ ಎಂದು ಸುನಿಲಾ ಗರ್ಗ್ ಹೇಳಿದ್ದಾರೆ.  ಕೋವಿಡ್ -19 ಲಸಿಕೆಯ ಸೂಕ್ಷ್ಮತೆಯ ದೃಷ್ಟಿಯಿಂದ,  ಅವುಗಳನ್ನು  ಕೋಲ್ಡ್ ಸ್ಟೋರೇಜ್‌ಗಳಿಂದ  ಬಳಕೆದಾರರಿಗೆ  ತಲುಪಿಸಲು ಸರಿಯಾದ ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಅವರು ಹೇಳಿದ್ದಾರೆ.

 ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ - ಸಂರಕ್ಷಣಾ ಕೇಂದ್ರಗಳನ್ನು ಲಸಿಕೆ ಸಂಗ್ರಹಿಸಲು  ಬಳಸಿಕೊಳ್ಳಬೇಕು. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಈ  ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಿವಿಧ  ನರ್ಸಿಂಗ್  ಸಂಘಗಳನ್ನು  ಸಹ ಈ ಪ್ರಕ್ರಿಯೆಯಲ್ಲಿ  ತೊಡಗಿಸಿಕೊಳ್ಳಬೇಕಾಗುತ್ತದೆ  ಎಂದು ಗಾರ್ಗ್ ವಿವರಿಸಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ  ಕೋಲ್ಡ್ ಸ್ಟೋರೇಜ್‌ ಗಳ    ದೇಶಾದ್ಯಂತ  ವೇಗವಾಗಿ ಲಸಿಕೆ ಪೂರೈಕೆಗಾಗಿ ಮಾತುಕತೆ ನಡೆಸುತ್ತಿದೆ  ಎಂದು ಆರೋಗ್ಯ ಸಚಿವಾಲಯ  ಅಧಿಕಾರಿಗಳು ತಿಳಿಸಿವೆ.

ಸುದ್ದಿ ಓದಿ