ಶಿಗ್ಗಾವ್

ಪುರಸಭೆಯಲ್ಲಿ ಜರುಗಿದ ಸಾಮಾನ್ಯ ಸಭೆ

ಪುರಸಭೆಯಲ್ಲಿ ಜರುಗಿದ ಸಾಮಾನ್ಯ ಸಭೆ

ಶಿಗ್ಗಾವಿ 12: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತಾರೂಢ ಕೆಲವು ಬಿಜೆಪಿ ಸದಸ್ಯರ ವೈಯಕ್ತಿಕ ಹಿತಾಸಕ್ತಿಯ ದೂರ್ನಡತೆ ಖಂಡಿಸಿದ ಕಾಂಗ್ರೆಸ್ ಪಕ್ಷದ ಪುರಸಭೆ ವಿರೋಧ ಪಕ್ಷದ ನಾಯಕ ಗೌಸಖಾನ ಮುನಶಿ ಮುಖ್ಯಮಂತ್ರಿಗಳ ಹೆಸರಿಗೆ ಧಕ್ಕೆ ತರಬೇಡಿ ಮತ್ತು ಪುರಸಭೆಗೆ ಕೆಟ್ಟ ಹೆಸರು ತರಬೇಡಿ ಎಂದು ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು. 

ಪುರಸಭೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಜನಸಾಮಾನ್ಯರ ಸಮಸ್ಯೆ ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡದೆ ಕೇವಲ ಕೆಲವು ಬಿಜೆಪಿ ಸದಸ್ಯರು ವೈಯಕ್ತಿಕ ಹಿತಾಸಕ್ತಿಯ ಆರೋಪ ಪ್ರತ್ಯಾರೋಪ ಹಾಗೂ ಜೀವ ಭಯ ಇದೆ ಎಂದು ಪೊಲೀಸ್ ಜೊತೆ ಆಗಮಿಸಿದ ಬಿಜೆಪಿ ಸದಸ್ಯರ ವ್ಯಕ್ತಿತ್ವ ಜನರ ಸಮಸ್ಯೆ ಆಲಿಸುವ ಜವಾಬ್ದಾರಿ ನಮ್ಮದಾಗಿದ್ದು ಮುಖ್ಯಮಂತ್ರಿ ಮತಕ್ಷೇತ್ರದ ಬಿಜೆಪಿಯ ಸದಸ್ಯರಾಗಿದ್ದು ನಿಮ್ಮ ವ್ಯಕ್ತಿಗೆ ಹಿತಾಸಕ್ತಿಗೆ ಜನರ ಸಮಸ್ಯೆಗೆ ಚರ್ಚೆಗೆ ತೊಂದರೆ ಕೊಡಬೇಡಿ ಎಂದರು. 

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಪುರಸಭೆ ಸದಸ್ಯೆ ವಸಂತ ಬಾಗೂರ ಬಿಜೆಪಿ ಸದಸ್ಯರು  ಆರೋಪ ಪ್ರತ್ಯಾರೋಪ ಪುರಸಭೆಗೆ ತಳಕು ಹಾಕಬೇಡಿ ಇಲ್ಲಿ ಮಹಿಳಾ ಸದಸ್ಯರು ಇದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ ಇದು ಮುಖ್ಯಮಂತ್ರಿ ಮತಕ್ಷೇತ್ರದ ಬಿಜೆಪಿ ಆಡಳಿತ ರೂಢ ಪಕ್ಷದ ಕೆಲವು ಸದಸ್ಯರ ವರ್ತನೆ ವ್ಯಾಪಖಂಡನಿಗೆ ಗುರಿಯಾಗಿದೆ ಎಂದು ಹೇಳಬಹುದು. 


ಸುದ್ದಿ ಓದಿ