ಹದಿನೈದು ದಿನಗಳ ಕಾರ್ಯಕ್ರಮ ಸ್ವಚ್ಛತಾ ಹೀ ಸೇವಾ ಆಂದೋಲನ
ಶಿಗ್ಗಾವಿ 04: ಸ್ವಚ್ಛ ಭಾರತ ಮೀಷನ್ಯೋಜನೆಯಡಿ ಕೇಂದ್ರಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗ್ರಾಮೀಣ ಪ್ರದೇಶದ ಸಂಪೂರ್ಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಕಳೆದ ಹದಿನೈದು ದಿನಗಳ ಕಾರ್ಯಕ್ರಮ ಸ್ವಚ್ಛತಾ ಹೀ ಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಣಾಧಿಕಾರಿ ಪಿ.ವಿಶ್ವನಾಥ ಹೇಳಿದರು.
ತಾಲೂಕಿನ ಕೋಣನಕೇರಿ ಗ್ರಾಮ ಪಂಚಾಯತಿ ಕಾರ್ಯಲಯದ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಹೀ ಸೇವಾ ಆಂದೋಲನಯ ಕಾರ್ಯಕ್ರಮ ಹಾಗೂ ಮಹಾತ್ಮಾಗಾಂಧಿ ಜಯಂತಿ ಅಂಗವಾಗಿ ಅವರು ಮಾತನಾಡಿದ ಅವರು ತಾಲೂಕಿನ 28 ಪಂಚಾಯತಿ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾರ್ಯಕ್ರಮವನ್ನು ಆಂದೋಲನ ರೀತಿಯಲ್ಲಿ ಸುಧಾರಣೆ ಅಭಿಯಾನ ಮಾಡಲಾಗುತ್ತಿದೆ. ಜನಸಾಮಾನ್ಯರಿಗೂ ಅರಿವು ಮೂಡಿಸುವ ಹಾಗೂ ಪಾಲ್ಗೊಳ್ಳುವ ಮೂಲಕ ಗ್ರಾಮದ ಜನಸಾಮಾನ್ಯರೂ ಸ್ವಇಚ್ಛೆಯಿಂದ ಸ್ವಯಂ ಸೇವಕರಂತೆ ಭಾಗವಹಿಸಿ ಅರಿವು ಮೂಡಿಸಲಾಗುತ್ತಿದೆ. ಗ್ರಾಮ ಪ್ರದೇಶದ ಬೀದಿಗಳನ್ನು ಶಾಲಾ ಆವರಣಗಳನ್ನು ಸ್ವಚ್ಛತೆಯ ಶ್ರಮದಾನ ಬಗ್ಗೆ ಜನರಿಗೆ ಪ್ರತಿಜ್ಞೆ ಕೈಗೊಳ್ಳಲಾಗಿದೆಎಂದರು
ಜೆ.ಎಂಎಫ್.ಸಿ ನ್ಯಾಯಾಲಯದ ಕಿರಿಯ ದಿವಾಣಿ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂತ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಅಧಿಕಾರಿ ಪ್ರಕಾಶ ಓಂಧಕರ, ನ್ಯಾಯವಾದಿ ಬಸವರಾಜರಾಗಿ, ವಿಸಿ ಪಾಟೀಲ, ಎನ್.ಎನ್. ಮಲ್ಲಾಡದ, ಪಂಚಾಯತಿ ಅಧ್ಯಕ್ಷೆ ಬಸೋಬಿ ಗೌಸುಸಾಬ್ ಗೌಳಿ, ಉಪಾಧ್ಯಕ್ಷ ಹನುಮಂತಪ್ಪ ತೆಮ್ಮಿನಕೊಪ್ಪ ಹಾಗೂ ಸ್ವ ಸಹಾಯ ಗುಂಪುಗಳ ಸದಸ್ಯರು ಪಂಚಾಯತಿ ಸರ್ವ ಸದಸ್ಯರು ಸಿಬ್ಬಂಧಿಗಳು ಪಾಲ್ಗೊಂಡಿದ್ದರು.