ಮುಂದಗೋಡ

ಮನೆ ಮೇಲೆ ಇನ್ನೂ ಹಾರಾಡುತ್ತಿರುವ ಧ್ವಜ

ಮನೆ ಮೇಲೆ ಇನ್ನೂ ಹಾರಾಡುತ್ತಿರುವ ಧ್ವಜ

ಲೋಕದರ್ಶನ ವರದಿ 

ಮುಂಡಗೋಡ:ಹರ್ ಘರ್ ತಿರಂಗಾ ಅಭಿಯಾನ ಮುಗಿದು ಎರಡು ದಿನಗಳು ಕಳೆದರೂ ಪಟ್ಟಣದ ಕೆಲವು ಮನೆಗಳ ಮೇಲೆ ರಾಷ್ಟ್ರಧ್ವಜಗಳು ಇನ್ನೂ ಹಾರಾಡುತ್ತಿರುವುದು ಸ್ಥಳೀಯರಲ್ಲಿ ಮತ್ತು ದೇಶಪ್ರೇಮಿಗಳಲ್ಲಿ ಆಶ್ಚರ್ಯ ಮೂಡಿಸಿದೆ.  

ಸರ್ಕಾರದ ಆದೇಶದಂತೆ ಆ.13ರಂದು ಬೆಳಗ್ಗೆ ಧ್ವಜ ಕಟ್ಟಿ ಆ.15ರಂದು ಸಂಜೆ ತೆರವುಗೊಳಿಸಬೇಕಾಗಿತ್ತು. ಅದರಂತೆ ಅನೇಕ ಜನರು ಮತ್ತು ಏನೂ ಅರಿಯದ ಅನಕ್ಷರಸ್ಥರೂ ಆ.15ರಂದು ಸಂಜೆ ಧ್ವಜ ತೆರವುಗೊಳಿಸಿದ್ದರು. ಆದರೆ ಇನ್ನೂ ಕೆಲವರು ತಮ್ಮ ಮನೆಗಳ ಮೇಲೆ ಧ್ವಜಗಳನ್ನು ತೆರವುಗೊಳಿಸದೆ ಹಾಗೆಯೇ ಬಿಟ್ಟಿದ್ದಾರೆ. ಅದರಲ್ಲಿಯೂ ಪ್ರಜ್ಞಾವಂತ ರಾಜಕೀಯ ಮುಖಂಡರೊಬ್ಬರ ಮನೆ ಮೇಲೆ ಬುಧವಾರವೂ ಧ್ವಜ ಹಾರಾಡುತ್ತಿರುವುದು ಕಂಡು ಬಂತು.   

ಧ್ವಜ ಹಾರಿಸಲು ಪಾಲಿಸಬೇಕಾದ ನಿಯಮಗಳ ಸೂಚನಾ ಪತ್ರಗಳನ್ನು ಧ್ವಜಗಳ ಜೊತೆ ಪಟ್ಟಣ ಪಂಚಾಯತನವರು ಸಾರ್ವಜನಿಕರಿಗೆ ನೀಡಿದ್ದರು. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಪ.ಪಂ.ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದರು. 

ಶಂಕರ ಗೌಡಿ, ತಹಶೀಲ್ದಾರ: ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಹೇಳಿ ಧ್ವಜಗಳನ್ನು ತೆರವುಗೊಳಿಸಲಾಗುವುದು. 


ಸುದ್ದಿ ಓದಿ